Ad Widget .

ಮದ್ಯಪ್ರಿಯರಿಗೆ ಶಾಕ್: ಜೂನ್ ಮೊದಲ ವಾರ ಎಣ್ಣೆ ಸಿಗಲ್ಲ

ಸಮಗ್ರ ನ್ಯೂಸ್: ಮದ್ಯಪ್ರಿಯರಿಗೆ ಜೂನ್ ನಲ್ಲಿ ಇದೀಗ ಶಾಕ್​ ಎದುರಾಗಿದೆ. ಹೌದು ಮಳೆ ಇದೇ ಆರಾಮಾಗಿ ಎಣ್ಣೆ ಹೋಡ್ಕೋಂಡು ಜಾಲಿಯಾಗಿ ಇರಬಹುದು ಎಂದು ಪ್ಲಾನ್ ಮಾಡಿರುವ ಎಣ್ಣೆ ಲವರ್ ಗಳು ಈ ಸುದ್ದಿಯನ್ನು ಒಮ್ಮೆ ಓದಲೇಬೇಕು.

Ad Widget . Ad Widget .

ಜೂನ್​​ ಮೊದಲ ವಾರ ನೀವು ಮದ್ಯದ ಮಳಿಗೆಗಳ ಬಳಿ ಹೋದರೆ ನಿರಾಸೆಯಿಂದ ವಾಪಸ್​ ಬರಬೇಕಾಗುತ್ತದೆ. ಏಕೆಂದರೆ ವಿಧಾನ ಪರಿಷತ್​ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಮತ ಎಣಿಕೆ ಇರುವುದರಿಂದ ಜೂನ್​ 1 ರಿಂದ 6ರ ವರೆಗೆ ಮದ್ಯದ ಮಾರಾಟವನ್ನು ಬಂದ್​​ ಮಾಡುವಂತೆ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Ad Widget . Ad Widget .

ಜೂನ್ 1 ರಿಂದ 6ರವರೆಗೆ ಬೆಂಗಳೂರಿನ ಎಲ್ಲ ಎಣ್ಣೆ ಅಂಗಡಿಗಳು ಸಂಪೂರ್ಣವಾಗಿ ಬಂದ್ ಇರಲಿವೆ. ಜೂನ್ 3 ರಂದು ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಾಯಂಕಾಲ 4 ಗಂಟೆಯಿಂದ ಜೂನ್ 3ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು ಜೂನ್ 4 ರಂದು ದೇಶಾದ್ಯಂತ ಲೋಕಸಭೆ ಚುನಾವಣೆಯ ಮತ ಎಣಿಕೆ‌ ನಡೆಯುವುದರಿಂದ ಅಂದು ಸಹ ಸಂಪೂರ್ಣವಾಗಿ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಬಂದ್​ ಇರಲಿವೆ. ಜೂನ್​ 5 ರಂದು ಯಥಾಪ್ರಕಾರ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಮತ್ತೆ ಜೂನ್ 6 ರಂದು ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ ಇರುವುದರಿಂದ ಅಂದು ಸಹ ಎಲ್ಲ ತರಹದ ಎಣ್ಣೆ ಅಂಗಡಿಗಳು ಬಂದ್​ ಆಗಲಿವೆ ಎಂದು ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Leave a Comment

Your email address will not be published. Required fields are marked *