ಸಮಗ್ರ ನ್ಯೂಸ್: ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಅಡ್ವೋಕೆಟ್ ಪ್ರಶಸ್ತಿಗೆ, ಕಾಂಗೋದ ವಿಶ್ವಸಂಸ್ಥೆ ಮಿಷನ್‍ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳಾ ಶಾಂತಿ ಪಾಲಕಿ ಮೇಜರ್ ರಾಧಿಕಾ ಸೇನಾ ಅವರು ಭಾಜನರಾಗಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗ್ಯುಟೆರ್ರೆಸ್, ರಾಧಿಕಾ ಅವರನ್ನು ನಿಜ ನಾಯಕಿ, ಮಾದರಿ ಎಂದು ಬಣ್ಣಿಸಿದ್ದಾರೆ.
ಕಾಂಗೋದಲ್ಲಿ ಯುನೈಟೆಡ್ ನೇಷನ್ಸ್ ಸ್ಟೆಬಿಲೆಷನ್ ಮಿಷನ್‍ನಲ್ಲಿ ಕಾರ್ಯ ನಿರ್ವಹಿಸಿದ್ದ ರಾಧಿಕಾ ಅವರಿಗೆ 2023ನೇ ಸಾಲಿನ ಮಿಲಿಟರಿ ಅಡ್ವೋಕೆಟ್ ಆಫ್ ದಿ ಇಯರ್ ಗೌರವ ದೊರೆತಿದ್ದು, ಮೇ.30ರಂದು ಅಂತರಾಷ್ಟ್ರೀಯ ಶಾಂತಿ ಪಾಲಕರ ದಿನದಂದು ಗುಟೇರಸ್ ಪ್ರಶಸ್ತಿಯನ್ನು ನೀಡಲಿದ್ದಾರೆ. ಉತ್ತರ ಕಿವುವಿನಲ್ಲಿ ನಡೆದಿದ್ದ ಸಂಘರ್ಷದ ಸಮಯದಲ್ಲಿ ರಾಧಿಕಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಪಡೆದಿದ್ದರು. 2019ರಲ್ಲಿ ಈ ಪ್ರಶಸ್ತಿಯನ್ನ ಪಡೆದಿದ್ದ ಮೇಜರ್ ಸುಮನ್ ಗವಾನಿ ಬಳಿಕ ಈ ಗೌರವಕ್ಕೆ ಭಾಜನರಾದ ಪಡೆದ ಎರಡನೇ ಭಾರತೀಯರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಧಿಕಾ ಸೇನ್ ಮೂಲತಃ ಹಿಮಾಚಲ ಪ್ರದೇಶದವರು. 8 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು.