Ad Widget .

ಮಂಗಳೂರು : ಶಾಸಕರೇ ನೀತಿ ನಿಯಮ ಉಲ್ಲಂಘಿಸಿ ರೌಡಿ ತರ ವರ್ತಿಸಿ ಜಿಲ್ಲೆಗೆ ಕಳಂಕ ತಂದಿದ್ದಾರೆ: ಎಂಎಲ್ ಸಿ ಹರೀಶ್ ಕುಮಾರ್

ಸಮಗ್ರ ನ್ಯೂಸ್ : ಪ್ರಜ್ಞಾವಂತ ನಾಗರಿಕರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅಪಮಾನ ಮಾಡಿದ್ದಾರೆ. ಜನವಿರೋಧಿ ಕಾರ್ಯದಲ್ಲಿ ಪಾಲ್ಗೊಂಡು, ಶಾಸಕರೆ ನೀತಿ ನಿಯಮ ಉಲ್ಲಂಘಿಸಿ ರೌಡಿ ತರ ವರ್ತಿಸಿ ಜಿಲ್ಲೆಗೆ ಕಳಂಕ ತಂದಿದ್ದಾರೆ ಎಂದು ದ. ಕ ಕಾಂಗ್ರೆಸ್ ಅಧ್ಯಕ್ಷ ಎಂಎಲ್ ಸಿ ಹರೀಶ್ ಕುಮಾರ್ ಕಿಡಿಕಾರಿದ್ದಾರೆ.

Ad Widget . Ad Widget .

ಹಿಂದಿನ ಶಾಸಕರುಗಳು ಆ ಕ್ಷೇತ್ರದ ಗೌರವ ಉಳಿಸಿದವರು. ಅಕ್ರಮ ಕಲ್ಲು ಗಣಿಗಾರಿಕೆ, ಮರಳುಗಾರಿಕೆ ರೌಡಿ ಶೀಟರ್ ವ್ಯಕ್ತಿಯನ್ನು ರಕ್ಷಿಸಲು ಹೋಗಿದ್ದಾರೆ. ಅವನ ಬಂಧನವಾದಾಗ ಪೊಲೀಸರಿಗೆ ಬೈತಾರೆ, ತಲೆ ಕಡಿರಿ ಅಂತಾರೆ, ಬಿಜೆಪಿ ಸರಕಾರ ಇರುವಾಗ ಅವರ ದರ್ಪ ದೌರ್ಜನ್ಯ ಅದೇ ರೀತಿ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

Ad Widget . Ad Widget .

ಡಿಎಫ್ಒ ವಿರುದ್ಧವೂ ಇದೆ ರೀತಿ ಮಾಡಿದ್ದಾರೆ, ಓರ್ವ ರೌಡಿ ತರ ವರ್ತಿಸುತ್ತಿದ್ದಾರೆ. ಒಳ್ಳೇದು ಇರಲಿ ಕೆಟ್ಟದು ಏನೇ ಇರಲಿ ಕೇವಲ ಪ್ರಚಾರಕ್ಕೆ ಬರಬೇಕು ಅನ್ನೋ ಚಾಳಿ. ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಮನೆಯಲ್ಲಿ ಅವಿತು ಕೂರ್ತಾರೆ, ಕಾರ್ಯಕರ್ತರನ್ನ ಜಮಾಯಿಸುತ್ತಾರೆ. ಬಳಿಕ ಪೊಲೀಸನವರೆ ನಮ್ಮ ಕಾರ್ಯಕರ್ತರನ್ನ ನೋಡಿ ಹೆದರಿ ಓಡಿದರು ಅಂತಾರೆ ಎಂದರು.

ಆದರೆ ಅಲ್ಲಿನ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ, ಪೂಂಜರವರು ಹೆದರಿದ್ದಾರಾ, ಪೊಲೀಸನವರು ಓಡಿ ಹೋದರು ಎಂದು ಹೇಳಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡುವಷ್ಟು ವಯಸ್ಸಗಾಲಿಲ್ಲ ಇನ್ನೂ ಬಚ್ಚ, ಇನ್ನೂ ರಾಜಕೀಯ ಕಲೀಬೇಕಾಗಿದೆ ರಾಜಕೀಯದಲ್ಲಿ ರೌಡಿಸಂ ಇರಬಾರದು ಎಂದರು.

ಹರೀಶ್ ಪೂಂಜ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ತಾಕತ್ತಿದ್ದರೆ ರಾಜೀನಾಮೆ ಕೊಟ್ಟು, ಮರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ ಬೆಳ್ತಂಗಡಿ ತಾಲೂಕಿನ ಜನತೆ ಇಂತಹ ಒಬ್ಬ ಶಾಸಕನನ್ನ ನೋಡಲಿಲ್ಲ ಎಂದು ಎಂ ಎಲ್ ಸಿ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *