Ad Widget .

ಬೆಳ್ತಂಗಡಿ: ಕೊನೆಗೂ ವಿಚಾರಣೆಗೆ ಹಾಜರಾದ ಶಾಸಕ ಹರೀಶ್ ಪೂಂಜಾ

ಸಮಗ್ರ ನ್ಯೂಸ್: ಇಂದು ಬೆಳಿಗ್ಗೆಯಿಂದ ನಡೆದ ಹೈಡ್ರಾಮ ಬಳಿಕ ಶಾಸಕ ಹರೀಶ್ ಪೂಂಜಾ ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

Ad Widget . Ad Widget .

ತನ್ನ ಆಪ್ತ , ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅಕ್ರಮ ಗಣಿಗಾರಿಕೆ ಮತ್ತು ಸ್ಪೋಟಕ ದಾಸ್ತಾನು ಪ್ರಕರಣದಲ್ಲಿ ಬಂಧಿತನಾದ ಬಳಿಕ ಠಾಣೆಗೆ ತೆರಳಿದ ಶಾಸಕ ಪೂಂಜಾ ಪೊಲೀಸರಿಗೆ ಬೆದರಿಕೆ ಮತ್ತು ಠಾಣೆಯನ್ನು ಧ್ವಂಸ ಮಾಡುವ ಬಗ್ಗೆ ಬೆದರಿಕೆ ಹಾಕಿದ್ದರು.

Ad Widget . Ad Widget .

ಶಾಸಕರ ಹೇಳಿಕೆಯ ಆಧಾರದಲ್ಲಿ ಎರಡೆರಡು ಎಫ್ಐಆರ್ ಜಡಿದ ಪೊಲೀಸರು ಹರೀಶ್ ಪೂಂಜಾರನ್ನು ಬಂಧಿಸಲು ಅವರ ಗರ್ಡಾಡಿಯ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕರ್ತರನ್ನು ಛೂ ಬಿಟ್ಟ ಬಿಜೆಪಿ ಪಾಳಯ ಬಂಧನವನ್ನು ಕೈಬಿಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಕೊನೆಗೆ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿ ವಾಪಸ್ಸಾದರು.

ಬಳಿಕ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಶಾಸಕ ಪೂಂಜಾ, 9 ಪೊಲೀಸ್ ಬಸ್, 25 ಸಬ್ ಇನ್ಸ್ ಪೆಕ್ಟರ್ 4, ಸರ್ಕಲ್ ಇನ್ಸ್ ಪೆಕ್ಟರ್, ಒಬ್ಬ ಡಿವೈಎಸ್ಪಿ ನನ್ನನ್ನು ಬಂಧಿಸಲು ಬಂದಿದ್ರು. ಅವರನ್ನು ಹಿಮ್ಮೆಟ್ಟಿಸಿ ಮತ್ತೆ ಪೊಲೀಸ್ ಸ್ಟೇಷನ್ ಗೆ ಹೋಗುವಂತೆ ಮಾಡಿದೆ ಎಂದರು. ಎಲ್ಲ ಮುಗಿದ ಬಳಿಕ ರಾತ್ರಿ 9.30ಕ್ಕೆ ಬೆಳ್ತಂಗಡಿ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *