May 2024

ದಿಢೀರ್ ಕುಸಿತ ಕಂಡ ಕೋಕೋ ಧಾರಣೆ| ಕೆಜಿ ದರದಲ್ಲಿ ₹35 ಇಳಿಕೆ

ಸಮಗ್ರ ನ್ಯೂಸ್: ವಿಪರೀತ ಧಾರಣೆ‌ ಕಂಡಿದ್ದ ಕೊಕ್ಕೋ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಸಾಧಾರಣವಾಗಿ 60-70 ರೂಪಾಯಿ ಆಸುಪಾಸಿನಲ್ಲಿದ್ದ ಧಾರಣೆ ₹ 325 ವರೆಗೂ ಹೋಗಿತ್ತು. ಇದೀಗ ಮತ್ತೆ ಕುಸಿತ ಕಂಡಿದ್ದು 290 ರೂಪಾಯಿಗೆ ಇಳಿಕೆಯಾಗಿದೆ. ಹಸಿ ಕೊಕ್ಕೋ ಧಾರಣೆ 325 ರೂಪಾಯಿವರೆಗೆ ಏರಿಕೆ ಕಂಡಿದ್ದರೆ, ಒಣ ಕೊಕೊ ಧಾರಣೆ 900 ರೂಪಾಯಿ ಆಸುಪಾಸಿಗೆ ಬಂದಿತ್ತು. ಇದೀಗ ಧಾರಣೆ ಇಳಿಕೆಯಾಗಿದೆ. ಹಸಿ ಕೊಕ್ಕೋ ಧಾರಣೆ 290 ರೂಪಾಯಿಗೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಕೊಕೊ ಪ್ರಮುಖವಾಗಿ ಆಫ್ರಿಕಾ […]

ದಿಢೀರ್ ಕುಸಿತ ಕಂಡ ಕೋಕೋ ಧಾರಣೆ| ಕೆಜಿ ದರದಲ್ಲಿ ₹35 ಇಳಿಕೆ Read More »

ಉಪ್ಪಿನಂಗಡಿ: ಹೃದಯಾಘಾತದಿಂದ ಮಲಗಿದ್ದಲ್ಲೇ ಯುವಕ ಸಾವು

ಸಮಗ್ರ ನ್ಯೂಸ್: ಗಾರೆ ಕೆಲಸಕ್ಕೆ ಹೋಗುವ ಯುವಕನೊಬ್ಬ ಮಲಗಿದ್ದಲ್ಲೇ ಹೃದಯಾಘಾತಕ್ಕೆ ಸಿಲುಕಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪ ನಡೆದಿದೆ. ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ. ಗೋಪಾಲ ಗೌಡರ ಪುತ್ರ 27ರ ಹರೆಯದ ಜನಾರ್ದನ ನಿನ್ನಿಕಲ್ಲು ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇದ್ದರು. ಇವರ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದು ನೋಡಿದಾಗ ಜನಾರ್ದನ ಮಲಗಿದ್ದಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ. ಶ್ರೀ ದುರ್ಗಾ ಭಜನಾ ಮಂಡಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಮಲಗಿದ್ದಲ್ಲೇ ಯುವಕ ಸಾವು Read More »

ಆಫ್ರಿಕಾ : ಧಾರಾಕಾರ ಮಳೆಯಿಂದ ಮಹಾ ಪ್ರವಾಹ: 90 ಜನ ಕಾಣೆ, 350ಕ್ಕೂ ಅಧಿಕ ಜನ ಮೃತ್ಯು

ಸಮಗ್ರ ನ್ಯೂಸ್ : ಕಳೆದೊಂದು ವಾರದಿಂದ ಕೀನ್ಯಾ ಮತ್ತು ತಂಜಾನಿಯಾದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಹಾಗೂ ಸಾಕು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಿಂದಾಗಿ ಸುಮಾರು 350ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹಕ್ಕೆ ಮನೆಗಳು, ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಇನ್ನೂ ಭೀಕರ ಮಳೆಯಿಂದಾಗಿ ಕಿನ್ಯಾದ ಲಕ್ಷಕ್ಕೂ ಅಧಿಕ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿನ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, 100ಕ್ಕೂ ಹೆಚ್ಚು

ಆಫ್ರಿಕಾ : ಧಾರಾಕಾರ ಮಳೆಯಿಂದ ಮಹಾ ಪ್ರವಾಹ: 90 ಜನ ಕಾಣೆ, 350ಕ್ಕೂ ಅಧಿಕ ಜನ ಮೃತ್ಯು Read More »

ಚಾಮರಾಜನಗರ : ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ

ಸಮಗ್ರ ನ್ಯೂಸ್ : ಬೀಸಿದ ಗಾಳಿಗೆ ಸುರಿದ ಮಳೆಯ ರಭಸಕ್ಕೆ ಏಸು ಕ್ರೈಸ್ತನ ಮೂರ್ತಿ ಧರೆಗುರುಳಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿ ಮಂಗಲ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಮರಿ ಮಂಗಲ ಗ್ರಾಮದಲ್ಲಿರುವ ಕ್ರೈಸ್ತ ಧರ್ಮದ ಚರ್ಚ್ ಮುಂಭಾಗದಲ್ಲಿ ಇರಿಸಲಾಗಿದ್ದ ಏಸು ಕ್ರೈಸ್ತನ ಮೂರ್ತಿಯು ಶುಕ್ರವಾರ ಸಂಜೆ ಬೀಸಿದ ಗಾಳಿ ಸುರಿದ ಮಳೆಯ ರಭಸಕ್ಕೆ ಧರೆಗುರುಳಿದೆ. ಅಲ್ಲದೆ ಗ್ರಾಮದ ಹಲವಾರು ಷೆಡ್ ಗಳು ನಾಶವಾಗಿದ್ದರೆ ಮರಗಳು ಧರೆಗುರುಳಿವೆ. ಮರಿಮಂಗಲ ಗ್ರಾಮದಲ್ಲಿ ಗಾಳಿ ಮಳೆಯ ಅವಾಂತರಕ್ಕೆ

ಚಾಮರಾಜನಗರ : ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ Read More »

ಮಹಾರಾಷ್ಟ್ರ : ಮನೆಯಲ್ಲಿ ಬೆಂಕಿ ಅವಘಡ: 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ

ಸಮಗ್ರ ನ್ಯೂಸ್ : ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲಿ ಏಳು ಮಂದಿ ವಯಸ್ಕರು ಹಾಗೂ 2–3 ಮಕ್ಕಳು ಇದ್ದರು. ಸಿಲಿಂಡರ್‌ ಬ್ಲಾಸ್ಟ್‌ನಿಂದ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಸದಾಫ್ ಇರ್ಫಾನ್ ಶೇಖ್ (3) ಮೃತಪಟ್ಟರೆ, ರಿಜ್ವಾನ್ ಖಾನ್ (40), ರೆಹಾನ್ ಶೇಖ್ (17), ಆದಿಲ್ ಖಾನ್ (10), ಫೈಜಾನ್

ಮಹಾರಾಷ್ಟ್ರ : ಮನೆಯಲ್ಲಿ ಬೆಂಕಿ ಅವಘಡ: 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ Read More »

ಕೋವಿಡ್ ಲಸಿಕೆ ಪಡೆದವರು ಪ್ರಿಡ್ಜ್ ನೀರು ಐಸ್ ಕ್ರೀಂ ಸೇವಿಸಬಾರದು| ತಪ್ಪು ಮಾಹಿತಿ ಸುತ್ತೋಲೆ ಹೊರಡಿಸಿದ ಕಾಲೇಜುಗಳಿಗೆ ನೋಟೀಸ್

ಸಮಗ್ರ ನ್ಯೂಸ್: ಕೋವಿಡ್ ನಿಯಂತ್ರಣಕ್ಕಾಗಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್ ಹೃದಯಾಘಾತವಾಗಿ ಹಲವು ಅಡ್ಡಪರಿಣಾಮಗಳು ಉಂಟಾಗಲಿದ್ದು, ಆದ್ದರಿಂದ ಫ್ರಿಡ್ಜ್ ನೀರು, ಆಹಾರ ಸೇವನೆ ಮಾಡಬೇಡಿ ಎಂದು ಸುದ್ದಿ ಹಬ್ಬಿಸಿದ ನಗರದ ಸಿದ್ದರಾಮಯ್ಯ ಲಾ ಕಾಲೇಜು ಹಾಗೂ ಜಚನಿ ಪ್ರಥಮ ದರ್ಜೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಿಂದ ನೋಟಿಸ್ ನೀಡಿದೆ. ಕೋವಿಡ್‌ಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್‌ ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಸೇರಿ ಹಲವು ರೀತಿಯ ಅಡ್ಡಪರಿಣಾಮಗಳು ಉಂಟಾಗಲಿದ್ದು, ಈ ಹಿನ್ನೆಲೆ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್

ಕೋವಿಡ್ ಲಸಿಕೆ ಪಡೆದವರು ಪ್ರಿಡ್ಜ್ ನೀರು ಐಸ್ ಕ್ರೀಂ ಸೇವಿಸಬಾರದು| ತಪ್ಪು ಮಾಹಿತಿ ಸುತ್ತೋಲೆ ಹೊರಡಿಸಿದ ಕಾಲೇಜುಗಳಿಗೆ ನೋಟೀಸ್ Read More »

ಮೈಸೂರು: ಚಲಿಸುತ್ತಿದ್ದ ಬಸ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

ಸಮಗ್ರ ನ್ಯೂಸ್ : ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಚಲಿಸುತ್ತಿದ್ದ ಬಸ್ ಮೇಲೆ ವಿದ್ಯುತ್ ಕಂಬಗಳು ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಸ್ನಲ್ಲಿ ಮಹಿಳೆಯರು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಕಂಬಗಳು ಬಿದ್ದಿದೆ. ಈ ವೇಳೆ ತಕ್ಷಣ ಸಾರ್ವಜನಿಕರು ಕರೆಂಟ್ ಕಟ್ ಮಾಡಿದ್ದಾರೆ. ಅದೃಷ್ಟವಶಾತ್ ಕರೆಂಟ್ ಕಟ್ ಆಗಿದ್ದ ಕಾರಣ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೈಸೂರು: ಚಲಿಸುತ್ತಿದ್ದ ಬಸ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ Read More »

ಕೋವಿಶೀಲ್ಡ್ ಹಾಕಿಸಿಕೊಂಡವರು ತಂಪು ಪಾನೀಯ ಸೇವಿಸಬಾರದೇ? ವೈರಲ್ ಆಗಿರುವ ಪೋಸ್ಟರ್ ನ ಕುರಿತು ಆರೋಗ್ಯ ಇಲಾಖೆ ನೀಡಿದ ಸ್ಪಷ್ಟನೆ ಏನು?

ಸಮಗ್ರ ನ್ಯೂಸ್: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀ‌ರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದು ವರದಿ ಆಗುತ್ತಿದೆ. ಆದರೆ ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯು ಸಮಯೋಚಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀ‌ರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದು ವರದಿ ಆಗುತ್ತಿದೆ. ಆದ ಕಾರಣ ಆರೋಗ್ಯ ಇಲಾಖೆಯು

ಕೋವಿಶೀಲ್ಡ್ ಹಾಕಿಸಿಕೊಂಡವರು ತಂಪು ಪಾನೀಯ ಸೇವಿಸಬಾರದೇ? ವೈರಲ್ ಆಗಿರುವ ಪೋಸ್ಟರ್ ನ ಕುರಿತು ಆರೋಗ್ಯ ಇಲಾಖೆ ನೀಡಿದ ಸ್ಪಷ್ಟನೆ ಏನು? Read More »

ಕೃಷಿಹೊಂಡದಲ್ಲಿ ಮುಳುಗಿ ಯುವಕ ಸಾವು| ತಂಗಿಯ ಮೊಬೈಲ್ ನಲ್ಲಿ ಸೆರೆಯಾಯ್ತು ಸಾವಿನ ಕೊನೆ ಕ್ಷಣ

ಸಮಗ್ರ ನ್ಯೂಸ್: ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ನಾಗನಾಳ ಎಂಬಲ್ಲಿ ನಡೆದಿದೆ. ಮೊನ್ನೆ ಬುಧವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್ ಗೌಡ (26) ಮೃತ ದುರ್ದೈವಿ. ಗೌತಮ್‌ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ. ಕುಟುಂಬದವರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ. ಒಂದು ಬದಿ ಮಕ್ಕಳಿಬ್ಬರು ಈಜುತ್ತಿದ್ದರು. ಈ ಕಡೆ ತಂಗಿಗೆ ಮೊಬೈಲ್‌ನಲ್ಲಿ ಕೊಟ್ಟು ಈಜುವುದನ್ನು ವಿಡಿಯೊ

ಕೃಷಿಹೊಂಡದಲ್ಲಿ ಮುಳುಗಿ ಯುವಕ ಸಾವು| ತಂಗಿಯ ಮೊಬೈಲ್ ನಲ್ಲಿ ಸೆರೆಯಾಯ್ತು ಸಾವಿನ ಕೊನೆ ಕ್ಷಣ Read More »

ಮತದಾನಕ್ಕೆ ವಿಶೇಷ ರೈಲು/ ಮೈಸೂರು-ತಾಳಗುಪ್ಪ-ಮೈಸೂರು ನಡುವೆ ಸಂಚರಿಸಲಿದೆ ರೈಲು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಬೆಂಗಳೂರು ಮಾರ್ಗವಾಗಿ ಮೈಸೂರು-ತಾಳಗುಪ್ಪ-ಮೈಸೂರು ನಡುವೆ ಒಂದು ದಿನ ಮಾತ್ರ ವಿಶೇಷ ರೈಲು ಸಂಚರಿಸಲಿದೆ. ರೈಲು (ಸಂಖ್ಯೆ 07373) ಮೇ 6ರಂದು ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟು ಮಾರನೇ ದಿನ ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಇದೇ ರೈಲು (ಸಂಖ್ಯೆ 07374) ಮೇ 7 ರಂದು ಸಂಜೆ 6.30ಕ್ಕೆ ತಾಳಗುಪ್ಪದಿಂದ ಹೊರಟು ಬೆಳಗಿನ ಜಾವ 4 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಬೆಂಗಳೂರು, ತುಮಕೂರು, ಬೀರೂರು ಮಾರ್ಗವಾಗಿ

ಮತದಾನಕ್ಕೆ ವಿಶೇಷ ರೈಲು/ ಮೈಸೂರು-ತಾಳಗುಪ್ಪ-ಮೈಸೂರು ನಡುವೆ ಸಂಚರಿಸಲಿದೆ ರೈಲು Read More »