Ad Widget .

ಛತ್ರಿ ಹಿಡಿದು ಬಸ್ ಚಾಲನೆ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಡ್ರೈವರ್, ಕಂಡಕ್ಟರ್ ಸಸ್ಪೆಂಡ್..!

ಸಮಗ್ರ ನ್ಯೂಸ್: ಇತ್ತೀಚೆಗೆ ಸಾರಿಗೆ ಬಸ್‌ನಲ್ಲಿ ಚಾಲಕ ಛತ್ರಿ ಹಿಡಿದು ಬಸ್ ಚಾಲನೆ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು . ಈ ವಿಡಿಯೋ ನೋಡಿ ಸಾರ್ವಜನಿಕರು ಕಳಪೆ ನಿರ್ವಹಣೆ ಬಗ್ಗೆ ಸಾರಿಗೆ ನಿಗಮದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ, ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆ ಮಾಡಿದಾಗ, ಸತ್ಯ ಸಂಗತಿ ಹೊರಬಿದ್ದಿದೆ.

Ad Widget . Ad Widget .

ಮಳೆಯಿಂದ ಬಸ್ ಸೋರಿಲ್ಲ, ಮೋಜಿಗಾಗಿ ಡ್ರೈವರ್ ಕೊಡೆ ಹಿಡಿದು ಚಾಲನೆ ಮಾಡಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಡ್ರೈವರ್, ಕಂಡಕ್ಟರ್ ಇಬ್ಬರನ್ನೂ ಅಮಾನತು ಮಾಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

Ad Widget . Ad Widget .

ಇದರಲ್ಲಿ ಕೊಡೆ ಹಿಡಿದು ಡ್ರೈವರ್ ಚಾಲನೆ ಮಾಡುತ್ತಿದ್ದರೆ ನಿರ್ವಾಹಕಿ ವಿಡಿಯೊ ಸೆರೆಹಿಡಿದಿದ್ದಾಳೆ. ಪ್ರಕರಣ ಸಂಬಂಧ ಚಾಲಕ ಹಣಮಂತ್ ಕಿಲ್ಲೇದಾರ್ ಹಾಗೂ ನಿರ್ವಾಹಕಿ ಎಚ್. ಅನಿತಾ ಅವರನ್ನು ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

Leave a Comment

Your email address will not be published. Required fields are marked *