May 2024

ಕಡಬ: ಸ್ವಾವಲಂಬಿ ಹೆಜ್ಜೆ ಇರಿಸಿದ್ದ ಎಂಡೋ ಪೀಡಿತ ಯುವಕ ಸಾವು

ಸಮಗ್ರ ನ್ಯೂಸ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಎಂಡೋ ಪೀಡಿತ ಯುವಕ ತನ್ನ ಮೂಗಿನ ಶಸ್ತ್ರಚಿಕಿತ್ಸೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇಲ್ಲಿನ ಪಲ್ಲತ್ತಡ್ಕ ನಿವಾಸಿ ಭಾಸ್ಕರ ಗೌಡ ಹಾಗೂ ರೇವತಿ ದಂಪತಿಯ ಪುತ್ರ ಮನೋಜ್‌(24) ಮೃತಪಟ್ಟವರು. ಮನೋಜ್‌ಗೆ ಮೂಗಿನಲ್ಲಿ ದುರ್ಮಾಂಸ ಬೆಳೆದು ಆಗಾಗ ತೊಂದರೆ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ಏಳು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿ ಫಲಕಾರಿಯಾಗಿತ್ತು. ಲವಲವಿಕೆಯಿಂದ ಇದ್ದ ಈತನಿಗೆ ಇತ್ತೀಚೆಗೆ ಮತ್ತೆ ಮೂಗಿನಲ್ಲಿ ದುರ್ಮಾಂಸ ಬೆಳೆದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ […]

ಕಡಬ: ಸ್ವಾವಲಂಬಿ ಹೆಜ್ಜೆ ಇರಿಸಿದ್ದ ಎಂಡೋ ಪೀಡಿತ ಯುವಕ ಸಾವು Read More »

ಹವಾಮಾನ ವರದಿ| ಚಂಡಮಾರುತ ಪರಿಣಾಮ; ಭಾರೀ ಮಳೆ ಸಾಧ್ಯತೆ| ರಾಜ್ಯದ 23 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಮುಂದಿನ ಐದು ದಿನಗಳಲ್ಲಿ ಕರ್ನಾಟಕದ 23 ಜಿಲ್ಲೆಗಳಲ್ಲಿ ಚಂಡಮಾರುತ ಸಂಭವಿಸುವ ನಿರೀಕ್ಷೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಬಿರುಗಾಳಿಯೊಂದಿಗೆ ಮಳೆಯಾಗಲಿದ್ದು, ಪ್ರತೀ ಗಂಟೆಗೆ ಗಾಳಿಯು 40-50 ಕಿ.ಮೀ. ವೇಗದಲ್ಲಿ ಬೀಸಲಿದೆ. ಜತೆಗೆ ಗುಡುಗು ಸಹಿತ ವರ್ಷಧಾರೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಚಾಮರಾಜನಗರ, ಮಂಡ್ಯ, ರಾಮನಗರ,

ಹವಾಮಾನ ವರದಿ| ಚಂಡಮಾರುತ ಪರಿಣಾಮ; ಭಾರೀ ಮಳೆ ಸಾಧ್ಯತೆ| ರಾಜ್ಯದ 23 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ Read More »

ಸೋಶಿಯಲ್ ಮೀಡಿಯಾದಲ್ಲಿ ಪೆನ್ ಡ್ರೈವ್ ವಿಡಿಯೋ ಹಂಚಿಕೊಂಡಾತ ಈಗ ಪೊಲೀಸ್ ಅತಿಥಿ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದರ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ. ಈಗ ಚಿಕ್ಕಮಗಳೂರಿನಲ್ಲಿ ಯುವ ಪ್ರಜ್ವಲ್ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಹಿಂದೆ ಅಶ್ಲೀಲ ವಿಡಿಯೋ ನೋಡುವುದಕ್ಕೆ ಹಂಚಿಕೆ ಮಾಡುವುದಕ್ಕೆ ಕಾನೂನಿನಲ್ಲಿ ಹೆಚ್ಚಿನ ನಿರ್ಬಂಧ ಇರಲಿಲ್ಲ. ಆದರೆ, ಬೇರೊಬ್ಬರ ಮಾನಹಾನಿ ಮಾಡುವುದಕ್ಕೆ ಯಾವುದೇ ಅವಕಾಶವಿಲ್ಲ. ಇತ್ತೀಚೆಗೆ

ಸೋಶಿಯಲ್ ಮೀಡಿಯಾದಲ್ಲಿ ಪೆನ್ ಡ್ರೈವ್ ವಿಡಿಯೋ ಹಂಚಿಕೊಂಡಾತ ಈಗ ಪೊಲೀಸ್ ಅತಿಥಿ!! Read More »

ಬೆಳಗಾವಿಯಲ್ಲಿ ಅಪಘಾತ; ತಮಿಳು ಕಾರ್ಮಿಕ ಮುಖಂಡ ಶಿವಕುಮಾರ್ ಕೌಡಿಚ್ಚಾರ್ ದುರ್ಮರಣ

ಸಮಗ್ರ ನ್ಯೂಸ್: ತಮಿಳು ಕಾರ್ಮಿಕ ಮುಖಂಡ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್ ಕೌಡಿಚ್ಚಾರ್ ಇಂದು ಬೆಳಗಾವಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ತುರ್ತು ಕೆಲಸದ ನಿಮಿತ್ತ ಬೆಳಗಾವಿಗೆ ತೆರಳಿದ್ದ ಶಿವಕುಮಾರ್, ಬೆಳಗಾವಿಯ ಖಾನಾಪುರ ಎಂಬಲ್ಲಿ ಇವರು ಚಲಾಯಿಸುತ್ತಿದ್ದ ಬೈಕ್ ಡಿವೈಡರ್ ಗೆ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ತಮಿಳು ಮುಖಂಡರಾಗಿ ಕಾಂಗ್ರೆಸ್ ಕಾರ್ಮಿಕ ಸಂಘಟನೆಯಲ್ಲಿ‌ ಗುರುತಿಸಿಕೊಂಡಿದ್ದ ಇವರ ಅಗಲಿಕೆಯು ಇದೀಗ ತಮಿಳು ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.

ಬೆಳಗಾವಿಯಲ್ಲಿ ಅಪಘಾತ; ತಮಿಳು ಕಾರ್ಮಿಕ ಮುಖಂಡ ಶಿವಕುಮಾರ್ ಕೌಡಿಚ್ಚಾರ್ ದುರ್ಮರಣ Read More »

ಬೆಳಗಾವಿ: ಆಸ್ತಿ ವಿಚಾರವಾಗಿ ಮಾತಿನ ಚಕಮಕಿ| ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್:ಆಸ್ತಿ ವಿಚಾರವಾಗಿ ಅಣ್ಣನ ಮಗನಿಂದ ದಬದಬಹಟ್ಟಿ ಗ್ರಾಮದ ಕೇಶವ ಬೋಸಲೆ ಅವರ ಕೊಲೆ ಮಾಡಿದ ಘಟನೆ ಮೇ. 9ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಖಂಡೊಬಾ ಬೋಸಲೆ ಅನ್ನುವ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಹಲವು ವರ್ಷಗಳಿಂದ ಜಮೀನಿನ ಸಲುವಾಗಿ ಚಿಕ್ಕಪ್ಪ ಹಾಗೂ ಯುವಕನ ಜೊತೆ ಜಗಳ ನಡೆಯುತ್ತಲೆ ಇತ್ತು. ಮೇ.9ರಂದು ಇಬ್ಬರು ಕೂಡಿ ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು

ಬೆಳಗಾವಿ: ಆಸ್ತಿ ವಿಚಾರವಾಗಿ ಮಾತಿನ ಚಕಮಕಿ| ಕೊಲೆಯಲ್ಲಿ ಅಂತ್ಯ Read More »

ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ

ಸಮಗ್ರ ನ್ಯೂಸ್: ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅರೇ ನಗ್ನನಾಗಿದ್ದ ಅಬ್ರಾಡ್ ಪ್ರಜೆ, ಬರೀ ಮೈಯಲ್ಲಿ ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ನಗರದಾದ್ಯಂತ ಓಡಾಟ ನಡೆಸಿದ್ದಾನೆ. ಆತನನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿದ್ದು, ಅರ್ಧ ಗಂಟೆಯಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನ 3 ಸುತ್ತು ಓಡಿಸಿದ್ದಾನೆ, ಕೊನೆಗೆ ಆತನನ್ನು ಹಿಡಿದರು, ಆತ ಪರ್ಷಿಯನ್​ ಭಾಷೆ ಮಾತನಾಡುತ್ತಿದ್ದ. ಈ ಹಿನ್ನಲೆ ಆತನ

ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ Read More »

ಜೈಲಲಿರುವ ರೇವಣ್ಣಗೆ ಮತ್ತೆ ಸಂಕಷ್ಟ| ಮೂರು ದಿನ ಯಾರಿಗೂ ಇಲ್ಲ ರೇವಣ್ಣ ಭೇಟಿ ಅವಕಾಶ

ಸಮಗ್ರ ನ್ಯೂಸ್: ಕಿಡ್ನ್ಯಾಪ್ ಕೇಸ್​ನಲ್ಲಿ ಜೈಲು ಸೇರಿರುವ ಎಚ್​.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇವಣ್ಣಗೆ ಸರಿಯಾಗಿ ನಿದ್ರೆ ಇಲ್ಲದೆ, ಆಹಾರ ಸೇವಿಸದೆ ಚಿಂತೆಯಿಂದ ಹೈರಾಣಾಗಿ ಹೋಗಿದ್ದಾರೆ. ಇದರ ಮಧ್ಯೆ ಜೈಲರಿರುವ ರೇವಣ್ಣ ಅವರನ್ನು ಇಂದಿನಿಂದ ಮೂರು ದಿನಗಳ ಕಾಲ ಕುಟುಂಬಸ್ಥರಿಗೆ, ಸಂಬಂಧಿಕರಿಗೆ ಭೇಟಿಗೆ ಅವಕಾಶವಿಲ್ಲ. ಆಪ್ತರ ಭೇಟಿಯಿಂದ ತನ್ನ ನೋವನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ ರೇವಣ್ಣ ಅವರಿಗೆ ಇದೀಗ ಸರ್ಕಾರಿ ರಜೆ ಅಡ್ಡಿಯಾಗಿದೆ. ಇಂದಿನಿಂದ ಮೂರು ದಿನ ಸರ್ಕಾರಿ ರಜೆ

ಜೈಲಲಿರುವ ರೇವಣ್ಣಗೆ ಮತ್ತೆ ಸಂಕಷ್ಟ| ಮೂರು ದಿನ ಯಾರಿಗೂ ಇಲ್ಲ ರೇವಣ್ಣ ಭೇಟಿ ಅವಕಾಶ Read More »

ಪುತ್ತೂರು: ಯುವಕ ಅನುಮಾನಾಸ್ಪದ ಸಾವು| ತಾಯಿ ಸೇರಿ ಮೂವರನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಪುತ್ತೂರಿನ ಬೆಟ್ಟಂಪಾಡಿಯ ಪಾರೆ ಎಂಬಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೇತನ್ (33) ಸಾವನ್ನಪ್ಪಿದ ಯುವಕ. ಚೇತನ್ ನೇಣು ಬಿಗಿದು ಸಾವನ್ನಪ್ಪಿರುವ ಬಗ್ಗೆ ಮೃತನ ತಾಯಿ ಪೋಲೀಸರಿಗೆ ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಮೃತದೇಹ ನೋಡಿ ಅನುಮಾನಗೊಂಡ ಪೋಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಮೃತನ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈತ ಮೇ.09ರ ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್, ತಾಯಿ ಜೊತೆ ಜಗಳವಾಡಿ ಮನೆ ಪಕ್ಕದ

ಪುತ್ತೂರು: ಯುವಕ ಅನುಮಾನಾಸ್ಪದ ಸಾವು| ತಾಯಿ ಸೇರಿ ಮೂವರನ್ನು ಬಂಧಿಸಿದ ಪೊಲೀಸರು Read More »

ಮಡಿಕೇರಿ: ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ| ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ

ಸಮಗ್ರ ನ್ಯೂಸ್ : ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ ಸಿಮ್ ಗಳನ್ನು ಸರಬರಾಜು ಮಾಡುತ್ತಿದ್ದ ಮಡಿಕೇರಿಯ ಜಿಯೋ ಸಿಮ್ ಡಿಸ್ಟ್ರಿಬ್ಯೂಟರ್ ಓರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರೋಷನ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. 2018ರಿಂದ 2023ರ ವರೆಗೆ ಏರ್ ಟೆಲ್ ಸಿಮ್ ಡಿಸ್ಟ್ರಿಬ್ಯುಟರ್ ಆಗಿದ್ದ ಈತ ನಂತರ ಜಿಯೋ ಸಿಮ್ ಡಿಸ್ಟ್ರಿಬ್ಯೂಟರ್ ಆಗಿದ್ದಾನೆ. ವಂಚನೆ ಬೆಳಕಿಗೆ ಬಂದಿದ್ದು ಹೇಗೆ?ಇತ್ತೀಚಿಗೆ ಕೇರಳದ ವ್ಯಕ್ತಿಯೊಬ್ಬರು

ಮಡಿಕೇರಿ: ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ| ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ Read More »

ಬೆಳಗಾವಿ: ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ| ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಸಮಗ್ರ ನ್ಯೂಸ್ : ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿಯ ನ್ಯೂ ಗಾಂಧಿನಗರದಲ್ಲಿ ನಡೆದಿದೆ. ಘಟನೆಯಲ್ಲಿ ಒಂದು ಮಗುವಿಗೆ ಗಂಭೀರ ಗಾಯವಾಗಿದ್ದು, ಗಂಭೀರ ಗಾಯಗೊಂಡ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ಕ್ರಮಕೈಗೊಳ್ಳದ ಮಹಾನಗರ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ನ್ಯೂ ಗಾಂಧಿನಗರ ಹಾಗೂ ಉಜ್ವಲ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಒಂದೂವರೆ ತಿಂಗಳ ಹಿಂದೆ 10ಕ್ಕಿಂತ ಹೆಚ್ಚು ಜನರ ಮೇಲೆ ನಾಯಿಗಳು ಕಚ್ಚಿದ್ದವು. ಎಲ್ಲೆಂದರಲ್ಲಿ ಗುಂಪು

ಬೆಳಗಾವಿ: ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ| ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ Read More »