May 2024

ಅಂದು ನಾನು ಉಚ್ಚಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ| ರಘುಪತಿ ಭಟ್ಗೆ ಆಲಿಯಾ ಟಾಂಗ್

ಸಮಗ್ರ ನ್ಯೂಸ್: ಹಿಜಾಬ್ ವಿವಾದ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಗಲಾಟೆಯಲ್ಲಿ ಮುಂದುವರೆದಿತ್ತು. ಅದರಲ್ಲೂ ಉಡುಪಿ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ಭಾರೀ ಸುದ್ದಿಯಾಗಿತ್ತು. ಈ ಹಿಜಾಬ್ ವಿವಾದದ ಸಂಬಂಧ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ಅದೇ ಸಮಯದಲ್ಲಿ ರಘುಪತಿ ಭಟ್ ಅವರು ಶಾಸಕರಾಗಿದ್ದು, ಕಾಲೇಜಿನ ಅಧ್ಯಕ್ಷರಾಗಿದ್ದರು ಸಹ ಆಗಿದ್ದರು. ಇದೀಗ ಕಾಲೇಜಿನಿಂದ ಉಚ್ಚಾಟನೆಯಾಗಿದ್ದ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಸದ್ಯ ಮಾಜಿ ಶಾಸಕ ರಘುಪತಿ ಭಟ್‌ ಪಕ್ಷದಿಂದ ಉಚ್ಚಾಟನೆಯಾಗಿರುವ ಬಗ್ಗೆ ಟ್ವೀಟ್‌ ಮಾಡಿ […]

ಅಂದು ನಾನು ಉಚ್ಚಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ| ರಘುಪತಿ ಭಟ್ಗೆ ಆಲಿಯಾ ಟಾಂಗ್ Read More »

ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ..!

ಸಮಗ್ರ ನ್ಯೂಸ್: ಪೆನ್ ಡ್ರೈವ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಸೋಮವಾರ ದಿಡೀರ್ ವಿಡಿಯೋ ಮುಖಾಂತರ ಪ್ರತ್ಯಕ್ಷರಾಗಿದ್ದಾರೆ. ಆಗ ಮೇ 31ಕ್ಕೆ ಭಾರತಕ್ಕೆ ಬರುವುದಾಗಿ ಮಾಹಿತಿ ನೀಡಿದ್ದರು, ಈಗ ಜರ್ಮನಿಯಿಂದ ವಾಪಸ್ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ತನಿಖೆ ನಡೆಸುವ ಎಸ್ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ

ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ..! Read More »

ತುಮಕೂರು: ಪತ್ನಿಯನ್ನು ಕೊಲೆಗೈದು ಚರ್ಮ ಸುಲಿದ ಕ್ರೂರಿ ಪತಿ…!

ಸಮಗ್ರ ನ್ಯೂಸ್: ದೆಹಲಿಯಲ್ಲಿ ಶ್ರಧ್ಧಾ ವಾಕರ್ ಭೀಕರ ಕೊಲೆ ಪ್ರಕರಣ ಇಡೀ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಆದರೆ ಇದೇ ತರಹದ ಘಟನೆ ತುಮಕೂರಿನ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿ ಪತ್ನಿಯ ಕತ್ತು ಹಾಗೂ ದೇಹದ ಇತರ ಅಂಗಾಂಗಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (32), ಮೃತ ದುರ್ದೈವಿ. ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾಗಿದ್ದ ಶಿವರಾಮ್ ಎಂಬಾತನೇ ಕೃತ್ಯ

ತುಮಕೂರು: ಪತ್ನಿಯನ್ನು ಕೊಲೆಗೈದು ಚರ್ಮ ಸುಲಿದ ಕ್ರೂರಿ ಪತಿ…! Read More »

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ

ಸಮಗ್ರ ನ್ಯೂಸ್: ಶತ್ರುಗಳ ಮೇಲೆ ದಾಳಿಗೆ ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್‍ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿರುವ ಹೊತ್ತಿನಲ್ಲಿ, ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮಥ್ರ್ಯ ಹೊಂದಿರುವ ಅತ್ಯಾಧುನಿಕ ರೋಬೋಟ್ ನಾಯಿಗಳನ್ನು ಅಭಿವೃದ್ಧಿಪಡಿಸಿದೆ. ಕಳೆದ ಕೆಲ ದಿನಗಳಿಂದ ತೈವಾನ್ ಸುತ್ತಮುತ್ತಲೂ ಭಾರೀ ಪ್ರಮಾಣದ ನೌಕಾ ಕಸರತ್ತು ನಡೆಸುತ್ತಿರುವ ಚೀನಾ ಸೇನೆ, ಈ ವೇಳೆ ತನ್ನ ರೋಬೋಟ್ ನಾಯಿಯನ್ನು ಬಳಸಿ ಪ್ರದರ್ಶನ ನೀಡಿದೆ. ಈ

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ Read More »

ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ| ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ..!

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆ ನಡೆದಿದೆ. ಈ ಕೃತ್ಯ ಎಸಗಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದಿರುವ ಎನ್‌ಎಸ್‌ಯುಐ ಕಾರ್ಯಕರ್ತರು, ಬಳಿಕ ಸೇತುವೆಗೆ ʼಭಗತ್ ಸಿಂಗ್ ಮೇಲ್ಸೇತುವೆʼ ಹೆಸರಿನ ಬ್ಯಾನರ್ ಹಾಕಿದ್ದಾರೆ. ನಾಮಫಲಕಕ್ಕೆ ಮಸಿ ಬಳಿದಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟ ನಡೆದಿದೆ. ಘಟನೆ ಬಳಿಕ ಯಲಹಂಕ ನ್ಯೂ

ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ| ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ..! Read More »

ಸರ್ಕಾರಿ ಶಾಲೆ ಶಿಕ್ಷಕನಿಂದ ಅತ್ಯಾಚಾರ| 7ನೇ ಕ್ಲಾಸ್ ವಿದ್ಯಾರ್ಥಿನಿ ಗರ್ಭಿಣಿ

ಸಮಗ್ರ ನ್ಯೂಸ್: ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಕನಿಂದಲೇ 7ನೇ ತರಗತಿ ವಿದ್ಯಾರ್ಥಿನಿ ಇದೀಗ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ. ಇದೀಗ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಇನ್ನು  ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ ವಿದ್ಯಾರ್ಥಿನಿಯನ್ನು ಮಹಿಳಾ ಅಧಿಕಾರಿಗಳು ರಕ್ಷಿಸಿ ಆಪ್ತ ಸಮಾಲೋಚನೆ

ಸರ್ಕಾರಿ ಶಾಲೆ ಶಿಕ್ಷಕನಿಂದ ಅತ್ಯಾಚಾರ| 7ನೇ ಕ್ಲಾಸ್ ವಿದ್ಯಾರ್ಥಿನಿ ಗರ್ಭಿಣಿ Read More »

ಮುಂಗಾರು ಪೂರ್ವ ಮಳೆಯಬ್ಬರ| ಕೇರಳದಲ್ಲಿ 6 ಸಾವು

ಸಮಗ್ರ ನ್ಯೂಸ್: ಮಂಗಳವಾರ ಸುರಿದ ಮುಂಗಾರುಪೂರ್ವ ಮಳೆಗೆ ಕೊಚ್ಚಿ ನಗರ ಸೇರಿದಂತೆ ಕೇರಳದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೋಟ್ಟಾಯಂ ಜಿಲ್ಲೆಯ ಭರಣಂಙಾನಂ ಬಳಿ ಭೂಕುಸಿತ ಸಂಭವಿಸಿದೆ. ಆದರೆ ಜೀವಹಾನಿ ವರದಿಯಾಗಿಲ್ಲ. ತಿರುವನಂತಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡು, ಆಲಪ್ಪುಳ, ಎರ್ನಾಕುಳಂ ಮತ್ತು ಕೋಟಯಂ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ ವಾರ ಮಳೆಯಿಂದ ಆದ ಅವಘಡಗಳಿಗೆ ತುತ್ತಾಗಿ ಐದು ಮಂದಿ ಮೃತಪಟ್ಟಿದ್ದರು. ಕೋಟಯಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ

ಮುಂಗಾರು ಪೂರ್ವ ಮಳೆಯಬ್ಬರ| ಕೇರಳದಲ್ಲಿ 6 ಸಾವು Read More »

ಮೇ.29:ಇಂದಿನಿಂದ ಶಾಲಾರಂಭ| ಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ

ಸಮಗ್ರ ನ್ಯೂಸ್: ಇಂದಿನಿಂದ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ಸರ್ಕಾರ ಸೂಚಿಸಿದೆ. ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ

ಮೇ.29:ಇಂದಿನಿಂದ ಶಾಲಾರಂಭ| ಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ Read More »

ತುಳಸಿ ಗಿಡಗಳನ್ನು ನೆಡಬೇಕಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಬೇಕು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್

ಸಮಗ್ರ ನ್ಯೂಸ್ :ತುಳಸಿ ಮಾತೆ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಏಕೆಂದರೆ ಇದನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ತುಳಸಿ ಗಿಡ ಹಸಿರಿನಿಂದ ಕೂಡಿರುವ ಮನೆಯವರು ಸದಾ ಸಂತೋಷದಿಂದ ಇರುತ್ತಾರೆ ಮತ್ತು ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯೂ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಖಚಿತಪಡಿಸಿಕೊಳ್ಳಲು, ತುಳಸಿ ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯ. ವಾಸ್ತುವಿನಲ್ಲಿ ಕೂಡ ತುಳಸಿಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ,

ತುಳಸಿ ಗಿಡಗಳನ್ನು ನೆಡಬೇಕಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಬೇಕು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್ Read More »

ಉಡುಪಿ: ಸ್ವರ್ಣ ನದಿಯ ಸೇತುವೆ ದಂಡೆಗೆ ಡಿಕ್ಕಿ ಹೊಡೆದ ಬಸ್| ಪ್ರಯಾಣಿಕರು ಪಾರು

ಸಮಗ್ರ ನ್ಯೂಸ್‌ : ಖಾಸಗಿ ಬನ್ನೊಂದು ಸೇತುವೆ ಬದಿಯ ದಂಡೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಕಲ್ಯಾಣಪುರ ಸೇತುವೆಯಲ್ಲಿ ಸಂಭವಿಸಿದೆ. ಬಸ್ ನದಿಯಲ್ಲಿ ಮುಳುಗುವ ಅಪಾಯವಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಬಹಳ ದೊಡ್ಡ ದುರಂತದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಚಲಿಸುವ ಬಸ್ ಸ್ವರ್ಣ ನದಿಯ ಕಲ್ಯಾಣಪುರ ಸೇತುವೆಯ ಗರ್ಡ‌ರ್ ರಭಸದಿಂದ ಗುದ್ದಿದೆ. ಇದರ ಪರಿಣಾಮ ಸುರಕ್ಷಾ ಗರ್ಡರ್ ಮುರಿದಿದ್ದು, ಬಸ್ ಅಂಚಿನಲ್ಲಿ ನಿಂತಿದೆ. ಪ್ರಯಾಣಿಕರು ನದಿಗೆ ಬಿದ್ದು ಮುಳುಗಡೆ ಆಗುವ ಸನ್ನಿವೇಶದ ಅಪಾಯದಿಂದ

ಉಡುಪಿ: ಸ್ವರ್ಣ ನದಿಯ ಸೇತುವೆ ದಂಡೆಗೆ ಡಿಕ್ಕಿ ಹೊಡೆದ ಬಸ್| ಪ್ರಯಾಣಿಕರು ಪಾರು Read More »