Ad Widget .

ಕೊಡಗು:ಶನಿವಾರಸಂತೆಯಲ್ಲಿ ಕಳ್ಳತನ ನಡೆಸಿದ ಆರೋಪಿಯ ಬಂಧನ

ಸಮಗ್ರ ನ್ಯೂಸ್:ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಸುಳುಗಳಲ್ಲೆ ಕಾಲೋನಿ ನಿವಾಸಿಯಾದ ಸುಂದರ್ ಬಿ.ಕೆ ಎಂಬುವರು ಮೇ. 24ರಂದು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 12:30 ಗಂಟೆಗೆ ಸುಂದರ ಅವರ ಮಗಳು ಮನೆಗೆ ಬಂದು ನೋಡಿದಾಗ ಮನೆಯ ಒಳಗಿದ್ದ ಬೀರು ಮುರಿದಿರುವುದು ಗೋಚರಿಸಿದೆ. ನಂತರ ನೋಡಿದಾಗ 51.5 ಗ್ರಾಂ ಚಿನ್ನಾಭರಣ ಕಳುವಾಗಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳ್ಳತನ ಮಾಡಿರುವ ಬಗ್ಗೆ ಶನಿವಾರಸಂತೆ ಠಾಣೆಗೆ ಸುಂದರರವರು ನೀಡಿರುವ ದೂರಿನ ಅನ್ಮಯ ಪೊಲೀಸರು ತನಿಖೆಯನ್ನು ಕೈಗೊಂಡು ಮಾಹಿತಿ ಸಂಗ್ರಹಿಸಿದ್ದಾರೆ. ಮೇ 27ರಂದು ಸುಳುಗಳಲೆ ಗ್ರಾಮದ ನಿವಾಸಿಯಾದ ಜೀವನ್ (25) ಎಂಬುವನನ್ನು ಬಂಧಿಸಿ ಆತನಿಂದ 45ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯ ವಿಚಾರಣೆ ಸಂದರ್ಭ ಕಳೆದ ಫೆಬ್ರುವರಿ 11ರಂದು ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಾಲಯದ ಕಚೇರಿಯ ಬೀಗವನ್ನು ಮುರಿದು ಕಾಣಿಕೆ ಹುಂಡಿಯನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

Ad Widget . Ad Widget . Ad Widget .

ಪ್ರಕರಣದ ಆರೋಪಿಯ ಪತ್ತೆಗಾಗಿ ಸೋಮರಪೇಟೆ ಡಿ ವೈ ಎಸ್ ಪಿ ಗಂಗಾಧರಪ್ಪ ವೃತ್ತ ನಿರೀಕ್ಷಕ ಪ್ರೀತಮ್, ಶನಿವಾರ ಸಂತೆ ಠಾಣಾಧಿಕಾರಿ ರವಿಶಂಕರ್ ಹಾಗೂ ಗೋವಿಂದ್ ರಾಜ್ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ರವರು ಶ್ಲಾಘಿಸಿದ್ದಾರೆ.

Leave a Comment

Your email address will not be published. Required fields are marked *