Ad Widget .

9ನೇ ವಯಸ್ಸಿನಲ್ಲಿ 13 ದಾಖಲೆಗಳನ್ನು ಬರೆದ ಕುಮಾರಸ್ವಾಮಿ ಶಾಲಾ ವಿದ್ಯಾರ್ಥಿನಿ

ಸಮಗ್ರ ನ್ಯೂಸ್:ಈಗಾಗಲೇ ಎರಡು ರಾಷ್ಟ್ರ ಹಾಗೂ 6 ವಿಶ್ವ ದಾಖಲೆಗಳನ್ನು ಮಾಡಿರುವ ಯೋಗ ಪಟು ಗೌರಿತಾ ಕೆ.ಜಿ. ಇದೀಗ ಒಂದು ರಾಷ್ಟ್ರ ದಾಖಲೆ ಹಾಗೂ ನಾಲ್ಕು ವಿಶ್ವ ದಾಖಲೆಗಳಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.

Ad Widget . Ad Widget .

ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಶಶಾಂಗಾಸನದಿಂದ ಭುಜಂಗಾಸನಕ್ಕೆ(30) ಪರಿವರ್ತಿಸುವ ಮೂಲಕ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ. ಒಂದು ನಿಮಿಷದಲ್ಲಿ 30 ಬಾರಿ ಚಕ್ರಾಸನ ಮಾಡುವ ಮೂಲಕ ಎಲೈಟ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ.

Ad Widget . Ad Widget .

ಒಂದು ನಿಮಿಷದಲ್ಲಿ 20 ಬಾರಿ ರಾಜಕುಪುಟಾಸನದಿಂದ ವಾಲ್ಮೀಕಿಯಾಸನಕ್ಕೆ ಪರಿವರ್ತಿಸುವ ಮೂಲಕ ತನ್ನ ಹೆಸರನ್ನು ಚೋಲನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಿದ್ದಾರೆ. ಒಂದು ನಿಮಿಷದಲ್ಲಿ 30 ಬಾರಿ ಭುಜಂಗಾಸನದಿಂದ ಪರ್ವತಾಸನಕ್ಕೆ ಪರಿವರ್ತಿಸುವ ಮೂಲಕ ಓಎಂಜಿ ನ್ಯಾಷನಲ್ ರೆಕಾರ್ಡಿನಲ್ಲಿ ದಾಖಲಿಸಿಕೊಂಡಿರುತ್ತಾಳೆ.
ಜೂನ್ 23ರಂದು ಬೆಂಗಳೂರಿನ ಚಾಮರಾಜನಗರದ ಅಕ್ಕಮಹಾದೇವಿ ಸಭಾಭವನದಲ್ಲಿ ನಡೆಯುವ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯ 117ನೇ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಬೆಳಕು ಸಂಭ್ರಮದಲ್ಲಿ ರಾಷ್ಟ್ರಮಟ್ಟದ ಯೋಗರತ್ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈಕೆ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಶರತ್ ಮರ್ಗಿಲಡ್ಕರವರ ಮಾರ್ಗದರ್ಶನದಲ್ಲಿ ಯೋಗಭ್ಯಾಸವನ್ನು ಮಾಡುತ್ತಿದ್ದಾರೆ. ಇವರು ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ದಂಪತಿ ಪುತ್ರಿ.

Leave a Comment

Your email address will not be published. Required fields are marked *