May 2024

ರಿಷಿ ಸುನಕ್ ದಂಪತಿಯ ಆಸ್ತಿ 651 ದಶಲಕ್ಷ ಪೌಂಡ್/ ಶ್ರೀಮಂತಿಕೆಯಲ್ಲಿ ಬ್ರಿಟನ್ ದೊರೆಯನ್ನು ಹಿಂದಿಕ್ಕಿದ ಮೂರ್ತಿ ಅಳಿಯ

ಸಮಗ್ರ ನ್ಯೂಸ್: ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ, ಬೆಂಗಳೂರಿನ ಪ್ರಖ್ಯಾತ ಐಟಿ ಕಂಪನಿ ಇನ್ಫೋಸಿಸ್‍ನ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ- ಸುಧಾಮೂರ್ತಿಯವರ ಮಗಳು ಅಕ್ಷತಾ ಮೂರ್ತಿ ಅವರ ಒಟ್ಟು ಆಸ್ತಿ ಬ್ರಿಟನ್ ದೊರೆ ಚಾಲ್ರ್ಸ್‍ಗಿಂತಲೂ ಹೆಚ್ಚು ಎಂದು ಬ್ರಿಟನ್‍ನ ದ ಸಂಡೇ ಟೈಮ್ಸ್ ವರದಿ ಮಾಡಿದೆ. ದ ಸಂಡೇ ಟೈಮ್ಸ್ ಇತ್ತೀಚೆಗೆ ಬ್ರಿಟನ್‍ನ 1000 ಶ್ರೀಮಂತರು/ ಶ್ರೀಮಂತ ಕುಟುಂಬಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಿಷಿ ಸುನಕ್ ದಂಪತಿ 651 ದಶಲಕ್ಷ ಪೌಂಡ್ […]

ರಿಷಿ ಸುನಕ್ ದಂಪತಿಯ ಆಸ್ತಿ 651 ದಶಲಕ್ಷ ಪೌಂಡ್/ ಶ್ರೀಮಂತಿಕೆಯಲ್ಲಿ ಬ್ರಿಟನ್ ದೊರೆಯನ್ನು ಹಿಂದಿಕ್ಕಿದ ಮೂರ್ತಿ ಅಳಿಯ Read More »

5,8 ಮತ್ತು 9ನೇ ತರಗತಿ ಗುಡ್ ನ್ಯೂಸ್ ನೀಡಿದ ಸರ್ಕಾರ

ಸಮಗ್ರ ನ್ಯೂಸ್: 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ಇನ್ನೂ ನಿರ್ಧಾರ ಆಗದಿರುವ ಕಾರಣ, ಈಗಾಗಲೇ ಶಾಲೆಗಳಲ್ಲಿ ಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಅಗ್ರಿಗೇಟ್ ಮಾಡಿ ಮುಂದಿನ ತರಗತಿಗಳಿಗೆ ದಾಖಲಿಸಲು ಮುಂದಾಗಿದೆ. ಸರ್ವೋಚ್ಚ ನ್ಯಾಯಾಲಯವು 2024ರ ಏಪ್ರಿಲ್ 08ರಂದು ಪಬ್ಲಿಕ್ ಪರೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಈಗ ಈ ಸಂಬಂಧ ತೀರ್ಪು ಪ್ರಕಟವಾಗುವ ಮೂಲಕ ಪಬ್ಲಿಕ್ ಪರೀಕ್ಷೆಯ ಬಗ್ಗೆ ನಿರ್ಧಾರವಾಗಬೇಕಿದೆ. ಅಂದರೆ, 2023-24ನೇ ಸಾಲಿನ 5, 8

5,8 ಮತ್ತು 9ನೇ ತರಗತಿ ಗುಡ್ ನ್ಯೂಸ್ ನೀಡಿದ ಸರ್ಕಾರ Read More »

ಕೊಡಗು: ಬೃಹತ್ ಗಾತ್ರದ ಕಾಡುಕೋಣ ಭೇಟೆ| ಓರ್ವ ಆರೋಪಿ ಬಂಧನ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ಬೃಹತ್ ಗಾತ್ರದ ಕಾಡುಕೋಣವನ್ನು ಭೇಟೆಯಾಡಿದ ಘಟನೆ‌ ಮೇ.20 ರಂದು ನಡೆದಿದೆ. 539 ಕೆ.ಜಿ ಕಾಡುಕೋಣದ ಮಾಂಸ ಸೇರಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಎಮ್ಮೆಮಾಡು ನಿವಾಸಿ ಹ್ಯಾರಿಸ್(42),ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಬೆನ್ನಟ್ಟುವ ಸಂಧರ್ಭದಲ್ಲಿ ಪರಾರಿಯಾಗಿದ್ದಾನೆ. ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳು ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನು ಬೆನ್ನಟ್ಟಿ

ಕೊಡಗು: ಬೃಹತ್ ಗಾತ್ರದ ಕಾಡುಕೋಣ ಭೇಟೆ| ಓರ್ವ ಆರೋಪಿ ಬಂಧನ Read More »

ಪುತ್ತೂರು: ಕೊನೆಗೂ ಸಿಕ್ಕಿದ ಪ್ರೇತವರ| ಆಟಿ ತಿಂಗಳಲ್ಲಿ ನಡೆಯಲಿದೆ ‘ಕುಲೆ ಮದಿಮೆ’

ಸಮಗ್ರ ನ್ಯೂಸ್: ಪ್ರೇತ ವಿವಾಹಕ್ಕೆ ವರ ಬೇಕೆಂದು ಜಾಹೀರಾತು ಹಾಕಿದ ಸುದ್ದಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಜಾಹೀರಾತು ಹಾಕಿದ ಫಲವಾಗಿ ಪ್ರೇತವಿವಾಹಕ್ಕೆ ವರ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರೇತ ವಿವಾಹಕ್ಕೆ ಪ್ರೇತ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ ವರ ಈಗ ನಿಗದಿಯಾಗಿದ್ದು, ಮುಂದಿನ ಆಷಾಡ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. “ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ’ ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ

ಪುತ್ತೂರು: ಕೊನೆಗೂ ಸಿಕ್ಕಿದ ಪ್ರೇತವರ| ಆಟಿ ತಿಂಗಳಲ್ಲಿ ನಡೆಯಲಿದೆ ‘ಕುಲೆ ಮದಿಮೆ’ Read More »

ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್/ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಚಿರಾಗ್ – ಸಾತ್ವಿಕ್ ಜೋಡಿ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರರಾದ ಚಿರಾಗ್ ಶೆಟ್ಟಿ- ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್ 500 (Thailand Open 2024) ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಏಕಪಕ್ಷೀಯವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಏಷ್ಯಾಡ್ ಚಾಂಪಿಯನ್ ಹಾಗೂ ಕೂಟದ ಅಗ್ರ ಶ್ರೇಯಾಂಕಿ ಭಾರತೀಯ ಜೋಡಿ ಚೀನದ ಚೆನ್‌ – ಬೊ ಯಾಂಗ್ – ಲಿಯು ಯಿ ವಿರುದ್ಧ 21-15, 21-15 ನೇರ ಅಂಕಗಳಿಂದ ಹಿಮ್ಮೆಟಿಸಿದರು. ಶನಿವಾರ ನಡೆದಿದ್ದ ಸೆಮಿಫೈನಲ್

ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್/ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಚಿರಾಗ್ – ಸಾತ್ವಿಕ್ ಜೋಡಿ Read More »

ಇಬ್ರಾಹಿಂ ರೈಸಿ ನಿಧನ/ ಸಂತಾಪ ಸೂಚಿಸಿದ ನರೇಂದ್ರ ಮೋದಿ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೆಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬ ಮತ್ತು ಇರಾನ್ ಜನತೆಗೆ ನನ್ನ ಹೃತ್ತೂರ್ವಕ ಸಂತಾಪ. ಈ ದುಃಖದ ಸಮಯದಲ್ಲಿ ಭಾರತವು ಇರಾನ್‌ನೊಂದಿಗೆ ನಿಂತಿದೆ” ಎಂದು ಪ್ರಧಾನಿ ಮೋದಿ ಟ್ವೀಟ್

ಇಬ್ರಾಹಿಂ ರೈಸಿ ನಿಧನ/ ಸಂತಾಪ ಸೂಚಿಸಿದ ನರೇಂದ್ರ ಮೋದಿ Read More »

ರೈತರಿಗೆ ಶುಭ ಸುದ್ದಿ ನೀಡಿದ ಹವಾಮಾನ ಇಲಾಖೆ| ಭಾರತಕ್ಕೆ ಪ್ರವೇಶಿಸಿದ ಮುಂಗಾರು ಮಳೆ

ಸಮಗ್ರ ನ್ಯೂಸ್: ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ರೈತರಿಗೆ ಪ್ರಸಕ್ತ ಹಂಗಾಮಿಗೆ ಶುಭ ಸುದ್ದಿ ಹೊರಬಿದ್ದಿದೆ. ಕೇಂದ್ರ ಹವಾಮಾನ ಇಲಾಖೆ ಪ್ರಕಾರ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಲಾ ನಿನಾ ಪರಿಸ್ಥಿತಿಯಿಂದಾಗಿ ಪೆಸಿಫಿಕ್ ಸಾಗರದ ತಂಪಾಗುವಿಕೆಯು ಈ ವರ್ಷ ಉತ್ತಮ ಮಳೆಯಾಗಲು ಕಾರಣವಾಗುತ್ತದೆ. ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಈಗಾಗಲೇ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ‘ನೈಋತ್ಯ ಮುಂಗಾರು ಮಾಲ್ಡೀವ್ಸ್‌ ಹಾಗೂ ಕಮೋರಿನ್‌ ದ್ವೀಪಗಳನ್ನು ದಾಟಿ ಬಂಗಾಳ ಕೊಲ್ಲಿಯ ನಿಕೋಬಾರ್‌

ರೈತರಿಗೆ ಶುಭ ಸುದ್ದಿ ನೀಡಿದ ಹವಾಮಾನ ಇಲಾಖೆ| ಭಾರತಕ್ಕೆ ಪ್ರವೇಶಿಸಿದ ಮುಂಗಾರು ಮಳೆ Read More »

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು

ಸಮಗ್ರ ನ್ಯೂಸ್: ಅಜರ್‌ಬೈಜಾನ್‌ ನಿಂದ ಮರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕೊನೆಯುಸಿರೆಳೆದಿದ್ದಾರೆ. ರವಿವಾರ ನಡೆದ ಘಟನೆಯಲ್ಲಿ ಇರಾನ್ ಅಧ್ಯಕ್ಷರು ಮೃತಪಟ್ಟಿದ್ದಾರೆ ಎಂದು ಇದೀಗ ಖಚಿತಪಡಿಸಲಾಗಿದೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೇನ್‌ ಅಮೀರಬ್‌ ದೊಲ್ಲಾಹಿಯನ್‌ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾದ ಕೆಲವೇ ನಿಮಿಷಗಳಲ್ಲಿ, ಇರಾನ್ ಅಧ್ಯಕ್ಷ ರೈಸಿ

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು Read More »

ಹವಾಮಾನ ವರದಿ| ವಾಯುಭಾರ ಕುಸಿತ; 14 ಜಿಲ್ಲೆಗಳಲ್ಲಿ ಅಲರ್ಟ್

ಸಮಗ್ರ ನ್ಯೂಸ್: ಕಳೆದ 6 ತಿಂಗಳಿನಿಂದ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಮತ್ತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿದ್ದು ಹವಾಮಾನ ಇಲಾಖೆ 14 ಜಿಲ್ಲೆಗಳಲ್ಲಿ ಆರೆಂಜ್, ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗೆ ಆರೆಂಜ್ ಅಲರ್ಟ್, ಉತ್ತರಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಮುಂದಿನ ಐದು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು

ಹವಾಮಾನ ವರದಿ| ವಾಯುಭಾರ ಕುಸಿತ; 14 ಜಿಲ್ಲೆಗಳಲ್ಲಿ ಅಲರ್ಟ್ Read More »

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ರಂದು ವಾಯುವ್ಯ ಇರಾನ್​ನ ಜೋಲ್ಫಾದಲ್ಲಿ ಪತನವಾಗಿದೆ ಎಂದು ಇರಾನ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವ ಹೂಸೈನ್ ಅಮಿರಾಬ್ದೊಲ್ಹೈನ್ ಇಬ್ಬರು ಪೂರ್ವ ಅಜರ್‌ಬೈಜಾನ್‌ನಲ್ಲಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಅವಘಡದ ಶಂಕೆ ವ್ಯಕ್ತವಾಗಿದ್ದು,

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ Read More »