Ad Widget .

ವಿದ್ಯುತ್ ಲೈನ್ ದುರಸ್ಥಿ ವೇಳೆ ಚಾರ್ಜ್ ಮಾಡಲೆತ್ನಿಸಿದ ಯುವಕ| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಸಮಗ್ರ ನ್ಯೂಸ್: ವಿದ್ಯುತ್‌ ಲೆ„ನ್‌ ದುರಸ್ತಿ ವೇಳೆ ಲೈನ್‌ ಆಫ್‌ ಮಾಡಲಾಗಿದ್ದನ್ನು ಆನ್‌ ಮಾಡಲು ಯತ್ನಿಸಿದ ಯುವಕನ ಕೃತ್ಯ ಸಿಸಿ ಕೆಮರಾದಲ್ಲಿ ಪತ್ತೆಯಾದ ಘಟನೆ ಬುಧವಾರ ಸುಳ್ಯ ತಾಲೂಕಿನ ಕರಿಕ್ಕಳ ಎಂಬಲ್ಲಿ ನಡೆದಿದೆ. ಘಟನೆಯಿಂದ ಕೂದಲೆಳೆ ಅಂತರದಲ್ಲಿ ಬಾರೀ ದುರಂತವೊಂದು ತಪ್ಪಿದೆ.

Ad Widget . Ad Widget .

ಪಂಜ ಮೆಸ್ಕಾಂ ವ್ಯಾಪ್ತಿಯ ಸಿಬ್ಬಂದಿಗಳು ಕರಿಕ್ಕಳ ಸಮೀಪ ವಿದ್ಯುತ್‌ ಲೆ„ನ್‌ಗೆ ತಾಗುತ್ತಿದ್ದ ಮರದ ಗೆಲ್ಲು ತೆರವು ಮಾಡಲು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಯಾರೂ ಕೂಡ ಆಫ್‌ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಬಳಿಕ ಕೆಲಸ ನಿರ್ವಹಿಸಲು ತೆರಳಿದ್ದರು. ಅದೇ ವೇಳೆಗೆ ಅಲ್ಲೇ ಸಮೀಪದ ರೂಂನಲ್ಲಿದ್ದ ರಬ್ಬರ್‌ ಟ್ಯಾಪರ್‌ ಕೆಲಸ ನಿರ್ವಹಿಸುವ ಯುವಕನೋರ್ವ ಚಾರ್ಜ್‌ ಮಾಡಲು ಯತ್ನಿಸಿದ್ದು, ಈ ವೇಳೆ ಜೆಒಸಿ ಉಪಕರಣದ ಬೋಲ್ಟ್ ತುಂಡಾಗಿ ವಿದ್ಯುತ್‌ ಪ್ರವಹಿಸಲು ಕೆಲವು ಇಂಚು ಬಾಕಿ ಉಳಿದ ಕಾರಣ ಬಾರೀ ದುರಂತವೊಂದು ತಪ್ಪಿದೆ.

Ad Widget . Ad Widget .

ಕೆಲ ಸಮಯದ ಬಳಿಕ ಘಟನೆ ಮೆಸ್ಕಾಂ ಸಿಬ್ಬಂದಿಗಳ ಗಮನಕ್ಕೆ ಬಂದಿದ್ದು, ಅವರು ಸಮೀಪದ ಸಿಸಿ ಕೆಮರಾ ಪರಿಶೀಲನೆ ವೇಳೆ ಅಲ್ಲಿನ ಯುವಕನ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಯುವಕನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *