ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಲಕ್ಷ್ಮೀ ಯೋಜನೆಯು ಒಂದಾಗಿದೆ. ಈಗಾಗಲೇ 10ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಬಡ ಕುಟುಂಬಗಳಿಗೆ ನೆರವಾಗಿದೆ. ಪ್ರತಿ ತಿಂಗಳು ನೀಡುವ 2,000 ರೂಪಾಯಿ ಹಣವನ್ನು ಕೂಡಿಟ್ಟು ಮಹಿಳೆಯರು ಫ್ರಿಡ್ಜ್ ಹಾಗೂ ಬಂಗಾರವನ್ನು ಖರೀದಿಸಿದ್ದು ಗೊತ್ತೇ ಇದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಸಕ್ಕುಬಾಯಿ ಕರದಿನ ಎಂಬ ಮಹಿಳೆ ಹಲವು ತಿಂಗಳನಿಂದ ಬಲಗಣ್ಣಿಗೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಷ್ಟು ಹಣ ಇಲ್ಲದ ಕಾರಣದಿಂದ, ನೋವಿನಲ್ಲೇ ದಿನ ಕಳೆದಿದ್ದರು. ಆದರೆ, ತನಗೆ ಬರುತ್ತಿದ್ದ ಗೃಹ ಲಕ್ಷ್ಮೀ ಹಣವನ್ನು 10 ತಿಂಗಳ ಕಾಲ ಕೂಡಿಟ್ಟಿದ್ದಾರೆ. ಹೀಗೆ ಒಟ್ಟು 20 ಸಾವಿರ ತೆಗೆದಿರಿಸಿದ್ದಾರೆ.
ರಾಮದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಕ್ಕುಬಾರಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು,ಕಣ್ಣಿನ ದೋಷ ನಿವಾರಣೆಯಾಗಿದೆ. ಒಟ್ಟು 26 ಸಾವಿರ ರೂಪಾಯಿ ಖುರ್ಚು ಬಂದಿದೆ. ಇದರಲ್ಲಿ ಗೃಹ ಲಕ್ಷ್ಮೀಯ 20 ಸಾವಿರ ರೂಪಾಯಿ ಆಗಿದ್ರೆ, ಇನ್ನೂ 6 ಸಾವಿರ ರೂಪಾಯಿ ಹೇಗೋ ಸಂಗ್ರಹಿಸಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿಸಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಿಂದ ಸಂಸತಗೊಂಡಿರುವ ಮಹಿಳೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.