Ad Widget .

ದುಬೈ ಪ್ರಯಾಣಿಕರೇ ಹುಷಾರು/ ರಿಟರ್ನ್ ಟಿಕೆಟ್ ಇಲ್ಲದೇ ವಿಮಾನ ಹತ್ತಬೇಡಿ

ಸಮಗ್ರ ನ್ಯೂಸ್: ಅಕ್ರಮ ವಲಸೆಯನ್ನು ತಡೆಯಲು ಮಧ್ಯಪ್ರಾಚ್ಯ ರಾಷ್ಟ್ರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿ ವೀಸಾ ಹೊಂದಿರುವವರಿಗೆ ವಾಪಸ್‌ ಟಿಕೆಟ್‌, ಸುತ್ತಾಡಲು ಕನಿಷ್ಠ ಹಣ ಹಾಗೂ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಆಗಿದ್ದರಷ್ಟೇ ರಾಷ್ಟ್ರದ ಒಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಕಳೆದ ತಿಂಗಳು ಹತ್ತಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕಳುಹಿಸಲಾಗಿದೆ.

Ad Widget . Ad Widget .

ಗಡಿಪಾರು ಸಮಸ್ಯೆ ತಡೆಯುವ ಸಲುವಾಗಿ ಭಾರತೀಯ ವಿಮಾನ ನಿಲ್ದಾಣಗಳಿಂದಲೇ ಕಟ್ಟುನಿಟ್ಟಾಗಿ ದಾಖಲಾತಿಗಳನ್ನು ಪರಿಶೀಲಿಸಿ ಯುಎಇ ವಿಮಾನ ಹತ್ತಲು ಅನುಮತಿಸಲಾಗುತ್ತಿದೆ. ಯುಎಇಯಲ್ಲಿ ದುಬೈ ಹಾಗೂ ಅಬುಧಾಬಿಯಲ್ಲಿ ಇಳಿಯಲು ಪ್ರತ್ಯೇಕ ವೀಸಾ ಪಡೆದುಕೊಳ್ಳುವ ಅಗತ್ಯವಿದ್ದು, ಸಮರ್ಪಕ ವೀಸಾ ಹೊಂದಿದ್ದಲ್ಲಿ ಮಾತ್ರ ವಿಮಾನ ಹತ್ತಲು ಅನುವು ಮಾಡಿಕೊಡಲಾಗುತ್ತಿದೆ. ಅಲ್ಲದೆ ಕನಿಷ್ಠ ₹60 ಸಾವಿರ ಹಣ ಇಲ್ಲವೇ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದಲ್ಲಿ ಮಾತ್ರ ವಿಮಾನ ಹತ್ತಲು ಅವಕಾಶ ನೀಡಲಾಗುತ್ತಿದೆ.

Ad Widget . Ad Widget .

ಟೂರಿಸ್ಟ್‌ ವೀಸಾ ಪಡೆದು ಯುಎಇಗೆ ತೆರಳುವವರ ಅಲ್ಲೇ ಅಕ್ರಮವಾಗಿ ನೆಲೆಸಿ ಕೂಲಿ ಕೆಲಸಗಳಲ್ಲಿ ತೊಡಗುತ್ತಾರೆ. ಇದು ಅಲ್ಲಿ ವ್ಯಾಪಕವಾಗಿ ಜನದಟ್ಟಣೆಯಾಗಲು ಕಾರಣವಾಗಿದೆ. ಹಾಗಾಗಿ ಟೂರಿಸ್ಟ್‌ ವೀಸಾ ಕೇವಲ 96 ಗಂಟೆಗಳಿಗೆ ಮಾತ್ರ ನೀಡುವ ಕಾರಣ ಅಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ, ಹಿಂದಿರುಗಲು ವಿಮಾನ ಟಿಕೆಟ್‌ ಹಾಗೂ ಕನಿಷ್ಠ ಪ್ರಮಾಣದ ಹಣ (₹60 ಸಾವಿರ) ಇಲ್ಲವೇ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದಲ್ಲಿ ಮಾತ್ರ ಯುಎಇ ವಿಮಾನ ಹತ್ತಲು ಅನುಮತಿಸಲಾಗುತ್ತದೆ.

Leave a Comment

Your email address will not be published. Required fields are marked *