Ad Widget .

ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ಚೇಸ್‌ ಮಾಡಿ ಕಳ್ಳತನ…!

ಸಮಗ್ರ ನ್ಯೂಸ್: ಕಳ್ಳತನ ಹೇಗೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ ನೋಡಿ, ಯಾವ ಸಿನಿಮಾ ದೃಶ್ಯಕ್ಕೂ ಕಡಿಮೆ ಇಲ್ಲ. ಮಧ್ಯಪ್ರದೇಶದಲ್ಲಿ ಮೂವರು ಕಳ್ಳರು, ಚಲಿಸುತ್ತಿದ್ದ ಟ್ರಕ್‌ನಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ.

Ad Widget . Ad Widget .

ಚಲಿಸುತ್ತಿದ್ದ ಟ್ರಕ್‌ಅನ್ನು ಬೈಕ್‌ ಮೇಲೆಯೇ ಚೇಸ್‌ ಮಾಡಿದ ಕಳ್ಳರು ಭಾರಿ ಪ್ರಮಾಣದ ವಸ್ತುಗಳನ್ನು ಕದ್ದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ‌

Ad Widget . Ad Widget .

ಈ ಘಟನೆ ನಡೆದಿದ್ದು ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ. ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸಿ ಇದರಲ್ಲಿದ್ದ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಸ್ವಲ್ಪ ಸಮತೋಲನ ತಪ್ಪಿದರೂ ಬಿದ್ದು ಮೃತಪಡುವ ಸಾಧ್ಯತೆಗಳು ಜಾಸ್ತಿ ಇತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *