Ad Widget .

ಎವರೆಸ್ಟ್ ಏರಿದ ಕಾಮ್ಯ ಕಾರ್ತಿಕೇಯನ್/ ವಿಶ್ವದ ಅತ್ಯಂತ ಎತ್ತರದ ಶಿಖರ ಏರಿದ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ

ಸಮಗ್ರ ನ್ಯೂಸ್: ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ (8848 ಮೀ.) ಅನ್ನು 16ರ ಬಾಲಕಿ ಕಾಮ್ಯ ಕಾರ್ತಿಕೇಯನ್ ಮೇ 20ರಂದು ಏರುವ ಮೂಲಕ ಎವರೆಸ್ಟ್ ಏರಿದ ವಿಶ್ವದ ಎರಡನೇ ಕಿರಿಯ ಹಾಗೂ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Ad Widget . Ad Widget .

ಭಾರತೀಯ ನೌಕಾಸೆನೆಯ ಕಮಾಂಡರ್ ಆಗಿರುವ ಎಸ್ ಕಾರ್ತಿಕೇಯನ್ ಅವರ ಪುತ್ರಿಯಾಗಿರುವ ಈಕೆ ಪ್ರಸ್ತುತ ಮುಂಬೈ ನೇವಿ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ಏಳನೇ ವಯಸ್ಸಿನಿಂದಲೇ ಪರ್ವತಾರೋಹಣದ ಪಯಣ ಆರಂಭಿಸಿದ್ದಾಳೆ. ಇದುವರೆಗೂ 6 ಖಂಡಗಳ ಅತ್ಯಂತ ಎತ್ತರದ ಶಿಖರಗಳನ್ನು ಏರಿದ್ದು, ಡಿಸೆಂಬರ್‍ನಲ್ಲಿ ಅಂಟಾರ್ಟಿಕಾದ ವಿನ್ಸನ್ ಮ್ಯಾಸಿಫ್ ಪರ್ವತವನ್ನೂ ಏರುವ ಮೂಲಕ ಎಲ್ಲ ಖಂಡಗಳ ಅತ್ಯಂತ ಎತ್ತರದ ಶಿಖರಗಳನ್ನು ಏರಿದ ಕಿರಿಯ ವ್ಯಕ್ತಿ ಎಂದು ದಾಖಲೆ ಬರೆಯುವ ಗುರಿ ಹೊಂದಿದ್ದಾಳೆ.

Ad Widget . Ad Widget .

Leave a Comment

Your email address will not be published. Required fields are marked *