Ad Widget .

ಗುಂಡು ಹಾರಿಸಲು ಸಿದ್ಧವಾದ ನಾಯಿ/ ಚೀನಾ ಸೇನೆ ಸಿದ್ಧಪಡಿಸಿದೆ ರೋಬೋಟ್ ನಾಯಿ

ಸಮಗ್ರ ನ್ಯೂಸ್: ಶತ್ರುಗಳ ಮೇಲೆ ದಾಳಿಗೆ ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್‍ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿರುವ ಹೊತ್ತಿನಲ್ಲಿ, ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮಥ್ರ್ಯ ಹೊಂದಿರುವ ಅತ್ಯಾಧುನಿಕ ರೋಬೋಟ್ ನಾಯಿಗಳನ್ನು ಅಭಿವೃದ್ಧಿಪಡಿಸಿದೆ. ಕಳೆದ ಕೆಲ ದಿನಗಳಿಂದ ತೈವಾನ್ ಸುತ್ತಮುತ್ತಲೂ ಭಾರೀ ಪ್ರಮಾಣದ ನೌಕಾ ಕಸರತ್ತು ನಡೆಸುತ್ತಿರುವ ಚೀನಾ ಸೇನೆ, ಈ ವೇಳೆ ತನ್ನ ರೋಬೋಟ್ ನಾಯಿಯನ್ನು ಬಳಸಿ ಪ್ರದರ್ಶನ ನೀಡಿದೆ. ಈ ಕುರಿತ ವಿಡಿಯೋ ಇದೀಗ ಜಾಗತಿಕ ಸೇನಾ ವಲಯದಲ್ಲಿ ಭಾರೀ ಸದ್ದು ಮಾಡಿದೆ.

Ad Widget . Ad Widget .

15 -50 ಕೆಜಿ ತೂಕ ಇರುವ ಈ ರೋಬೋ ನಾಯಿಗೆ 4ಡಿ ಸೂಪರ್ ವೈಡ್ ಆಂಗಲ್ ಸೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಜೊತೆಗೆ ಅದರೊಳಗೆ ಬ್ಯಾಟರಿ ಮತ್ತು ಪವರ್ ಸಿಸ್ಟಮ್ ಕೂಡಾ ಇದೆ. ಈ ರೋಬೋ ನಾಯಿ ಹಿಂದೆ, ಮುಂದೆ, ಅಕ್ಕ, ಪಕ್ಕ ಯಾವುದೇ ಕಡೆ ಬೇಕಾದರೂ ಚಲಿಸಬಲ್ಲದಾಗಿದೆ. ಜೊತೆಗೆ ಸಾಮಾನ್ಯ ನಾಯಿಯಂತೆ ಬಗ್ಗುವ, ಹಾರುವ, ಸಾಗುವ ಹಾದಿಯಲ್ಲಿ ಯಾವುದೇ ಅಡೆತಡೆ ಎದುರಾಧರೆ ಸ್ವಯಂ ತನ್ನ ಚಲನವಲನ ನಿರ್ಧರಿಸುವ ಸಾಮಥ್ರ್ಯ ಹೊಂದಿದೆ.

Ad Widget . Ad Widget .

ಒಮ್ಮೆ ಚಾರ್ಜ್ ಮಾಡಿದರೆ 2-4 ಗಂಟೆ ಕಾಲ ಗುಂಡಿನ ದಾಳಿ ನಡೆಸಬಲ್ಲದು. ನಾಯಿಯ ತಲೆಯ ಮೇಲ್ಭಾಗದಲ್ಲಿ ಅತ್ಯಾಧುನಿಕ ಗನ್ ಅಳವಡಿಸಲಾಗಿದ್ದು, ಅದರ ಮೂಲಕ ಗುಂಡು ಹಾರಿಸಬಲ್ಲದಾಗಿದೆ. ಇದು ತಾನು ಇರುವ ಸ್ಥಳದ ಸುತ್ತಲಿನ ಪ್ರತಿ ಬೆಳವಣಿಗೆಯ ಕುರಿತು ತತ್‍ಕ್ಷಣದ ಮಾಹಿತಿಯನ್ನು ನಿರ್ವಾಹಕರಿಗೆ ರವಾನಿಸುತ್ತದೆ. ಅದನ್ನು ಆಧರಿಸಿ ರಿಮೋಟ್ ಮೂಲಕ ರೋಬೋಟ್ ನಿರ್ವಹಿಸುವವರು ನಾಯಿಯನ್ನು ಎಲ್ಲಿಗೆ ಬೇಕಾದರೂ ಕಳುಹಿಸಬಹುದು ಮತ್ತು ಹೇಗೆ ಬೇಕಾದರೂ ದಾಳಿ ಮಾಡಬಹುದು.ಲಾಭ ಏನು?:

ಎದುರಾಳಿಗಳ ದಾಳಿ ತಡೆಯುವ ವೇಳೆ ಅಥವಾ ಅವರ ಮೇಲೆ ದಾಳಿ ನಡೆಸುವ ವೇಳೆ ಯೋಧರು ಗುಂಡಿನ ದಾಳಿಗೆ ತುತ್ತಾಗಿ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆದರೆ ರೋಬೋ ಬಳಸಿದರೆ ಅಂಥ ಅಪಾಯ ಇರದು. ಜೊತೆಗೆ ಇವುಗಳ ಚಲನೆಯ ವೇಗ ಕೂಡಾ ಯೋಧರಿಗಿಂತ ಹೆಚ್ಚಿರುತ್ತದೆ. ಜೊತೆಗೆ ತನ್ನ ಸುತ್ತಲೂ 360 ಡಿಗ್ರಿ ಪ್ರದೇಶದಲ್ಲಿ ಆಗುವ ಪ್ರತಿ ಚಲನವಲನಗಳ ಮೇಲೂ ಕಣ್ಣಿಡುವ ಸಾಮಥ್ರ್ಯ ಇದಕ್ಕಿರುತ್ತದೆ.

Leave a Comment

Your email address will not be published. Required fields are marked *