May 2024

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದ್ವಾದಶ ರಾಶಿಗಳ ಮೇಲೆ ಈ ವಾರ ಶುಕ್ರನ ಸಂಚಾರ ಇರಲಿದ್ದು ಇದು ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಸ್ವಕ್ಷೇತ್ರಕ್ಕೆ ಪ್ರವೇಶವಾದ ಕಾರಣ ಹೆಚ್ಚು ಉತ್ತಮ ಫಲವೇ ಇರಲಿದೆ. ಎಲ್ಲ ಗ್ರಹರೂ ಶುಭಫಲವನ್ನೇ ನಿಮಗೆ ಕೊಡಲಿ ಎಂಬುದು ಹಾರೈಸುತ್ತಾ ಈ ವಾರ ರಾಶಿಗಳ ಗೋಚಾರಫಲ ಏನು ಎಂದು ತಿಳಿಯೋಣ. ಮೇಷ ರಾಶಿ : ಇದು ರಾಶಿ ಚಕ್ರದ ಮೊದಲ ರಾಶಿಯಾಗಿದ್ದು ಈ ವಾರವು ಶುಭಫಲವು ಇರುವುದು. ದ್ವಿತೀಯದಲ್ಲಿ ಶುಕ್ರ, ಬುಧ, ಸೂರ್ಯ, ಗುರುವಿರುವುದು ಸಕಾರಾತ್ಮಕವಾಗಿ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಉಡುಪಿ: ಆವರಣ ಗೋಡೆ ಕುಸಿದು 3 ದ್ವಿಚಕ್ರ ವಾಹನ ಜಖಂ

ಸಮಗ್ರ ನ್ಯೂಸ್‌ : ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಉಡುಪಿ ನಗರದ ಹಳೆ ಬಸ್ ಸ್ಟ್ಯಾಂಡ್ ಸಮೀಪದ ಕೃಷ್ಣಾ ಕ್ಯಾಂಪೇಕ್ಸ್ ಶ್ರೀ ನಾಗದೇವರ ಸನ್ನಿಧಿಯ ಪಕ್ಕದ ಆವರಣದ ಗೋಡೆ ಕುಸಿದು 3 ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ. ಉಡುಪಿ ಬೋರ್ಡ್ ಶಾಲೆಯ ಆವರಣ ಗೋಡೆ ಕುಸಿದಿದ್ದು, ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಾತ್ರಿಯಿಡಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು ಕೆಲವೆಡೆ ಮರಗಿಡಗಳು ಧರೆಗುರುಳಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಉಡುಪಿ: ಆವರಣ ಗೋಡೆ ಕುಸಿದು 3 ದ್ವಿಚಕ್ರ ವಾಹನ ಜಖಂ Read More »

ಪುತ್ತೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ‌ ಸಾವು

ಸಮಗ್ರ ನ್ಯೂಸ್: ಪುತ್ತೂರಿನ ಕಬಕ ಸಮೀಪದ ಕೂವೆತ್ತಿಲದಲ್ಲಿ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಯುವತಿ ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಂಜುಶ್ರೀ (20). ಕೆಲವು ದಿನಗಳ ಹಿಂದೆ ಕಬಕ ಸಮೀಪದ ಕೂವೆತ್ತಿಲದಲ್ಲಿ ಕಾರು ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಮಂಜುಶ್ರೀ ಗಂಭೀರ ಗಾಯಗೊಂಡಿದ್ದರು. ಆ ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ

ಪುತ್ತೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ‌ ಸಾವು Read More »

ಉಡುಪಿ: ರೆಬೆಲ್ ರಘುಪತಿ ಭಟ್ ಗೆ ಬಿಜೆಪಿಯಿಂದ ಗೇಟ್ ಪಾಸ್

ಸಮಗ್ರ ನ್ಯೂಸ್: ವಿಧಾನಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ರಘುಪತಿ ಭಟ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದುದರಿಂದ, ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ

ಉಡುಪಿ: ರೆಬೆಲ್ ರಘುಪತಿ ಭಟ್ ಗೆ ಬಿಜೆಪಿಯಿಂದ ಗೇಟ್ ಪಾಸ್ Read More »

ಧರ್ಮಸ್ಥಳ: ಸಿಎಂ, ಡಿಸಿಎಂ ಎದುರು ಜೈ ಶ್ರೀರಾಮ್, ಜೈ ಮೋದಿ ಘೋಷಣೆ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಧರ್ಮಸ್ಥಳ ಭೇಟಿ ನೀಡಿದ್ದ ವೇಳೆ ಜೈ ಶ್ರೀ ರಾಮ್ ಹಾಗೂ ಜೈ ಮೋದಿ ಘೋಷಣೆ ಕೇಳಿಬಂದಿದೆ. ಪಂಜೆ, ಶಲ್ಯ ತೊಟ್ಟು, ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ರಾಜ್ಯಸಭಾ ಸದಸ್ಯರೂ ಆಗಿರುವ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ತೆರಳುತ್ತಿರೋ ವೇಳೆ ಹೊರಗೆ ಸರತಿ

ಧರ್ಮಸ್ಥಳ: ಸಿಎಂ, ಡಿಸಿಎಂ ಎದುರು ಜೈ ಶ್ರೀರಾಮ್, ಜೈ ಮೋದಿ ಘೋಷಣೆ Read More »

ಇಂದು 6ನೇ ಹಂತದ ಲೋಕಸಭಾ ಚುನಾವಣೆ

ಸಮಗ್ರ ನ್ಯೂಸ್: ಇಂದು 6ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು. ಈ ಚುನಾವಣೆಯಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 889 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಜೂನ್ 4ರಂದು ಎಲ್ಲ ಹಂತಗಳ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಇಂದು ಬಿಹಾರ (8 ಸ್ಥಾನಗಳು), ಹರಿಯಾಣ (ಎಲ್ಲಾ 10 ಸ್ಥಾನಗಳು), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಜಾರ್ಖಂಡ್ (4 ಸ್ಥಾನಗಳು), ದೆಹಲಿ (ಎಲ್ಲಾ 7 ಸ್ಥಾನಗಳು), ಒಡಿಶಾ (6 ಸ್ಥಾನಗಳು),

ಇಂದು 6ನೇ ಹಂತದ ಲೋಕಸಭಾ ಚುನಾವಣೆ Read More »

ಪೋಲಿಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು|ಠಾಣೆಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿದ ಸಂಬಂಧಿಕರು

ಸಮಗ್ರ ನ್ಯೂಸ್: ದಾವಣಗೆರೆ ಜಿಲ್ಲೆಯ ಚನ್ನಗಿರಿ ಠಾಣೆಯ ಪೋಲಿಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಮೃತ ವ್ಯಕ್ತಿಯ ಸಂಬಂಧಿಕರು ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಮುಂಭಾಗದಲ್ಲಿ ನೂರಾರು ಜನರು ಜಮಾಯಿಸಿದ್ದು, ಇದು ಲಾಕಪ್ ಡೆತ್ ಎಂದು ಆರೋಪಿಸುತ್ತಿದ್ದಾರೆ. ಪೊಲೀಸ್ ಜೀಪ್ ಎಳೆದು, ಠಾಣೆ ವ್ಯಾಪ್ತಿಯ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಹಿನ್ನಲೆ ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ ನನ್ನು

ಪೋಲಿಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು|ಠಾಣೆಗೆ ನುಗ್ಗಿ ವಸ್ತುಗಳನ್ನು ಧ್ವಂಸ ಮಾಡಿದ ಸಂಬಂಧಿಕರು Read More »

ಉಡುಪಿ: ನಡುರಸ್ತೆಯಲ್ಲೇ ಗ್ಯಾಂಗ್ ವಾರ್| ಇಬ್ಬರನ್ನು ಅರೆಸ್ಟ್ ಮಾಡಿದ ಖಾಕಿ| ಹೊಡೆದಾಟದ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗರುಡ ಗ್ಯಾಂಗ್ ಗೆ ಸೇರಿದ ಇಬ್ಬರು ಆರೋಪಿಗಳಾದ ಆಶಿಕ್ ಮತ್ತು ರಖೀಬ್ ಎಂಬವರನ್ನು ಬಂಧಿಸಲಾಗಿದ್ದು ಉಳಿದವರು ಪರಾರಿಯಾಗಿದ್ದಾರೆ. ಮೇ 20ರಂದು ಪ್ರಕರಣ ದಾಖಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ

ಉಡುಪಿ: ನಡುರಸ್ತೆಯಲ್ಲೇ ಗ್ಯಾಂಗ್ ವಾರ್| ಇಬ್ಬರನ್ನು ಅರೆಸ್ಟ್ ಮಾಡಿದ ಖಾಕಿ| ಹೊಡೆದಾಟದ ವಿಡಿಯೋ ವೈರಲ್ Read More »

ಇಂದು(ಮೇ.25) ಧರ್ಮಸ್ಥಳಕ್ಕೆ ಸಿಎಂ ಮತ್ತು‌ ಡಿಸಿಎಂ ಭೇಟಿ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಳಗ್ಗೆ 11:30 ಕ್ಕೆ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು 12.05ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಸ್ತೆ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಮಧ್ಯಾಹ್ನ 1.05 ಕ್ಕೆ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಸಂಜೆ 4 ಗಂಟೆಗೆ ಧರ್ಮಸ್ಥಳದಿಂದ ಹೊರಟು ಮಂಗಳೂರು

ಇಂದು(ಮೇ.25) ಧರ್ಮಸ್ಥಳಕ್ಕೆ ಸಿಎಂ ಮತ್ತು‌ ಡಿಸಿಎಂ ಭೇಟಿ Read More »

ಹೆಲ್ಮೆಟ್ ಧರಿಸಿಲ್ಲವೆಂದು ಟಿಪ್ಪರ್ ಲಾರಿ ಚಾಲಕನಿಗೆ ಫೈನ್ ಹಾಕಿದ ಪೋಲಿಸರು…!

ಸಮಗ್ರ ನ್ಯೂಸ್: ಉತ್ತರ ಕನ್ನಡದಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹೌದು ಟಿಪ್ಪರ್ ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಹೊನ್ನಾವರ ಸಂಚಾರ ಠಾಣೆ ಪೊಲೀಸರು ವಿಥೌಟ್ ಹೆಲ್ಮೆಟ್ ದಂಡ ಹಾಕಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಚಂದ್ರಕಾಂತ್ ಹಳ್ಳೇರ ಎಂಬವರು ಮರಳು ತುಂಬಿದ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹೊನ್ನಾವರ ಸಂಚಾರಿ ಪೊಲೀಸರು, ಅಳ್ಳಂಕಿ ಎಂಬಲ್ಲಿ ತಡೆದು 500 ರೂಪಾಯಿ ದಂಡ ಹಾಕಿ ರಶೀದಿ ನೀಡಿದ್ದಾರೆ. ಬಳಿಕ ಚಾಲಕ ರಶೀದಿಯನ್ನು ನೋಡಿ ಒಂದು ಕ್ಷಣ ಶಾಕ್

ಹೆಲ್ಮೆಟ್ ಧರಿಸಿಲ್ಲವೆಂದು ಟಿಪ್ಪರ್ ಲಾರಿ ಚಾಲಕನಿಗೆ ಫೈನ್ ಹಾಕಿದ ಪೋಲಿಸರು…! Read More »