Ad Widget .

ಕಾಸರಗೋಡು: ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ಮದುವೆ| ಲವ್ ಜಿಹಾದ್ ಗೆ ಮುಸ್ಲಿಂ ಲೀಗ್ ಕುಮ್ಮಕ್ಕು!?

ಸಮಗ್ರ ನ್ಯೂಸ್: ಕರ್ನಾಟಕ ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಮಾಡುತ್ತಿದೆ. ಮಂಗಳೂರು ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಸದ್ದಿಲ್ಲದೆ ಮದುವೆ ಆಗಿದ್ದು, ಮುಸ್ಲಿಂ ಲೀಗ್ ನಾಯಕನೊಬ್ಬ ಈ ಪ್ರಕರಣದಲ್ಲಿ ಬೆಂಬಲ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

Ad Widget . Ad Widget .

ಕಾಸರಗೋಡಿನ ಬದಿಯಡ್ಕದಲ್ಲಿ ʼಲವ್‌ ಜಿಹಾದ್ʼ ಎನ್ನಲಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಹಿಂಪ ಸೇರಿ ಹಿಂದೂ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ನಾಪತ್ತೆಯಾಗಿದ್ದ ಯುವತಿ ಅನ್ಯಮತೀಯ ಯುವಕನ ಜೊತೆ ಠಾಣೆಗೆ ಹಾಜರಾಗಿದ್ದು, ತಮಗೆ ಮದುವೆಯಾಗಿದೆ ಎಂದು ತಿಳಿಸಿದ್ದಾಳೆ.

Ad Widget . Ad Widget .

ಕಾಸರಗೋಡಿನಲ್ಲಿ ಖಾಸಗಿ ಸಂಸ್ಥೆಯೊಂದರ ಶಿಕ್ಷಕಿಯಾಗಿದ್ದ ಯುವತಿ ನೇಹಾ, ಮುಸ್ಲಿಂ ಯುವಕ ಮಿರ್ಶಾದ್ ಎಂಬಾತನ ಜೊತೆ ತೆರಳಿದ್ದಳು. ಸದ್ಯ ಪೊಲೀಸರ ಮುಂದೆ ಪ್ರತ್ಯಕ್ಷಳಾಗಿರುವ ಈಕೆಯನ್ನು ಪೊಲೀಸರು ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸ್ವಇಚ್ಛೆಯಿಂದ ಯುವಕನ ಜೊತೆ ತೆರಳಿದ್ದೇನೆ ಎಂದು ಆಕೆ ಹೇಳಿದ್ದಾಳೆ.

ಆದರೆ ಈ ʼಲವ್ ಜಿಹಾದ್ʼ ಹಿಂದೆ ಕೇರಳದ ಮುಸ್ಲಿಂ ಲೀಗ್ ನೇತಾರನ ಷಡ್ಯಂತ್ರವಿದೆ; ಮುಸ್ಲಿಂ ಲೀಗ್ ನೇತಾರನೊಬ್ಬ ಷಡ್ಯಂತ್ರ ರೂಪಿಸಿ ಪ್ರೇಮಾಂಕುರವಾಗುವಂತೆ ಮಾಡಿದ್ದಾನೆ. ಆ ನೆಪದಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಿಸಲು ಭಾರೀ ಸಂಚು ರೂಪಿಸಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.

ನೇಹಾಳ ತಂದೆಯ ದೂರಿನಂತೆ ಬದಿಯಡ್ಕ ಪೊಲೀಸರು ನಾಪತ್ತೆ ಕೇಸು ದಾಖಲಿಸಿದ್ದರು. ದೂರಿನಲ್ಲಿ, ಪೋಷಕರು ಯುವತಿಯ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು. ಮೇ.23ರಂದು ಮನೆಯಿಂದ ಹೊರಟ ನೇಹಾ ದಿಢೀರ್ ನಾಪತ್ತೆಯಾಗಿದ್ದಳು. ಆ ಬಳಿಕ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿ ಇಬ್ಬರ ಭಾವಚಿತ್ರಗಳ ಸಹಿತ ನೋಟೀಸ್ ಪತ್ತೆಯಾಗಿದೆ. ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ನೇಹಾ ಮತ್ತು ಮಿರ್ಶಾದ್, ಮದುವೆಯಾಗಿ ಮೇ.27ರಂದು ಬದಿಯಡ್ಕ ಠಾಣೆಗೆ ಹಾಜರಾಗಿದ್ದರು.

Leave a Comment

Your email address will not be published. Required fields are marked *