Ad Widget .

ಟಿಕೆಟ್ ನಲ್ಲಿ ಅವ್ಯವಹಾರ: ಮೈಸೂರು ಅರಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಸಮಗ್ರ ನ್ಯೂಸ್: ಮೈಸೂರು ಅರಮನೆ ಪ್ರವೇಶ ಟಿಕೆಟ್ ಹಾಗೂ ಪಾರ್ಕಿಂಗ್​ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಇಂದು ಮೈಸೂರು ಅರಮನೆ ಮಂಡಳಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

Ad Widget . Ad Widget .

ಈ ವೇಳೆ ಪ್ರವೇಶ ದ್ವಾರ, ಪಾರ್ಕಿಂಗ್ ಲಾಟ್​ನಲ್ಲಿ ಲೆಕ್ಕಕ್ಕೆ ಸಿಗದ 4.10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ದೂರು ಆಧರಿಸಿ ಲೋಕಾಯುಕ್ತ ಎಸ್​ಪಿ ಸಚಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮ ಹಣವನ್ನ ಜಪ್ತಿ ಮಾಡಲಾಗಿದೆ. ಇನ್ನು ಕಾರ್ಯಾಚರಣೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಮಡಿಕೇರಿ ಲೋಕಾಯುಕ್ತ ಡಿವೈಎಸ್​​ಪಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *