ನಾಳೆಯಿಂದ 6 ದಿನ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್‌, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗಲಿವೆ ಎನ್ನಲಾಗಿದೆ. ಜೂನ್ 1 ರಂದು ಸಂಜೆ 4 ರಿಂದ ಜೂನ್ 3 ರ ಸಂಜೆ 4 ರವರೆಗೆ ವಿಧಾನ ಪರಿಷತ್ ಚುನಾವಣೆಯ ಕಾರಣ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್ 1 ರಂದು ಸಂಜೆ 4 ರ ಒಳಗೆ ಮತ್ತು ಜೂನ್ 3 ರ ಸಂಜೆ 4 ರ ನಂತರ ಮದ್ಯ ಮಾರಾಟಕ್ಕೆ ಅವಕಾಶವಿದೆ.

Ad Widget ... ..

ಲೋಕಸಭೆ ಚುನಾವಣೆಯ ಮತ ಎಣಿಕೆಯ ಕಾರಣ ಜೂನ್ 3 ರ ಮಧ್ಯರಾತ್ರಿಯಿಂದ ಜೂನ್ 4 ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೊರಡಿಸಲಾಗಿದೆ.ಜೂನ್ 6 ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಎಂಎಲ್‌ಸಿ ಚುನಾವಣೆಯ ಮತ ಎಣಿಕೆಯ ಕಾರಣ ಮದ್ಯ ಮಾರಾಟ ಇರುವುದಿಲ್ಲ.

Ad Widget

ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಸಲುವಾಗಿ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶವನ್ನು ಹೊರಡಿಸಲಾಗಿದೆ. ಇದಲ್ಲದೇ ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್‌ ಆಗಲಿದ್ದು, ಜೂನ್ 3 ರವರೆಗೆ ಬಂದ್ ಮಾಡಬೇಕಾಗುತ್ತದೆ.

ಇನ್ನೂ ಜೂನ್‌ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿರುವ ಹಿನ್ನಲೆಯಲ್ಲಿ ಅಂದ ಕೂಡ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರುವ ಕಾರಣ ಅಂದೂ ಸಹ ಬಾರ್ ಬಂದ್‌ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಜೂನ್‌ ಮೊದಲ ವಾರ ಪೂರ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಅನುಮಾನವಾಗಿದೆ.

Leave a Comment

Your email address will not be published. Required fields are marked *