Ad Widget .

ಶಾಂತ ಸ್ಥಿತಿಯತ್ತ ರೆಮಾಲ್/ ಕುಸಿತಗೊಂಡ ಚಂಡಮಾರುತದ ವೇಗ

ಸಮಗ್ರ ನ್ಯೂಸ್: 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ರೆಮಾಲ್ ಚಂಡಮಾರುತದ ವೇಗ ನಿಧಾನವಾಗಿ ಕುಸಿಯುತ್ತಿದ್ದು, ಇಂದು ರಾತ್ರಿ ಹೊತ್ತಿಗೆ ಗಾಳಿಯ ವೇಗ ಗಂಟೆಗೆ 70-80 ಕಿಲೋಮೀಟರ್ ನಿಂದ 50-70 ಕಿಲೋಮೀಟರಗೆ ಕುಸಿಯುವ ಸಾಧ್ಯತೆಯಿದೆ.

Ad Widget . Ad Widget .

ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿ ಗಡಿಯ ತೀರಕ್ಕೆ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತ್ತು. ಪರಿಣಾಮ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

Ad Widget . Ad Widget .

ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ ಅಪಾರ ಹಾನಿಯುಂಟಾಗಿದೆ. ಕೋಲ್ಕತ್ತಾದಲ್ಲಿ ಮೆಟ್ರೋ ಮತ್ತು ಹಲವು ರೈಲುಗಳ ಸಂಚಾರ ರದ್ದಾಗಿದೆ. ಪಶ್ಚಿಮ ಬಂಗಳಾದಲ್ಲಿ ಇಬ್ಬರು, ಬಾಂಗ್ಲಾದಲ್ಲಿ ಏಳು ಮಂದಿ ಬಲಿ ಆಗಿದ್ದಾರೆ.

ಇದೀಗ ಚಂಡಮಾರುತ ದುರ್ಬಲಗೊಂಡ ನಂತರ ಕೋಲ್ಕತ್ತಾದಲ್ಲಿ ವಿಮಾನಸೇವೆಗಳು ಪುನಾರಂಭಗೊಂಡಿವೆ. ಮಂಗಳವಾರ ಸಂಜೆಯವರೆಗೂ ಗಾಳಿ ಮಳೆಯ ಪರಿಸ್ಥಿತಿ ಇರಲಿದೆ. ಸದ್ಯ ಚಂಡಮಾರುತ ಅಸ್ಸಾಂ, ಮೇಘಾಲಯದತ್ತ ಚಲಿಸುತ್ತಿದೆ.

Leave a Comment

Your email address will not be published. Required fields are marked *