ಸಮಗ್ರ ನ್ಯೂಸ್: ಮಡಿಕೇರಿ, ಕಳೆದ ಹದಿನೈದು ದಿನಗಳಿಂದ ಸುರಿದ ಪೂರ್ವ ಮುಂಗಾರು ಮಳೆಗೆ ಸಂಪೂರ್ಣ ಬದಲಾಗಿ ಹೋಗಿದೆ.
ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಇಡೀ ಮಡಿಕೇರಿ ಕೂಲ್ ಕೂಲ್ ಆಗಿದ್ದು, ಚುಮು-ಚುಮು ಚಳಿ ಹೊಡೆಯುತ್ತಿದೆ. ಮತ್ತೊಂದೆಡೆ ದಟ್ಟ ಮಂಜು ಸುರಿಯುತ್ತಿದೆ. ಹೀಗಾಗಿ ಮಡಿಕೇರಿ ಈಗ ಅಕ್ಷರಶಃ ದಕ್ಷಿಣ ಭಾರತದ ಸ್ವಿಡ್ಜರ್ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎನ್ನುವ ಉಪಮೇಯದ ಹೆಸರುಗಳಿಗೆ ತಕ್ಕಂತೆ ಬದಲಾಗಿದೆ.
ಬೆಳಿಗ್ಗೆ ಸಂಜೆ ಅಷ್ಟೇ ಅಲ್ಲ, ಆಗಿಂದಾಗ್ಗೆ ದಟ್ಟನೆ ಮಂಜು ಮಡಿಕೇರಿಯನ್ನು ಹಾದು ಸಾಗುತ್ತಿದ್ದರೆ ಹಿಮ ಪರ್ವತವೇ ಮಡಿಕೇರಿಗೆ ಇಳಿದಂತೆ ಕಾಣುತ್ತಿದೆವಾಹನ ಸವಾರರು ಲೈಟ್ಗಳನ್ನು ಹಾಕಿಕೊಂಡೇ ಚಾಲನೆ ಮಾಡಬೇಕಾಗಿದೆ. ಹೀಗೆ ಜಿಟಿ-ಜಿಟಿ ಮಳೆ ಅಲ್ಲದಿದ್ದರೂ, ಆಗಿಂದಾಗ್ಗೆ ಸಾಧಾರಣವಾಗಿ ಸುರಿಯುತ್ತಿರುವ ಮಳೆ, ಮಳೆಯ ಜೊತೆ ಜೊತೆಗೆ ಸುರಿಯುತ್ತಿರುವ ಮಂಜು ಮಡಿಕೇರಿಗೆ ಹಿಂದಿನ ಗತವೈಭವವನ್ನು ತಂದಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಕೊಡಗಿಗೆ ಬರುತ್ತಿರುವ ಪ್ರವಾಸಿಗರು ಕೊಡಗಿನ ಈ ಕೂಲ್ ಕೂಲ್ ಪರಿಸರವನ್ನು ಎಂಜಾಯ್ ಮಾಡುತ್ತಿದ್ದಾರೆ.