May 2024

ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು 70ರ ವೃದ್ಧ ಮದುವೆ- ವರ ತಂದೆ ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : 13 ವರ್ಷದ ಬಾಲಕಿಯನ್ನು 70 ವರ್ಷದ ವ್ಯಕ್ತಿ ಮದುವೆಯಾಗಿದ್ದಕ್ಕಾಗಿ ಪೊಲೀಸರು ಬಂಧಿಸಿದ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ದೇಶದ ಪ್ರಸ್ತುತ ಶಾಸನದ ಅಡಿಯಲ್ಲಿ, 1929 ರ ವಿವಾಹ ತಡೆ ಕಾಯಿದೆಯು ಕನಿಷ್ಟ ಮದುವೆಯ ವಯಸ್ಸನ್ನು ಹುಡುಗಿಯರಿಗೆ 16 ಮತ್ತು ಹುಡುಗರಿಗೆ 18 ಎಂದು ವ್ಯಾಖ್ಯಾನಿಸಲಾಗಿದೆ. ಅಪ್ರಾಪ್ತ ಬಾಲಕಿಯ ತಂದೆ ಆಕೆಯನ್ನು ವೃದ್ಧನಿಗೆ ಮದುವೆ ಮಾಡಿಸಿದ್ದಾನೆ. ಈ ಮಾಹಿತಿಯನ್ನು ಪಡೆದ ಕಾನೂನು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ ಮತ್ತು ಬಾಲಕಿ ತಂದೆ ಇಬ್ಬರನ್ನೂ […]

ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು 70ರ ವೃದ್ಧ ಮದುವೆ- ವರ ತಂದೆ ಪೊಲೀಸರ ವಶಕ್ಕೆ Read More »

ಮಲ್ಪೆ ಮೀನುಗಾರಿಕ ಬಂದರಿನಲ್ಲಿರುವ ಅಗ್ನಿಶಾಮಕ ದಳಕ್ಕೆ ತಕ್ಷಣ ವಾಹನ ಒದಗಿಸಿ| ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಸಮಗ್ರ ನ್ಯೂಸ್‌ : ಮಲ್ಪೆ ಮೀನುಗಾರಿಕೆ ಬಂದರಿನಲ್ಲಿರುವ ಅಗ್ನಿಶಾಮಕ ದಳದ 15 ವರ್ಷ ಹಿಂದಿನ ಎರಡು ವಾಹನಗಳನ್ನು ಸರ್ಕಾರ ಎರಡು ತಿಂಗಳ ಹಿಂದೆ ಸೇವೆಯಿಂದ ಹಿಂಪಡೆದಿದ್ದು, ಇದೀಗ ತುರ್ತು ಸಂದರ್ಭದಲ್ಲಿ ಯಾವುದೇ ಅಗ್ನಿಶಾಮಕ ವಾಹನ ಲಭ್ಯವಿಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ. ಸರಕಾರ ತಕ್ಷಣ ವಾಹನ ಒದಗಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಆಗ್ರಹ ಮಾಡಿದ್ದಾರೆ. ದೇಶದ ಪ್ರಮುಖ ಮೀನುಗಾರಿಕೆ ಬಂದರುಗಳಲ್ಲಿ ಒಂದಾದ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಹಿಂದೆ

ಮಲ್ಪೆ ಮೀನುಗಾರಿಕ ಬಂದರಿನಲ್ಲಿರುವ ಅಗ್ನಿಶಾಮಕ ದಳಕ್ಕೆ ತಕ್ಷಣ ವಾಹನ ಒದಗಿಸಿ| ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ Read More »

ಹುಬ್ಬಳ್ಳಿ: ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿದ ವಿದ್ಯಾರ್ಥಿನಿ

ಸಮಗ್ರ ನ್ಯೂಸ್‌ : ವಿದ್ಯಾರ್ಥಿನಿಯೊಬ್ಬರು ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಲೋಕಸಭಾ ಚುನಾವಣೆಗೆ ತನ್ನ ಹಕ್ಕು ಚಲಾಯಿಸಿದ್ದಾರೆ. ಹುಬ್ಬಳ್ಳಿ ವಿಜಯನಗರದ ನಿವಾಸಿ ಬಸವರಾಜ ಆಲೂರ ಅವರ ಪುತ್ರಿ ರುಚಿತಾ ಮೊದಲ ಸಲ ಮತ ಹಾಕಿದ್ದಾರೆ. ಬೂತ್ ಸಂಖ್ಯೆ 75 ರಲ್ಲಿ ಮತ ಚಲಾಯಿಸಿ, ಮತದಾನದ ಮಹತ್ವ ಸಾರಿದ್ದಾರೆ. ಮತದಾನದ ಬಳಿಕ ಮಾತನಾಡಿದ ವಿದ್ಯಾರ್ಥಿನಿ, ನಮಸ್ಕಾರ ಎಲ್ಲರಿಗೂ. ನನ್ನ ಮೊದಲ ವೋಟ್‌ ಹಾಕಲು ಅಮೆರಿಕದಿಂದ ಬಂದಿದ್ದೇನೆ. ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ತಂದೆ-ತಾಯಿ ಸಹಕಾರದಿಂದ ಮತ ಚಲಾಯಿಸಿ ನನ್ನ ಕರ್ತವ್ಯ

ಹುಬ್ಬಳ್ಳಿ: ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿದ ವಿದ್ಯಾರ್ಥಿನಿ Read More »

ಒಂದೇ ಕುಟುಂಬದ 96 ಮಂದಿಯಿಂದ ಮತದಾನ| ಇದಲ್ವೇ‌ ಪ್ರಜಾಪ್ರಭುತ್ವದ ಹಬ್ಬ..!

ಸಮಗ್ರ ನ್ಯೂಸ್: ಪ್ರಜಾಪ್ರಭುತ್ವದ ಸಂಭ್ರಮ ಅಂದರೆ ನಿಜಕ್ಕೂ ಅದೊಂದು ದೊಡ್ಡ ಹಬ್ಬದಂತೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಒಂದೇ ಕುಟುಂಬದ 96 ಸದಸ್ಯರು ಮತದಾನ ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56,57 ರಲ್ಲಿ ಮತದಾನ ಕುಟುಂಬದ ಸದಸ್ಯರು ಮಾಡಿದ್ದು, ನೂಲ್ವಿ ಗ್ರಾಮದ ಕಂಟೆಪ್ಪ ಕುಟುಂಬದ ಸದಸ್ಯರಿಂದ ಮತದಾನ ಮಾಡಿದ್ದಾರೆ. ಮೂರು ತಲೆಮಾರಿನ ಕುಟುಂಬದ ಸದಸ್ಯರು ಮತದಾನದಲ್ಲಿ ಭಾಗಿಯಾಗಿದ್ದು, ಪ್ರತಿ ಚುನಾವಣೆಯಲ್ಲಿ ಮೂರು ತಂಡವಾಗಿ ವಾಹನ

ಒಂದೇ ಕುಟುಂಬದ 96 ಮಂದಿಯಿಂದ ಮತದಾನ| ಇದಲ್ವೇ‌ ಪ್ರಜಾಪ್ರಭುತ್ವದ ಹಬ್ಬ..! Read More »

ಬೀದರ್‌ ಕ್ಷೇತ್ರದಲ್ಲಿ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನ

ಸಮಗ್ರ ನ್ಯೂಸ್‌ : ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್‌ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನವಾಗಿದೆ. ಬೆಳಗ್ಗೆ 9 ಗಂಟೆವರೆಗೆ ಶೇ. 8.90ರಷ್ಟು ಮತದಾನವಾಗಿತ್ತು. ಒಟ್ಟು ಮತದಾರರು: 18,92,962, ಪುರುಷ ಮತದಾರರು :9,71,424, ಮಹಿಳಾ ಮತದಾರರು : 9,21,435, ಮೊದಲ ಬಾರಿ ಮತದಾನ: 42,404. ಕ್ಷೇತ್ರದಲ್ಲಿ ಒಟ್ಟು 2024 ಮತಗಟ್ಟೆಗಳಿವೆ.

ಬೀದರ್‌ ಕ್ಷೇತ್ರದಲ್ಲಿ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನ Read More »

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಸಮಗ್ರ ನ್ಯೂಸ್‌ : ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಬಂಟರ ಭವನದ ಕಂಪೌಂಡ್ ನ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಎಂಬಾತನ ಶವ ಇದಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಬಂಟರ ಭವನದ ಹೊರಗಡೆಯಲ್ಲಿ ಈತನ ಸೇರಿದ ಬೈಕ್ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಸ್ಪಷ್ಟವಾದ ಕಾರಣ ಗೊತ್ತಾಗಿಲ್ಲವಾದರೂ ಪೊಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಬಸ್‌ ಕಂಡಕ್ಟರ್‌ಗಳಿಗೆ ಲೋಹದ ವಿಸಿಲ್‌ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

ಸಮಗ್ರ ನ್ಯೂಸ್‌ : ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯು ಮೆಟ್ರೋಪಾಲಿಟನ್‌ ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್‌ ಲಿಮಿಟೆಡ್‌ ಬಸ್‌ ಕಂಡಕ್ಟರ್‌ಗಳಿಗೆ 8 ಸಾವಿರ ಲೋಹದ ವಿಸಿಲ್‌ಗ‌ಳನ್ನು ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆಯಾಗಿ ನೀಡಿದೆ. ಈ ವಿಚಾರವನ್ನು ಚೆನ್ನೈ ತಂಡ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಪೋಸ್ಟ್​ ಮೂಲಕ ತಿಳಿಸಿದೆ. ಪ್ಲಾಸ್ಟಿಕ್‌ ವಿಸಿಲ್‌ಗ‌ಳ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ. ವಿಸಿಲ್‌ ಪೋಡ್​ ಎನ್ನುವುದು ಚೆನ್ನೈ ತಂಡದ ಪ್ರಧಾನ ಸ್ಲೋಗನ್​ ಆಗಿದೆ. ಈ

ಬಸ್‌ ಕಂಡಕ್ಟರ್‌ಗಳಿಗೆ ಲೋಹದ ವಿಸಿಲ್‌ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್ Read More »

ಮತ್ತೆ ಆರಂಭಗೊಳ್ಳುತ್ತಿದೆ ಭಾರತ-ಶ್ರೀಲಂಕಾ ನಡುವೆ ದೋಣಿ ಸೇವೆ

ಸಮಗ್ರ ನ್ಯೂಸ್: 40 ವರ್ಷದ ನಂತರ, ಕಳೆದ ಅಕ್ಟೋಬರ್‍ನಲ್ಲಿ ಪ್ರಾರಂಭಗೊಂಡು ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಜಾಪ್ಪಾ ಜಿಲ್ಲೆಯ ಕಾಂಕೆಸಂತುರೈ (ಕೆಕೆಎಸ್) ನಗರದ ನಡುವಿನ ದೋಣಿ ಸೇವೆಯು ಮೇ 13ರಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತೀಯ ಹೈಕಮಿಷನ್ ಸೋಮವಾರ ತಿಳಿಸಿದೆ. ದೋಣಿ ಸೇವೆಯನ್ನು ಮತ್ತೆ ಪ್ರಾರಂಭಿಸುತ್ತಿರುವುದು, ಭಾರತ ಸರ್ಕಾರದ ಜನಕೇಂದ್ರಿತ ನೀತಿಯ ದೃಢೀಕರಣವಾಗಿದೆ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಕಾಂಕೆಸಂತುರೈ ಬಂದರನ್ನು ಪುನಶ್ಚತನಗೊಳಿಸಲು ಯೋಜನಾ ವೆಚ್ಚವಾದ ರೂ. 531 ಕೋಟಿಯನ್ನು ಭಾರತವು ಶ್ರೀಲಂಕಾಕ್ಕೆ ನೀಡಿದೆ.ಶ್ರೀಲಂಕಾದ

ಮತ್ತೆ ಆರಂಭಗೊಳ್ಳುತ್ತಿದೆ ಭಾರತ-ಶ್ರೀಲಂಕಾ ನಡುವೆ ದೋಣಿ ಸೇವೆ Read More »

ಲೋಕಸಭಾ ಚುನಾವಣೆ/ ಲೋಗೋ ಬದಲಿಸಿದ ಗೂಗಲ್

ಸಮಗ್ರ ನ್ಯೂಸ್: 2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಗೂಗಲ್ ಡೂಡಲ್ ತನ್ನ ಸೇವೆಯನ್ನು ಒದಗಿಸಿದೆ. ಸರ್ಚ್ ಇಂಜಿನ್‍ನ ಮುಖಪುಟದಲ್ಲಿ ಐಕಾನಿಕ್ “ಗೂಗಲ್” ಲೋಗೋವನ್ನು ಬದಲಿಸುವ ಗೂಗಲ್ ಡೂಡಲ್, ಭಾರತೀಯ ಚುನಾವಣೆಗಳ ಸಾರವನ್ನು ಸಂಕೇತಿಸುವ ಅಳಿಸಲಾಗದ ಶಾಯಿಯಿಂದ ಗುರುತಿಸಲಾದ ಮೇಲಕ್ಕೆತ್ತಿದ ತೋರು ಬೆರಳನ್ನು ಹೊಂದಿದೆ. ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಲೋಕಸಭೆ ಚುನಾವಣೆಯ 3 ನೇ ಹಂತಕ್ಕೆ ರಾಷ್ಟ್ರವು ಪ್ರವೇಶಿಸುತ್ತಿದ್ದಂತೆ ಡೂಡಲ್ ಭಾರತದಾದ್ಯಂತ ವಾಸಿಸುವ ಜನರಿಗೆ ಮಾತ್ರ

ಲೋಕಸಭಾ ಚುನಾವಣೆ/ ಲೋಗೋ ಬದಲಿಸಿದ ಗೂಗಲ್ Read More »

ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಪರಿಣಾಮ| ರಾಜ್ಯದಲ್ಲಿ ಐದು‌ ದಿನ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ಹಳೆ ಮೈಸೂರು ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಸಂಭವ ಇದೆ. ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಹಲವು ಭಾಗದಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು,

ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಪರಿಣಾಮ| ರಾಜ್ಯದಲ್ಲಿ ಐದು‌ ದಿನ ಮಳೆ ಮುನ್ಸೂಚನೆ Read More »