Ad Widget .

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಫೋಟಕ ಟ್ವಿಸ್ಟ್| ಸತ್ಯ ಬಿಚ್ಚಿಟ್ಟ ಜಗದೀಶ್ ಪತ್ನಿ..!

ಸಮಗ್ರ ನ್ಯೂಸ್: ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಇದೀಗ ಸ್ಪೋಟಕ ಟ್ವಿಸ್ಟ್​ ಸಿಕ್ಕಿದೆ. ಸೌಂದರ್ಯ ಜಗದೀಶ್ ಅವರ ಬ್ಯುಸಿನೆಸ್ ಪಾರ್ಟನರ್ಸ್ ಮೇಲೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Ad Widget . Ad Widget .

ಸೌಂದರ್ಯ ಕನ್​​​ಸ್ಟ್ರಕ್ಷನ್​ ಸಂಬಂಧ ಬ್ಯುಸಿನೆಸ್ ಲಾಸ್ ಬಗ್ಗೆ ಡೆತ್​ನೋಟ್​​ನಲ್ಲಿ ಬರೆದಿದ್ದಾರೆ. ಸುಮಾರು 60 ಕೋಟಿ ರೂಪಾಯಿ ನಷ್ಟಕ್ಕೆ ಪಾಲುದಾರರು ಕಾರಣ ಎಂದು ಉಲ್ಲೇಖಿಸಲಾಗಿತ್ತು. ಈ ಸಂಬಂಧ ಈಗ ಬ್ಯುಸಿನೆಸ್ ಪಾರ್ಟನರ್ಸ್​​ ಮೇಲೆ FIR ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Ad Widget . Ad Widget .

ಇದೇ ವಿಚಾರವಾಗಿ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಅವರು, ಇದೇ ತಿಂಗಳ 29ಕ್ಕೆ ನಮ್ಮ ಯಜಮಾನರ ಪೂಜೆ ಇದೆ. ಪೂಜೆ ಇರುವ ಕಾರಣ ಶ್ರೀರಂಗಪಟ್ಟಣದಲ್ಲಿ ಅವರ ಹಳೇ ಬಟ್ಟೆ ಬಿಡಬೇಕು ಅದಕ್ಕಾಗಿ ಅವರ ವಾರ್ಡ್ರೋಬ್ ಚೆಕ್ ಮಾಡಿದಾಗ ಡೆರ್ ನೋಟ್ ಸಿಕ್ಕಿತ್ತು. ಡೆತ್ ನೋಟ್ ನೋಡಿ ನನಗೆ ತುಂಬಾ ಶಾಕ್ ಆಯ್ತು, ಡೆತ್ ನೋಟ್ ನಲ್ಲಿ ಅವರ ಬ್ಯುಸಿನೆಸ್ ಪಾರ್ಟನರ್ ಸುರೇಶ್, ಹೊಂಬಣ್ಣ ಅವರ ಕಿರುಕುಳದ ಬಗ್ಗೆ ಬರೆದಿದ್ದಾರೆ. ನಮ್ಮ ಯಜಮಾನರು ಅವರನ್ನು ತುಂಬಾ ನಂಬಿದ್ದರು, ಅವರು ಮೋಸ ಮಾಡಿದ್ದಾರೆ.

ಖಾಲಿ ಚೆಕ್ ಮೇಲೆ ಸಹಿ ಹಾಕಿಸಿಕೊಂಡು ಪೋರ್ಜರಿ ಮಾಡಿದ್ದಾರೆ. ಅವರ ಕಿರುಕುಳದಿಂದಲೇ ನಮ್ಮ ಯಜಮಾನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ತೆಗೆದುಕೊಂಡು ಹೋಗಿ ಪೊಲೀಸರಿಗೆ ನೀಡಿದ್ದೇನೆ. ಅವರು ತನಿಖೆ ಮಾಡಿ ನನಗೆ ನ್ಯಾಯ ಕೊಡಿಸ್ತೀನಿ ಅಂತ ಹೇಳಿದ್ದಾರೆ. ಸುರೇಶ್ ಮತ್ತು ಹೊಂಬಣ್ಣ ಅವರಿಂದ ನನಗೆ ಮತ್ತು ನನ್ನ ಮಗನಿಗೂ ಥ್ರೆಟ್ ಇದೆ. ನಮ್ಮ ಯಜಮಾನರ ಸಾವಿಗೆ ನ್ಯಾಯ ಕೊಡಿಸಿ ಅಂತ ಶಶಿರೇಖಾ ಅವರು ಕಣ್ಣೀರಿಟ್ಟಿದ್ದಾರೆ.

Leave a Comment

Your email address will not be published. Required fields are marked *