Ad Widget .

ಆಳ್ವಾನ್ ಗಲ್ಲಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಘರ್ಷಣೆ: 10 ಜನ ಅರೆಸ್ಟ್

ಸಮಗ್ರ ನ್ಯೂಸ್: ಬೆಳಗಾವಿಯ ಅಳ್ವಾನ್ ಗಲ್ಲಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಸಂಬಂಧ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಸ್ಲಿಮ್ ಮತ್ತು ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಲಾಗಿದೆ. ತಲ್ವಾರ್ ಪ್ರದರ್ಶನ, ಕಲ್ಲು ತೂರಾಟ ಸಂಬಂಧ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A, 149 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 13 ಹಿಂದೂ ಯುವಕರ ಮೇಲೂ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149ರಡಿ ಪ್ರಕರಣ ದಾಖಲಿಸಲಾಗಿದೆ.

Ad Widget . Ad Widget .

ಬೆಳಗಾವಿಯ ಆಳ್ವಾನ್​​ನ ಆದರ್ಶ ಮರಾಠ ವಿದ್ಯಾಮಂದಿರ ಶಾಲೆ ಗ್ರೌಂಡ್​ನಲ್ಲಿ ನಿನ್ನೆ ಸಂಜೆ 4.30ಕ್ಕೆ ಮಕ್ಕಳು ಕ್ರಿಕೆಟ್ ಆಟ ಆಡಿದ್ದರು. ನಂತರ ಗೆದ್ದ ತಂಡದ ಮೇಲೆ ಮತ್ತೊಂದು ತಂಡದಿಂದ ಹಲ್ಲೆ ನಡೆದಿತ್ತು. ಘರ್ಷಣೆ ಮುಂದುವರಿದು ಸಂಜೆ 6 ಗಂಟೆಗೆ ಒಂದು ಯುವಕರ ಗುಂಪು ಕಲ್ಲು ತೂರಾಟ ಮಾಡಿತ್ತು. ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಲ್ಲು ತೂರದಂತೆ ಆಳ್ವಾನ್ ಗಲ್ಲಿ ನಿವಾಸಿಗಳು ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ 8 ಜನ ಗಾಯಗೊಂಡಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget . Ad Widget .

ನಿನ್ನೆ ಘಟನಾ ಸ್ಥಳಕ್ಕೆ ಪೊಲೀಸ್ ಕಾನ್ಸ್​​ಟೇಬಲ್ ಆಗಮಿಸಿದರು. ಅವರಿಗೂ ಗಲಾಟೆಯಲ್ಲಿ ಗಾಯಗಳಾಗಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೋಲಿಸರ ನಿಯೋಜನೆ, 3 ಕೆಎಸ್ಆರ್ಪಿ, 3 CPI ನಿಯೋಜನೆ ಮಾಡಲಾಗಿದೆ.

Leave a Comment

Your email address will not be published. Required fields are marked *