May 2024

ಹೆಚ್ಚಾದ ಉಷ್ಣ ಗಾಳಿ/ ತೆಲಂಗಾಣದಲ್ಲಿ ಮತದಾನದ ಅವಧಿ ವಿಸ್ತರಣೆ

ಸಮಗ್ರ ನ್ಯೂಸ್: ಉಷ್ಣಗಾಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಯ ಮತದಾನದ ಅವಧಿಯನ್ನು ಚುನಾವಣಾ ಆಯೋಗವು 1 ಗಂಟೆಗಳ ಕಾಲ ವಿಸ್ತರಿಸಿದೆ. ಏಳು ಹಂತದ ಚುನಾವಣೆಯ ನಾಲ್ಕನೇ ಸುತ್ತಿನಲ್ಲಿ ರಾಜ್ಯದ ಎಲ್ಲಾ 17 ಲೋಕಸಭಾ ಕ್ಷೇತ್ರಗಳಿಗೆ ಮೇ 13 ರಂದು ಮತದಾನ ನಡೆಯಲಿದ್ದು, ಹೊಸ ಸಮಯವು ಮುಂಚಿನ 7 ರಿಂದ ಸಂಜೆ 5 ರವರೆಗೆ ಬದಲಾಗಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಇರಲಿದೆ. . ವಿಸ್ತ್ರತ ಮತದಾನದ ಸಮಯವು 12 ಲೋಕಸಭಾ ಕ್ಷೇತ್ರಗಳ ಎಲ್ಲಾ […]

ಹೆಚ್ಚಾದ ಉಷ್ಣ ಗಾಳಿ/ ತೆಲಂಗಾಣದಲ್ಲಿ ಮತದಾನದ ಅವಧಿ ವಿಸ್ತರಣೆ Read More »

ಮೋದಿ ವಿರುದ್ಧ ಹಾಸ್ಯನಟ ಶ್ಯಾಮ್ ರಂಗೀಲಾ ಸ್ಪರ್ಧೆ

ಸಮಗ್ರ ನ್ಯೂಸ್: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹಾಸ್ಯನಟ ಶ್ಯಾಮ್ ರಂಗೀಲಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೇನೆ. ನಿಮ್ಮಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿ, ಬೆಂಬಲದಿಂದ ನಾನು ಉತ್ಸುಕನಾಗಿದ್ದೇನೆ. ನಾಮಪತ್ರ ಸಲ್ಲಿಕೆ ಹಾಗೂ ಮುಂದಿನ ಮಾಹಿತಿಗಳ ಬಗ್ಗೆ ವೀಡಿಯೋ ಸಂದೇಶಗಳ ಮೂಲಕ ನಿಮಗೆ ತಿಳಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ.

ಮೋದಿ ವಿರುದ್ಧ ಹಾಸ್ಯನಟ ಶ್ಯಾಮ್ ರಂಗೀಲಾ ಸ್ಪರ್ಧೆ Read More »

ಶಾಸ್ತ್ರಗಳನ್ನು ಪೂರೈಸದ ಮದುವೆಗೆ ಮಾನ್ಯತೆ ಇಲ್ಲ/ ಸ್ಪಷ್ಟಪಡಿಸಿದ ಸುಪ್ರೀಂ

ಸಮಗ್ರ ನ್ಯೂಸ್: ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೂರೈಸದೆ ನಡೆಸುವ ಮದುವೆಗೆ ಕಾನೂನಿನ ಮಾನ್ಯತೆಯೇ ಇಲ್ಲ. ಅಲ್ಲದೆ ಇಂಥ ಆಚರಣೆಗಳಿಲ್ಲದೆ ಮಾಡಿಸುವ ಮದುವೆ ನೋಂದಣಿ ಕೂಡಾ ಮದುವೆಗೆ ಮಾನ್ಯತೆ ದೊರಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೈಲಟ್ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಅಗಾಸ್ಟಿನ್ ಜಾರ್ಜ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ಹಿಂದೂ ವಿವಾಹವೆಂದರೆ ಅದು ಹಾಡು, ನೃತ್ಯ, ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕøತಿ ಸಂಸ್ಕಾರ ಎಂಬುದು

ಶಾಸ್ತ್ರಗಳನ್ನು ಪೂರೈಸದ ಮದುವೆಗೆ ಮಾನ್ಯತೆ ಇಲ್ಲ/ ಸ್ಪಷ್ಟಪಡಿಸಿದ ಸುಪ್ರೀಂ Read More »

ಆಂಧ್ರಪ್ರದೇಶ: ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ದುಡ್ಡು ಕಳ್ಳತನ

ಸಮಗ್ರ ನ್ಯೂಸ್‌ : ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ದುಡ್ಡು ಕಳ್ಳತನವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಡೋಲು ಪಟ್ಟಣದ ಟೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೀರುವಿನ ಲಾಕರ್‌ಗಳಲ್ಲಿ ಇರಿಸಲಾಗಿದ್ದ 5.63 ಲಕ್ಷ ರೂ ನಾಪತ್ತೆಯಾಗಿದೆ. ಲಕ್ಷ ಲಕ್ಷ ನಗದು ನಾಪತ್ತೆಯಾಗಿದ್ದರೂ ಕೂಡ ಬೀರುವಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಬೀಗಗಳು ಇದ್ದಂತೆಯೇ ಇದ್ದುದ್ದರಿಂದ ಇದು ಹೊರಗಿನವರ ಕೆಲಸವಲ್ಲ, ಠಾಣೆಯ ಒಳಗಿನವರ ಕೆಲಸ ಎಂದು ಸ್ಪಷ್ಟವಾಗಿದೆ. ಈ ವೇಳೆ ತನಿಖೆ ನಡೆಸಿದಾಗ ಬೀರುವಿನಲ್ಲಿದ್ದ ಹಣವನ್ನು ಗೃಹರಕ್ಷಕ ದಳದ

ಆಂಧ್ರಪ್ರದೇಶ: ಪೊಲೀಸ್ ಠಾಣೆಯಲ್ಲೇ ಲಕ್ಷ ಲಕ್ಷ ದುಡ್ಡು ಕಳ್ಳತನ Read More »

ವೇಷ ಕಳಚುವಾಗ ಹೃದಯಾಘಾತ| ಹಿರಿಯ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಸಾವು

ಸಮಗ್ರ ನ್ಯೂಸ್: ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (59 ವರ್ಷ) ನಿಧನರಾದರು. ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿರುವಾಗ ಅವರಿಗೆ ತೀವ್ರ ಹೃದಯಾಘಾತವಾಗಿ, ಮೃತಪಟ್ಟಿದ್ದಾರೆ. ನಾರಾಯಣ ಮಯ್ಯ ಮತ್ತು ಲಕ್ಷ್ಮಿ ದಂಪತಿಯ ಪುತ್ರನಾಗಿ 1964ರಲ್ಲಿ ಪುತ್ತೂರು ತಾಲ್ಲೂಕಿನ ಸೇಡಿಯಾಪು ಮನೆಯಲ್ಲಿ ಜನಿಸಿದ ಅವರು,

ವೇಷ ಕಳಚುವಾಗ ಹೃದಯಾಘಾತ| ಹಿರಿಯ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಸಾವು Read More »

ನವದೆಹಲಿ: ದುಷ್ಕರ್ಮಿಗಳಿಂದ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿ ಮುಖದ ಮೇಲೆ ಬ್ಲೇಡ್‌ನಿಂದ ಹಲ್ಲೆ

ಸಮಗ್ರ ನ್ಯೂಸ್‌ : ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯ ಮುಖದ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ದೆಹಲಿಯ ಗುಲಾಬಿ ಬಾಗ್ ಟೈಪ್-1 CO-ED ಸರ್ವೋದಯ ವಿದ್ಯಾಲಯದಲ್ಲಿ ನಡೆದಿದೆ. ದುಷ್ಕರ್ಮಿಗಳು ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿದ್ದಾರೆ. ಕೆನ್ನೆ ಮೇಲೆ ಕುಯ್ದುದಿದ್ದರಿಂದ ಸಾಕಷ್ಟು ರಕ್ತ ಹೋಗುತ್ತಲೇ ಇದೆ. ನೋವು ತಾಳಲಾರದೇ ವಿದ್ಯಾರ್ಥಿನಿಯು ಕಿರುಚಿಕೊಂಡು ಅಳುತ್ತಿದ್ದಾಳೆ. ಅಲ್ಲದೇ ಆಕೆಯ ಗೆಳೆತಿಯರು ಕೂಡ ಗಾಬರಿಗೊಂಡಿದ್ದಾರೆ. ಸದ್ಯ ಇದನ್ನು ಅಲ್ಲಿದ್ದ ಮಹಿಳೆಯೊಬ್ಬರು

ನವದೆಹಲಿ: ದುಷ್ಕರ್ಮಿಗಳಿಂದ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿ ಮುಖದ ಮೇಲೆ ಬ್ಲೇಡ್‌ನಿಂದ ಹಲ್ಲೆ Read More »

ಲೋಕಸಭೆ ಚುನಾವಣೆ ಪ್ರಚಾರ – ಇಂದು ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಭೇಟಿ

ಸಮಗ್ರ ನ್ಯೂಸ್‌ : ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕೈ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ. ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು, ಅವರ ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ), ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ತಿಳಿದು

ಲೋಕಸಭೆ ಚುನಾವಣೆ ಪ್ರಚಾರ – ಇಂದು ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಭೇಟಿ Read More »

ನವದೆಹಲಿ : ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ: ಸುಪ್ರೀಂ

ಸಮಗ್ರ ನ್ಯೂಸ್‌ : ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಅಂದರೆ ಕೇವಲ ಸಂಗೀತ, ನೃತ್ಯ ಸಂಭ್ರಮ ಅಲ್ಲ ಅಥವಾ ವ್ಯವಹಾರ ಅಲ್ಲ. ಕೆಲವು ವಿಧಿ ವಿಧಾನಗಳು, ಸಂಪ್ರದಾಯಗಳ ಮೂಲಕ ನಡೆದರೆ ಮಾತ್ರ ವಿವಾಹಕ್ಕೆ ಮಾನ್ಯತೆ ಇರುತ್ತದೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಈ ವಿಧಿವಿಧಾನಗಳು, ಸಂಪ್ರದಾಯಗಳು ನಡೆದರೆ ಮಾತ್ರ ಮದುವೆಗೆ ಮಾನ್ಯತೆ ದೊರೆಯುತ್ತದೆ ಎಂದು ಕೋರ್ಟ್‌ ಹೇಳಿದೆ. ಇತ್ತೀಚೆಗೆ ಇಬ್ಬರು ಪೈಲಟ್‌

ನವದೆಹಲಿ : ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ: ಸುಪ್ರೀಂ Read More »

ಹುಬ್ಬಳ್ಳಿ: ನೇಹಾ ಕುಟುಂಬವನ್ನು ಭೇಟಿಯಾದ ಅಮಿತ್ ಶಾ: ನ್ಯಾಯ ದೊರಕಿಸಿಕೊಡುವಂತೆ ಮನವಿ

ಸಮಗ್ರ ನ್ಯೂಸ್‌ : ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹತ್ಯೆಗೀಡಾದ ನೇಹಾ ಕುಟುಂಬವನ್ನು ನಿನ್ನೆ ಅಮಿತ್ ಶಾ ಅವರು ಭೇಟಿ ಮಾಡಿ ಸಾಂತ್ವಾನ ತಿಳಿಸಿದರು. ಅವರು ಹುಬ್ಬಳ್ಳಿಗೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರ ಪ್ರಚಾರಕ್ಕೆಂದು ಬುಧವಾರ ಆಗಮಿಸಿದ್ದ ವೇಳೆ ನೇಹಾ ತಂದೆ-ತಾಯಿ ನ್ಯಾಯ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗಿದೆ. ನೇಹಾ ತಂದೆ ನಿರಂಜನ್ ಹಿರೇಮಠ ಅವರು, ತಾವೊಬ್ಬ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದರೂ ಮಗಳ ಹತ್ಯೆ ಪ್ರಕರಣದಲ್ಲಿ ಸರಿಯಾಗಿ ನ್ಯಾಯ ದಕ್ಕಿಸಿಕೊಳ್ಳಲು

ಹುಬ್ಬಳ್ಳಿ: ನೇಹಾ ಕುಟುಂಬವನ್ನು ಭೇಟಿಯಾದ ಅಮಿತ್ ಶಾ: ನ್ಯಾಯ ದೊರಕಿಸಿಕೊಡುವಂತೆ ಮನವಿ Read More »

ಮನೆ ನಿವೇಶನಕ್ಕಾಗಿ ಸುಮಾರು 2,400 ಎಕರೆ ಕಾಫಿ ಎಸ್ಟೇಟ್ ಪರಿವರ್ತನೆ ಆರೋಪ| ತನಿಖೆಗೆ CNC ಒತ್ತಾಯ

ಸಮಗ್ರ ನ್ಯೂಸ್:ಕೊಡಗು ಜಿಲ್ಲೆಯ ಸಿದ್ದಾಪುರ ಬಳಿ ಸುಮಾರು 2,400 ಎಕರೆ ಕಾಫಿ ಎಸ್ಟೇಟ್ ನ್ನು ವಸತಿ ನಿವೇಶಕ್ಕಾಗಿ ಪರಿವರ್ತನೆ ಆರೋಪವನ್ನು ಕೊಡವ ರಾಷ್ಟ್ರೀಯ ಸಮಿತಿ (ಸಿಎನ್ ಸಿ) ಖಂಡಿಸಿದೆ. ಇಷ್ಟು ದೊಡ್ಡ ಪ್ರಮಾಣದ ಭೂಪರಿವರ್ತನೆಯನ್ನು ನಿಷೇಧಿಸುವಂತೆ ಕೋರುವ ಮನವಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತಿತರ ರಾಜ್ಯಗಳಿಗೆ ಸಮಿತಿ ರವಾನಿಸಿದೆ. ಸಿದ್ದಾಪುರದ ಕಾವೇರಿ ಜಲಾನಯನ ಸಮೀಪವಿರುವ 2,400 ಎಕರೆ ಖಾಸಗಿ ಬಿಬಿಟಿಸಿ ಕಾಫಿ ಎಸ್ಟೇಟ್ ನ್ನು ಶೀಘ್ರದಲ್ಲೇ ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದೆ. ಹಸಿರು ಹೊದಿಕೆಯನ್ನು

ಮನೆ ನಿವೇಶನಕ್ಕಾಗಿ ಸುಮಾರು 2,400 ಎಕರೆ ಕಾಫಿ ಎಸ್ಟೇಟ್ ಪರಿವರ್ತನೆ ಆರೋಪ| ತನಿಖೆಗೆ CNC ಒತ್ತಾಯ Read More »