Ad Widget .

ಮೈಸೂರು: ಸಿಲಿಂಡರ್ ಸೋರಿಕೆ| ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ದಾರುಣ ಸಾವು

ಸಮಗ್ರ ನ್ಯೂಸ್: ಸಿಲಿಂಡರ್ ಸೋರಿಕೆ ಆಗಿ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲಿಯೇ ಚಿರನಿದ್ರಗೆ ಜಾರಿದ ಆಘಾತಕಾರಿ ಘಟನೆ ಅರಮನೆ ನಗರಿ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಯರಗನಹಳ್ಳಿ ನಿವಾಸಿಗಳಾದ ಕುಮಾರಸ್ವಾಮಿ, ಮಂಜುಳಾ, ಆರತಿ, ಸ್ವಾತಿ ಎಂದು ಗುರುತಿಸಲಾಗಿದೆ.

Ad Widget . Ad Widget .

ಮೃತರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದರು, ಬಟ್ಟೆಗೆ ಇಸ್ತಿ ಹಾಕುವ ಕೆಲಸವನ್ನು ಈ ದಂಪತಿ ಮಾಡುತ್ತಿದ್ದರು. ಭಾನುವಾರ ಕುಟುಂಬಸ್ಥರ ಮದುವೆಗೆ ಹೋಗಿದ್ದ ಈ ಕುಟುಂಬ ಸದಸ್ಯರು ಸೋಮವಾರ ವಾಪಸ್ ಬಂದು ಮನೆಯಲ್ಲೇ ರಾತ್ರಿ ಮಲಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿಯೇ ಎಲ್ಲರೂ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ.

Ad Widget . Ad Widget .

ಮನೆಯಿಂದ ಯಾರು ಹೊರಗೆ ಬಾರದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು ಹೋಗಿ ಬಾಗಿಲು ಮುರಿದು ನೋಡಿದಾಗ ಇಡೀ ಕುಟುಂಬ ಮಲಗಿದ್ದಲ್ಲಿಯೇ ಸಾವಿನ ಮನೆ ಸೇರಿರುವುದು ಬೆಳಕಿಗೆ ಬಂದಿದೆ.

ಆದರೆ ಸಿಲಿಂಡರ್‌ನಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ, ಸಾವಿನ ಬಗ್ಗೆ ಕೆಲ ಅನುಮಾನ ಮೂಡಿದ್ದು, ಪೊಲೀಸರ ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Leave a Comment

Your email address will not be published. Required fields are marked *