May 2024

“ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ”- ಡಿಕೆಶಿ ಸ್ಫೋಟಕ ಹೇಳಿಕೆ

ಸಮಗ್ರ ನ್ಯೂಸ್: ಚುನಾವಣೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇದೆ. ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. “ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ” ಎಂಬುದಾಗಿ ಹೇಳಿಕೆ ನೀಡಿರುವುದು ಈಗ ಸಂಚಲನ ಮೂಡಿಸಿದೆ. ಕೇರಳದಲ್ಲಿ ನನ್ನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಸುತ್ತಮುತ್ತ ಯಾಗ ನಡೆಯುತ್ತಿದೆ. ನನ್ನ ಹಾಗೂ ಸಿಎಂ ಮೇಲೆ ಯಾವ […]

“ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ”- ಡಿಕೆಶಿ ಸ್ಫೋಟಕ ಹೇಳಿಕೆ Read More »

ಮಂಗಳೂರು: ರೌಡಿ ಶೀಟರ್ ಭರತ್ ಶೆಟ್ಟಿ ಮೇಲೆ ತಲವಾರು ದಾಳಿ

ಸಮಗ್ರ ನ್ಯೂಸ್‌ : ಸುರತ್ಕಲ್ ನ ಕುಳಾಯಿ ಆರೋನ್ ವೈನ್ಸ್ ಬಳಿ ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ರೌಡಿ ಶೀಟರ್ ಭರತ್ ಶೆಟ್ಟಿ ಎಂಬಾತನ ಮೇಲೆ ತಲವಾರು ದಾಳಿ ನಡೆದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುರತ್ಕಲ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿ ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಭರತ್ ಶೆಟ್ಟಿ ನೀಡಿರುವ ದೂರಿನ ಪ್ರಕಾರ ದೀಕ್ಷಿತ್ ಶೆಟ್ಟಿ ಕೈಕಂಬ ಶೈಲೇಶ್ ಕೈಕಂಬ ಮತ್ತು ಇತರ ಮೂವರ ಜೊತೆಗೆ ಸೇರಿ ಕೃತ್ಯ ಎಸಗಿದ್ದಾರೆ

ಮಂಗಳೂರು: ರೌಡಿ ಶೀಟರ್ ಭರತ್ ಶೆಟ್ಟಿ ಮೇಲೆ ತಲವಾರು ದಾಳಿ Read More »

ಕಿಸಾನ್ ಕರ್ಜಾ ಮಾಫಿ ಆಯೋಗ/ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇವೆ ಎಂದ ರಾಹುಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ನೇತೃತ್ವದ ಮೈತ್ರಿಪಕ್ಷಗಳು ಅಧಿಕಾರಕ್ಕೆ ಬಂದರೆ ‘ಕಿಸಾನ್ ಕರ್ಜಾ ಮಾಫಿ ಆಯೋಗ್’ ತರುವ ಮೂಲಕ ರೈತರ ಸಾಲವನ್ನು ಎಷ್ಟು ಬಾರಿ ಬೇಕಾದರೂ ಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆಯ ನಡುವೆ ಪ್ರಮುಖ ಭರವಸೆ ನೀಡಿದ್ದಾರೆ. “ಇತಿಹಾಸದಲ್ಲಿ ಮೊದಲ ಬಾರಿಗೆ ಈ ಚುನಾವಣೆ ಸಂವಿಧಾನವನ್ನು ಉಳಿಸಲು ಆಗಿದೆ. ಪಕ್ಷವೊಂದು ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಕಿತ್ತುಹಾಕುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದು ಇದೇ ಮೊದಲು. ಬಿಜೆಪಿ ಕೇವಲ ಕೋಟ್ಯಾಧಿಪತಿಗಳಿಗಾಗಿ ಕೆಲಸ ಮಾಡುತ್ತದೆ

ಕಿಸಾನ್ ಕರ್ಜಾ ಮಾಫಿ ಆಯೋಗ/ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇವೆ ಎಂದ ರಾಹುಲ್ Read More »

ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು

ಸಮಗ್ರ ನ್ಯೂಸ್: ನೈಋತ್ಯ ಮುಂಗಾರು ಮಾರುತಗಳು ಮೇ.30 ರಂದು ಕೇರಳವನ್ನು ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಭುವನೇಶ್ವರ ಕೇಂದ್ರವು ಪ್ರಕಟಿಸಿದೆ. ರವಿವಾರ ಪಶ್ಚಿಯ ಬಂಗಾಳ ಹಾಗೂ ಬಾಂಗ್ಲಾದೇಶದ ಮೂಲಕ ಅಪ್ಪಳಿಸಿದ್ದ ಚಂಡಮಾರುತವು ಮಾನ್ಸೂನ್ ಮಾರುತವನ್ನು ಬಂಗಾಳ ಕೊಲ್ಲಿಗೆ ನೂಕಿರುವುದು ಮುಂಚಿತವಾಗಿಯೇ ಈಶಾನ್ಯ ಭಾರತವನ್ನು ಮಾನ್ಸೂನ್ ಆವರಿಸಿಕೊಳ್ಳಲು ಕಾರಣವಿರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, “ನೈಋತ್ಯ ಮಾನ್ಸೂನ್ ಮಾರುತಗಳು ಕೇರಳವನ್ನು ಪ್ರವೇಶಿಸಿದ್ದು, ಇಂದು (ಮೇ

ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು Read More »

ನಷ್ಟದಲ್ಲಿರುವ ಪೇಟಿಎಂ/ ಖರೀದಿಗೆ ಮುಂದಾದರೇ ಅದಾನಿ?

ಸಮಗ್ರ ನ್ಯೂಸ್: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್ ನ ಮಾತೃ ಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‍ನಲ್ಲಿ ಷೇರು ಖರೀದಿಸಲು ಮುಂದಾಗಿದ್ದು, ಈ ಕುರಿತು ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಜತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ. ಮಂಗಳವಾರ ಅಹಮದಾಬಾದ್‍ನಲ್ಲಿರುವ ತಮ್ಮ ಕಚೇರಿಯಲ್ಲಿ ಅದಾನಿ ಅವರು ಶರ್ಮಾರನ್ನು ಭೇಟಿ ಮಾಡಿದರು. ಈ ವೇಳೆ ಒಪ್ಪಂದದ ಸ್ವೂಪದ ಬಗ್ಗೆ ಮಾತುಕತೆ ನಡೆಯತು ಎಂದು ಮೂಲಗಳು ತಿಳಿದು ಬಂದಿದೆ.

ನಷ್ಟದಲ್ಲಿರುವ ಪೇಟಿಎಂ/ ಖರೀದಿಗೆ ಮುಂದಾದರೇ ಅದಾನಿ? Read More »

ವಿದ್ಯುತ್ ಲೈನ್ ದುರಸ್ಥಿ ವೇಳೆ ಚಾರ್ಜ್ ಮಾಡಲೆತ್ನಿಸಿದ ಯುವಕ| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಸಮಗ್ರ ನ್ಯೂಸ್: ವಿದ್ಯುತ್‌ ಲೆ„ನ್‌ ದುರಸ್ತಿ ವೇಳೆ ಲೈನ್‌ ಆಫ್‌ ಮಾಡಲಾಗಿದ್ದನ್ನು ಆನ್‌ ಮಾಡಲು ಯತ್ನಿಸಿದ ಯುವಕನ ಕೃತ್ಯ ಸಿಸಿ ಕೆಮರಾದಲ್ಲಿ ಪತ್ತೆಯಾದ ಘಟನೆ ಬುಧವಾರ ಸುಳ್ಯ ತಾಲೂಕಿನ ಕರಿಕ್ಕಳ ಎಂಬಲ್ಲಿ ನಡೆದಿದೆ. ಘಟನೆಯಿಂದ ಕೂದಲೆಳೆ ಅಂತರದಲ್ಲಿ ಬಾರೀ ದುರಂತವೊಂದು ತಪ್ಪಿದೆ. ಪಂಜ ಮೆಸ್ಕಾಂ ವ್ಯಾಪ್ತಿಯ ಸಿಬ್ಬಂದಿಗಳು ಕರಿಕ್ಕಳ ಸಮೀಪ ವಿದ್ಯುತ್‌ ಲೆ„ನ್‌ಗೆ ತಾಗುತ್ತಿದ್ದ ಮರದ ಗೆಲ್ಲು ತೆರವು ಮಾಡಲು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಯಾರೂ ಕೂಡ ಆಫ್‌ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಬಳಿಕ ಕೆಲಸ

ವಿದ್ಯುತ್ ಲೈನ್ ದುರಸ್ಥಿ ವೇಳೆ ಚಾರ್ಜ್ ಮಾಡಲೆತ್ನಿಸಿದ ಯುವಕ| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ Read More »

ಪ್ರಧಾನಿ ಸ್ಥಾನದ ಗೌರವಕ್ಕೆ ಚ್ಯುತಿ ತಂದ ಮೊದಲ ಪ್ರಧಾನಿ ಮೋದಿ| ಮಾಜಿ ಪಿಎಂ ಮನಮೋಹನ್ ಸಿಂಗ್ ಟೀಕೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿರುವಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಲಿ ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ. ಪ್ರಧಾನಿ ಹುದ್ದೆಯ ಗೌರವಕ್ಕೆ ಚ್ಯುತಿ ತಂದ ಮೊದಲ ಪ್ರಧಾನಿ ಮೋದಿ ಎಂದು ಟೀಕಿಸಿದ್ದಾರೆ. ಕಳೆದ ತಿಂಗಳು ರಾಜಸ್ಥಾನದಲ್ಲಿ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮ್ಮ ಆಸ್ತಿಯನ್ನು ಕಸಿದುಕೊಂಡು ಹೆಚ್ಚು ಮಕ್ಕಳಿರುವವರಿಗೆ ಹಂಚುವುದಾಗಿ ಹೇಳಿದೆ. ಈ ದೇಶದ ಪ್ರಧಾನಿಯಾಗಿದ್ದವು ಹಿಂದೊಮ್ಮೆ ದೇಶದ ಸಂಪತ್ತಿನ ಮೊದಲ

ಪ್ರಧಾನಿ ಸ್ಥಾನದ ಗೌರವಕ್ಕೆ ಚ್ಯುತಿ ತಂದ ಮೊದಲ ಪ್ರಧಾನಿ ಮೋದಿ| ಮಾಜಿ ಪಿಎಂ ಮನಮೋಹನ್ ಸಿಂಗ್ ಟೀಕೆ Read More »

ನಾಳೆಯಿಂದ 6 ದಿನ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್‌, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗಲಿವೆ ಎನ್ನಲಾಗಿದೆ. ಜೂನ್ 1 ರಂದು ಸಂಜೆ 4 ರಿಂದ ಜೂನ್ 3 ರ ಸಂಜೆ 4 ರವರೆಗೆ ವಿಧಾನ ಪರಿಷತ್ ಚುನಾವಣೆಯ ಕಾರಣ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್ 1 ರಂದು ಸಂಜೆ 4 ರ ಒಳಗೆ ಮತ್ತು ಜೂನ್ 3 ರ ಸಂಜೆ 4 ರ ನಂತರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಲೋಕಸಭೆ ಚುನಾವಣೆಯ

ನಾಳೆಯಿಂದ 6 ದಿನ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ Read More »

ಆಪರೇಷನ್‌ಗೆ ಲಂಚ ಕೇಳಿದ್ದ ಮೈಸೂರಿನ ಕೆಆರ್ ಆಸ್ಪತ್ರೆ ವೈದ್ಯ| ಪುಟ್ಟಸ್ವಾಮಿಗೆ 4 ವರ್ಷ ಜೈಲು

ಸಮಗ್ರ ನ್ಯೂಸ್: ಶಸ್ತ್ರಚಿಕಿತ್ಸೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕೆ.ಆರ್. ಆಸ್ಪತ್ರೆ (ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆ) ವೈದ್ಯಾಧಿಕಾರಿ ಡಾ. ಪುಟ್ಟಸ್ವಾಮಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಸ್ತ್ರ ಚಿಕಿತ್ಸೆಗೆಂದು ಬಂದ ರೋಗಿಯವರ ಕಡೆಯಿಂದ ಹಣ ಪಡೆದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದ ವೈದ್ಯಾಧಿಕಾರಿ ಡಾ.ಪುಟ್ಟಸ್ವಾಮಿ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಎಸ್‌.ಆರ್.ದೇವರಾಜು ಎಂಬುವರು ಏಳು ವರ್ಷದ ಹಿಂದೆ

ಆಪರೇಷನ್‌ಗೆ ಲಂಚ ಕೇಳಿದ್ದ ಮೈಸೂರಿನ ಕೆಆರ್ ಆಸ್ಪತ್ರೆ ವೈದ್ಯ| ಪುಟ್ಟಸ್ವಾಮಿಗೆ 4 ವರ್ಷ ಜೈಲು Read More »

9ನೇ ವಯಸ್ಸಿನಲ್ಲಿ 13 ದಾಖಲೆಗಳನ್ನು ಬರೆದ ಕುಮಾರಸ್ವಾಮಿ ಶಾಲಾ ವಿದ್ಯಾರ್ಥಿನಿ

ಸಮಗ್ರ ನ್ಯೂಸ್:ಈಗಾಗಲೇ ಎರಡು ರಾಷ್ಟ್ರ ಹಾಗೂ 6 ವಿಶ್ವ ದಾಖಲೆಗಳನ್ನು ಮಾಡಿರುವ ಯೋಗ ಪಟು ಗೌರಿತಾ ಕೆ.ಜಿ. ಇದೀಗ ಒಂದು ರಾಷ್ಟ್ರ ದಾಖಲೆ ಹಾಗೂ ನಾಲ್ಕು ವಿಶ್ವ ದಾಖಲೆಗಳಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಶಶಾಂಗಾಸನದಿಂದ ಭುಜಂಗಾಸನಕ್ಕೆ(30) ಪರಿವರ್ತಿಸುವ ಮೂಲಕ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ. ಒಂದು ನಿಮಿಷದಲ್ಲಿ 30 ಬಾರಿ ಚಕ್ರಾಸನ ಮಾಡುವ ಮೂಲಕ ಎಲೈಟ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ. ಒಂದು

9ನೇ ವಯಸ್ಸಿನಲ್ಲಿ 13 ದಾಖಲೆಗಳನ್ನು ಬರೆದ ಕುಮಾರಸ್ವಾಮಿ ಶಾಲಾ ವಿದ್ಯಾರ್ಥಿನಿ Read More »