May 2024

ಮುಂಗಾರು ಪ್ರವೇಶಕ್ಕೆ 24 ಗಂಟೆ ಬಾಕಿ| ದೇಶಾದ್ಯಂತ ವಾಡಿಕೆ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಮುಂದಿನ 24 ಗಂಟೆಗಳಲ್ಲಿ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಪ್ರವೇಶದಿಂದಾಗಿ ಕೇರಳದಲ್ಲಿ ಮಳೆಯಾಗಲಿದೆ. ನಂತರ ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ. ಉಷ್ಣ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ಪ್ರವೇಶವು ತುಸು ರಿಲೀಫ್‌ ನೀಡಲಿದೆ. ಭಾರತದ ವಾಯವ್ಯ ಹಾಗೂ ಕೇಂದ್ರ ಭಾಗದಲ್ಲಿ ಉತ್ತಮ ಮಳೆಯಾಗುವ ಕಾರಣ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯಲಿದೆ. ಸುಮಾರು 3-4 ಡಿಗ್ರಿ ಸೆಲ್ಸಿಯಸ್‌ ತಾಪಮಾನವು ಇಳಿಕೆಯಾಗಲಿದೆ’ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಜೂನ್‌ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, […]

ಮುಂಗಾರು ಪ್ರವೇಶಕ್ಕೆ 24 ಗಂಟೆ ಬಾಕಿ| ದೇಶಾದ್ಯಂತ ವಾಡಿಕೆ ಮಳೆ ನಿರೀಕ್ಷೆ Read More »

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ| ಡೆತ್ ನೋಟ್ ನಲ್ಲಿದ್ದ ಇಬ್ಬರು ಅಧಿಕಾರಿಗಳು ಸಸ್ಪೆಂಡ್..!

ಸಮಗ್ರ ನ್ಯೂಸ್: ಶಿವಮೊಗ್ಗ ಜಿಲ್ಲೆಯ ವಿನೋಬ ನಗರದ ಕೆಂಚಪ್ಪ ಲೇಔಟ್ನಲ್ಲಿರುವ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌(52) ನೇಣಿಗೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತ ರಾಜ್ಯ ಸರ್ಕಾರ, ಡೆತ್ ನೋಟ್ ನಲ್ಲಿ ನಮೂದಿಸಿದ್ದ ಮೂರು ಜನ ಅಧಿಕಾರಿಗಳಲ್ಲಿ ಇಬ್ಬರಾದ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಈ ಪ್ರಕರಣವನ್ನು ಮೊನ್ನೆಯೆ CIDಗೆ ವಹಿಸಲಾಗಿತ್ತು . ಈಗ ಶಿವಮೊಗ್ಗ ಮತ್ತು ಬೆಂಗಳೂರು ಎರಡು ಕಡೆಗಳಲ್ಲಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ| ಡೆತ್ ನೋಟ್ ನಲ್ಲಿದ್ದ ಇಬ್ಬರು ಅಧಿಕಾರಿಗಳು ಸಸ್ಪೆಂಡ್..! Read More »

ಮಂಗಳೂರು: ಪೈಲ್ಸ್ ಚಿಕಿತ್ಸೆಗೆಂದು ಕರೆತಂದು ಮಹಿಳೆ ಮೇಲೆ ಅತ್ಯಾಚಾರ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನು ಪೈಲ್ಸ್  ಚಿಕಿತ್ಸೆಗೆಂದು ಕರೆದುಕೊಂಡು ಬಂದು ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ. ಅತ್ಯಾಚಾರ ನಡೆಸಿದ ನಂತರ ಸಂತ್ರಸ್ಥೆಯ ನಗ್ನ ಫೋಟೋವನ್ನು ತೆಗೆದುಕೊಂಡು ಬ್ಲಾಕ್ ಮೇಲೆ ಮಾಡಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಇನ್ನು ಆರೋಪಿ, ಖಾಸಗಿ ಆಸ್ಪತ್ರೆ ಹಾಗೂ ಹೋಟೆಲ್ನಲ್ಲಿ ಕೃತ್ಯವೆಸಗಿದ್ದು, ಪೈಲ್ಸ್ ಗೆ ಚಿಕಿತ್ಸೆ ಕೊಡಿಸುವುದಾಗಿ ಮೊದಲು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ. ಬಳಿಕ ನಗರದ ಮಹಾರಾಜ ಹೋಟೆಲ್, ಫಾದರ್ ಮುಲ್ಲರ್ಸ್ ಆಸ್ಪತ್ರೆ

ಮಂಗಳೂರು: ಪೈಲ್ಸ್ ಚಿಕಿತ್ಸೆಗೆಂದು ಕರೆತಂದು ಮಹಿಳೆ ಮೇಲೆ ಅತ್ಯಾಚಾರ Read More »

ಪೋಸ್ಟ್ ಆಫೀಸ್ ನಲ್ಲಿ ಖಾತೆಗಾಗಿ ಮುಗಿಬಿದ್ದ ಮಹಿಳೆಯರು| 1 ಲಕ್ಷಕ್ಕಾಗಿ ಇಷ್ಟು ಕ್ಯೂನಾ..?

ಸಮಗ್ರ ನ್ಯೂಸ್: ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯಲ್ಲಿ ಮುಂಜಾನೆ 4 ಗಂಟೆಗೆ ಜನ ಕ್ಯೂ ಬಂದು ನಿಲ್ಲುತ್ತಾರಂತೆ ಯಾಕೆ ಇಷ್ಟು ಜನ ಒಮ್ಮೊಗೆ ಬಂದು ಕ್ಯೂ ನಿಲ್ಲುತ್ತಾರೆ ಅಂತ ಗೋತ್ತಾಗಬೇಕ ಈ ಸ್ಟೋರಿ ಓದಿ. ಹೌದು ಬೆಂಗಳೂರಿನ ಅಂಚೆ ಕೇಂದ್ರದಲ್ಲಿ ಜನ ಸಾಲುಗಟ್ಟಿ ನಿಂತಿರುವುದು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆಗಾಗಿ. ಅದ್ರೆ ಇಷ್ಟು ಜನ ಒಮ್ಮೊಗೆ ಬರುತ್ತಿರುವುದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ. ಯಾಕೆ ಅಂತೀರಾ, ಚುನಾವಣೆ ಹೊತ್ತಲ್ಲಿ I.N.D.I.A ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ

ಪೋಸ್ಟ್ ಆಫೀಸ್ ನಲ್ಲಿ ಖಾತೆಗಾಗಿ ಮುಗಿಬಿದ್ದ ಮಹಿಳೆಯರು| 1 ಲಕ್ಷಕ್ಕಾಗಿ ಇಷ್ಟು ಕ್ಯೂನಾ..? Read More »

ಮೈಸೂರಿನ ಪಾರಂಪರಿಕ ಕಟ್ಟಡಗಳ ಜೀರ್ಣೊದ್ಧಾರ/ ಮರುನಿರ್ಮಾಣಕ್ಕೆ ಶಿಫಾರಸು ಮಾಡಿದ ಸರಕಾರ

ಸಮಗ್ರ ನ್ಯೂಸ್: ಮೈಸೂರಿನ 129 ಪಾರಂಪರಿಕ ಕಟ್ಟಡಗಳ ಸಮೀಕ್ಷೆಯನ್ನು ಪುರಾತತ್ವ ಇಲಾಖೆ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪಾರಂಪರಿಕ ಸಮಿತಿ ಪೂರ್ಣಗೊಳಿಸಿದ್ದು, 11 ಪಾರಂಪರಿಕ ಕಟ್ಟಡಗಳನ್ನು ತಕ್ಷಣ ಜೀರ್ಣೋದ್ದಾರ ಮಾಡುವಂತೆ ಶಿಫಾರಸು ಮಾಡಿದೆ. ಆದ್ದರಿಂದ ರಾಜ್ಯ ಸರ್ಕಾರ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಿದ್ದು, ಹಳೆ ಮಾದರಿಯಲ್ಲಿಯೇ ನಾಲ್ಕು ಹೊಸ ಕಟ್ಟಡಗಳ ನಿರ್ಮಾಣಕ್ಕೆ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸುವಂತೆಯೂ ರಾಜ್ಯ ಸರ್ಕಾರ ಜವಾಬ್ದಾರಿಯುತ ಸಚಿವಾಲಯಕ್ಕೆ ಸೂಚಿಸಿದೆ.

ಮೈಸೂರಿನ ಪಾರಂಪರಿಕ ಕಟ್ಟಡಗಳ ಜೀರ್ಣೊದ್ಧಾರ/ ಮರುನಿರ್ಮಾಣಕ್ಕೆ ಶಿಫಾರಸು ಮಾಡಿದ ಸರಕಾರ Read More »

ರೈತರಿಗೆ ಶಾಕ್ ನೀಡಿದ ಬಿತ್ತನೆ ಬೀಜ/ 48% ಏರಿಕೆ ಕಂಡ ಬಿತ್ತನೆ ಬೀಜ ಬೆಲೆ

ಸಮಗ್ರ ನ್ಯೂಸ್: ಬರಬಿಸಿಲಿನಿಂದಾಗಿ ರಾಜ್ಯದಲ್ಲಿ ಹೈರಾಣಾಗಿದ್ದ ರೈತರಿಗೆ ಇದೀಗ ಆರಂಭವಾಗಿರುವ ಮಳೆ ಸಂತಸ ನೀಡಿರುವ ಬೆನ್ನಲ್ಲೇ. ಸರ್ಕಾರದಿಂದ ಅನ್ನದಾತನಿಗೆ ಕಹಿ ಸುದ್ದಿ ಸಿಕ್ಕಿದೆ. ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಹಿನ್ನಲೆಯಲ್ಲಿ ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023 ಕ್ಕೆ ಹೋಲಿಸಿದರೆ ಈ ಬಾರಿ ಶೇ.48.50 ರಷ್ಟು ಹೆಚ್ಚಾಗಿದೆ. ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ ರಾಜ್ಯದ ರೈತರಿಗೆ ಬಿತ್ತನೆ ಬೀಜಗಳ ದರ ಹೆಚ್ಚಳ ಶಾಕ್ ನೀಡಿದೆ. ಹೆಸರು

ರೈತರಿಗೆ ಶಾಕ್ ನೀಡಿದ ಬಿತ್ತನೆ ಬೀಜ/ 48% ಏರಿಕೆ ಕಂಡ ಬಿತ್ತನೆ ಬೀಜ ಬೆಲೆ Read More »

ಜೂ.1 ರಿಂದ 3 ರವರೆಗೆ ದ.ಕ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆ- 2024ಕ್ಕೆ ಸಂಬಂಧಿಸಿದಂತೆ ಜೂನ್ 3 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜೂನ್ 01 ರಂದು ಸಂಜೆ 4 ಗಂಟೆಯಿಂದ ಜೂನ್ 3 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ಅವರು ಆದೇಶಿಸಿದ್ದಾರೆ. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ, ನಿಷ್ಪಕ್ಷಪಾತ

ಜೂ.1 ರಿಂದ 3 ರವರೆಗೆ ದ.ಕ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ Read More »

ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ

ಸಮಗ್ರ ನ್ಯೂಸ್: ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಅಡ್ವೋಕೆಟ್ ಪ್ರಶಸ್ತಿಗೆ, ಕಾಂಗೋದ ವಿಶ್ವಸಂಸ್ಥೆ ಮಿಷನ್‍ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ ಅವರು ಭಾಜನರಾಗಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗ್ಯುಟೆರ್ರೆಸ್, ರಾಧಿಕಾ ಅವರನ್ನು ನಿಜ ನಾಯಕಿ, ಮಾದರಿ ಎಂದು ಬಣ್ಣಿಸಿದ್ದಾರೆ. ಕಾಂಗೋದಲ್ಲಿ ಯುನೈಟೆಡ್ ನೇಷನ್ಸ್ ಸ್ಟೆಬಿಲೆಷನ್ ಮಿಷನ್‍ನಲ್ಲಿ ಕಾರ್ಯ ನಿರ್ವಹಿಸಿದ್ದ ರಾಧಿಕಾ ಅವರಿಗೆ 2023ನೇ ಸಾಲಿನ ಮಿಲಿಟರಿ ಅಡ್ವೋಕೆಟ್ ಆಫ್ ದಿ ಇಯರ್ ಗೌರವ ದೊರೆತಿದ್ದು, ಮೇ.30ರಂದು ಅಂತರಾಷ್ಟ್ರೀಯ ಶಾಂತಿ ಪಾಲಕರ

ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ Read More »

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ತಮಗಿಂತ ಹಿರಿಯ ಮಹಿಳೆಯರನ್ನು ಕೆಲ ಗಂಡಸರು ಇಷ್ಟ ಪಡುತ್ತಾರೆ. ಅನುಭವ, ಹೊಂದಾಣಿಕೆ, ಅರ್ಥ ಮಾಡಿಕೊಂಡು ಹೋಗುವಂತಹ ಸಂಗಾತಿಯನ್ನು ಹುಡುಕುವ ಪುರುಷರಿಗೆ ತಮಗಿಂತ ಹಿರಿಯ ಮಹಿಳೆಯರೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಮಾತು, ವರ್ತನೆ, ಕಾಳಜಿ ಪುರುಷರಿಗೆ ಹಿತ ಎನಿಸುತ್ತದೆ. ಚಿಕ್ಕ ವಯಸ್ಸಿನ ಪುರುಷರು ಆತ್ಮವಿಶ್ವಾಸ ಇರುವ ಸ್ತ್ರೀಯರನ್ನು ಇಷ್ಟ ಪಡುತ್ತಾರೆ. ಏಕೆಂದರೆ ಆತ್ಮವಿಶ್ವಾಸ ಇರುವ ಹೆಣ್ಣುಮಕ್ಕಳು ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಬೇರೊಬ್ಬರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಬಗ್ಗೆ ಅರಿತುಕೊಳ್ಳುತ್ತಾರೆ. ಪ್ರಬುದ್ಧತೆ ಅಂದರೆ

ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ? Read More »

ಪ್ರಚಾರ ಮುಗಿಯುತ್ತಿದ್ದಂತೆ ಧ್ಯಾನದ ಮೊರೆಹೋಗಲಿದ್ದಾರೆ ನಮೋ| ಕನ್ಯಾಕುಮಾರಿಯತ್ತ ತೆರಳುತ್ತಾರಾ ಪ್ರಧಾನಿ?

ಸಮಗ್ರ ನ್ಯೂಸ್: ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ಅವರು ವಿಶ್ರಾಂತಿಗಾಗಿ ಆಧ್ಯಾತ್ಮಿಕದತ್ತ ಮುಖ ಮಾಡಲಿದ್ದಾರೆ. ಮೇ 30 ರಿಂದ ಜೂನ್​​ 1ನೇ ತಾರೀಖಿನವರೆಗೆ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇರಲಿದ್ದಾರೆ. ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಹಗಲು-ರಾತ್ರಿ ಧ್ಯಾನದಲ್ಲಿ ತೊಡಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಮಂತ್ರಿಯವರು ಗುರುವಾರ ಸಂಜೆ ಕನ್ಯಾಕುಮಾರಿಯ ಸಮುದ್ರ ಮಧ್ಯೆದಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿರುವ ಸುಂದರವಾದ VRM ಗೆ ಆಗಮಿಸುವ ನಿರೀಕ್ಷೆಯಿದೆ. ಜೂನ್ 1 ರಂದು ದೆಹಲಿಗೆ ತೆರಳಬಹುದು. ಅವರ ಭೇಟಿ ವೇಳೆ

ಪ್ರಚಾರ ಮುಗಿಯುತ್ತಿದ್ದಂತೆ ಧ್ಯಾನದ ಮೊರೆಹೋಗಲಿದ್ದಾರೆ ನಮೋ| ಕನ್ಯಾಕುಮಾರಿಯತ್ತ ತೆರಳುತ್ತಾರಾ ಪ್ರಧಾನಿ? Read More »