Ad Widget .

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಇದೆಂತಾ ಅ(ವ್ಯ)ವಸ್ಥೆ| ಬೀದಿಯಲ್ಲೇ ಮಲಗಿದ ಭಕ್ತಾಧಿಗಳು

ಸಮಗ್ರ ನ್ಯೂಸ್: ಬೇಸಿಗೆ ರಜೆ ಮತ್ತು‌ ‘ಶಕ್ತಿ’ ಯೋಜನೆಯಿಂದಾಗಿ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಗಳು ತುಂಬಿ ತುಳುಕುತ್ತಿದ್ದು, ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ ಸೇರಿದಂತೆ ಪ್ರಸಿದ್ಧ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ರಾಜ್ಯದ ನಂ. ೧ ಮುಜುರಾಯಿ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಕ್ತರ ದಂಡೇ ಕಂಡುಬರುತ್ತಿದ್ದು, ಮೂಲ ಸೌಕರ್ಯ ನೀಡಲು ದೇವಸ್ಥಾನದ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ.

Ad Widget . Ad Widget .

ಶಕ್ತಿ ಯೋಜನೆ ಪರಿಣಾಮ ಮಹಿಳಾ ಭಕ್ತರ‌ ದಂಡು ಕುಕ್ಕೆ ಕ್ಷೇತ್ರದತ್ತ ಹರಿದು ಬರುತ್ತಿದ್ದು, ಇವರಿಗೆ ಪ್ರಮುಖ ಮೂಲಸೌಕರ್ಯ, ವಸತಿ ನೀಡಲು ದೇವಳದ ಆಡಳಿತ ಮಂಡಳಿ ಹೆಣಗಾಡುತ್ತಿದೆ. ರಾತ್ರಿ ವೇಳೆ ಉಳಿದುಕೊಳ್ಳಲು ವಸತಿ ಸೌಕರ್ಯ ಸಿಗದೆ ದೇವಳದ ಮುಂಭಾಗದ ರಥಬೀದಿಯಲ್ಲಿ ಭಕ್ತರು ಮಲಗಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಒಂದೆಡೆ ಈ ಕಥೆಯಾದರೆ ವಾಹನಗಳ ಮೂಲಕ ಆಗಮಿಸುವ ಭಕ್ತರಿಗೆ ಸರಿಯಾದ ಪಾರ್ಕಿಂಗ್ ಸೂಚನೆಗಳಿಲ್ಲದೆ ರಸ್ತೆ‌ಯಲ್ಲೇ ಪಾರ್ಕಿಂಗ್ ‌ಮಾಡಿ ದೇವಳಕ್ಕೆ ಭೇಟಿ ನೀಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ದೇವಳದ ಪಾರ್ಕಿಂಗ್ ಖಾಲಿ ಇದ್ದರೂ ವಾಹನಗಳನ್ಜು ರಥಬೀದಿ ಸುತ್ತಮುತ್ತ ಪಾರ್ಕಿಂಗ್ ಮಾಡುವುದರಿಂದ ನಿತ್ಯ ಸಂಚಾರಕ್ಕೂ ತೊಡಕಾಗುತ್ತಿದೆ.

ನಿಗದಿತ ವ್ಯವಸ್ಥೆಗಳನ್ನು ಕಲ್ಪಿಸದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಅಥವಾ ಗೃಹರಕ್ಷಕ ದಳದ ಸಿಬ್ಬಂದಿ ನೇಮಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಅತೀ ಹೆಚ್ಚು ಆದಾಯ ಸಂಗ್ರಹಿಸುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೇ ಭಕ್ತರಿಗೆ ಈ ಸಮಸ್ಯೆಯಾದರೆ ಸಾಮಾನ್ಯ ಕ್ಷೇತ್ರಗಳ ಗತಿಯೇನು? ಈ ಹಿಂದೆ ಈ ರೀತಿಯ ಸಮಸ್ಯೆ ಉಂಟಾದಾಗ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯದ ಭೋಜನ ಶಾಲೆಯನ್ನು ರಾತ್ರಿ ವೇಳೆ ಮಲಗಲು ಅನುಮತಿ ನೀಡುತ್ತಿದ್ದುದನ್ನು ಈ ವೇಳೆ ಸ್ಮರಿಸಬಹುದಾಗಿದೆ.

Leave a Comment

Your email address will not be published. Required fields are marked *