ಸಮಗ್ರ ನ್ಯೂಸ್: ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನ ರದ್ದುಗೊಳಿಸಿ ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ
ಅಗ್ನಿವೀರ್ ಯೋಜನೆ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಇದು ಮೋದಿಯವರ ಯೋಜನೆಯೇ ಹೊರತು ಸೇನೆಯ ಯೋಜನೆಯಲ್ಲ. ಸೇನೆಗೆ ಅದು ಬೇಕಿಲ್ಲ” ಎಂದರು.
ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರ ರಚಿಸಿದಾಗ, ನಾವು ಅಗ್ನಿವೀರ್ ಯೋಜನೆಯನ್ನ ಕಸದ ಬುಟ್ಟಿಗೆ ಎಸೆಯುತ್ತೇವೆ” ಎಂದು ಹೇಳಿದರು.
ಲೋಕಸಭಾ ಚುನಾವಣೆಗಾಗಿ ಹರಿಯಾಣದಲ್ಲಿ ನಡೆದ ತಮ್ಮ ಮೊದಲ ಚುನಾವಣಾ ಸಭೆಯಲ್ಲಿ, ಮಾಜಿ ಕಾಂಗ್ರೆಸ್ ಅಧ್ಯಕ್ಷರು ರೈತರ ವಿಷಯದ ಬಗ್ಗೆ ಪ್ರಧಾನಿ ಮೋದಿಯವರ ಮೇಲೆ ದಾಳಿ ನಡೆಸಿದರು. ಭಾರತದ ಗಡಿಗಳನ್ನು ದೇಶದ ಯುವಕರು ಭದ್ರಪಡಿಸಿದ್ದಾರೆ ಮತ್ತು “ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಭಕ್ತಿ ಇದೆ” ಎಂದು ಅವರು ಹೇಳಿದರು.