Ad Widget .

ಐಪಿಎಲ್ ಕ್ರಿಕೆಟ್-2024| ಮೂರನೇ ಬಾರಿ ಕಪ್ ಗೆ ಮುತ್ತಿಕ್ಕಿದ ಕೆಕೆಆರ್

ಸಮಗ್ರ ನ್ಯೂಸ್: ಸಮರ್ಥ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ (IPL 2024) ಟ್ರೋಫಿ ಗೆದ್ದಿದೆ. ಫೈನಲ್​ ಪಂದ್ಯದಲ್ಲಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.

Ad Widget . Ad Widget .

ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್​ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಕೆಕೆಆರ್ ಐಪಿಎಲ್​ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.

Ad Widget . Ad Widget .

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್ ತಂಡ 18.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್​ ರಹ್ಮನುಲ್ಲಾ ಗುರ್ಬಜ್​ 39 ರನ್ ಬಾರಿಸಿದರು.

ಐಪಿಎಲ್‌ನ ಅತ್ಯಂತ ದೊಡ್ಡ ಮೊತ್ತ (287 ರನ್) ಗಳಿಸಿದ ದಾಖಲೆಯನ್ನೂ ಈ ಟೂರ್ನಿಯಲ್ಲಿ ಸನ್‌ರೈಸರ್ಸ್ ಮಾಡಿತ್ತು. ನಾಲ್ಕು ಬಾರಿ 250ಕ್ಕೂ ಹೆಚ್ಚಿನ ರನ್‌ಗಳ ಮೊತ್ತವನ್ನೂ ಗಳಿಸಿತ್ತು. ಆದರೆ ಈ ಪಂದ್ಯದಲ್ಲಿ 18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು. ಟೂರ್ನಿಯಲ್ಲಿಯೇ ತಂಡವೊಂದು ಗಳಿಸಿದ ಎರಡನೇ ಅತಿ ಕಡಿಮೆ ಮೊತ್ತ ಇದಾಯಿತು. ಸನ್‌ರೈಸರ್ಸ್‌ ಇನಿಂಗ್ಸ್‌ನಲ್ಲಿ ಕೇವಲ 3 ಸಿಕ್ಸರ್‌ಗಳು ದಾಖಲಾದವು.

Leave a Comment

Your email address will not be published. Required fields are marked *