Ad Widget .

ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ..!

ಸಮಗ್ರ ನ್ಯೂಸ್: ಗದಗದಲ್ಲಿ ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಕೋಪದಿಂದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ಗದಗ ಜಿಲ್ಲೆಯ ಟಾಂಗಾ ಕೂಟ್ ಬಳಿ ನಡೆದಿದೆ.

Ad Widget . Ad Widget . Ad Widget . Ad Widget .

ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ವಿನಾಯಕ ಕಬಾಡಿಯಿಂದ ಗೋವಿಂದರಾಜ ಶಿರಹಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ. ಇದೀಗ ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಗೋವಿಂದರಾಜ ಶಿರಹಟ್ಟಿ ಇಸ್ಕಾನ್ ಕೀರ್ತನೆ ಸಂಘ ನಡೆಸುತ್ತಿದ್ದರು. ಇದೇ ಸಂಘದಿಂದ ವಿನಾಯಕನನ್ನ ತೆಗೆದು ಹಾಕಲಾಗಿತ್ತು. 2018ರಿಂದ 2023ರವರೆಗೆ ಕೀರ್ತನಾ ಸಂಘದಲ್ಲಿದ್ದ ವಿನಾಯಕ ಕಬಾಡಿ, ಕಳೆದ 1 ವರ್ಷದಿಂದ ದೂರ ಇಡಲಾಗಿತ್ತು. ಇದಕ್ಕೆ ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು.

Ad Widget . Ad Widget .

ಆದರೆ ಏನು ಕಾರಣ ಇಲ್ಲದೆ ಸಂಘದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡಿದ್ದ ವಿನಾಯಕ, ಇದೇ ವಿಚಾರಕ್ಕೆ 1 ವರ್ಷದಿಂದ ಗೋವಿಂದರಾಜ ಜತೆ ಗಲಾಟೆ ಮಾಡುತ್ತಿದ್ದ. ಇಂದು ಇದೇ ವಿಚಾರವಾಗಿ ಹಲ್ಲೆ ಮಾಡಲಾಗಿದೆ.

Leave a Comment

Your email address will not be published. Required fields are marked *