Ad Widget .

HSPR ನಂಬರ್ ಪ್ಲೇಟ್ ಅಳವಡಿಸಿಲ್ಲವೇ? ಹಾಗಿದ್ರೆ ಈ ಸುದ್ದಿ ಓದ್ಲೇಬೇಕು…

ಸಮಗ್ರ ನ್ಯೂಸ್: ಎಲ್ಲಾ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ ಹಾಗೂ ಈ ತಿಂಗಳು 31ರವರೆಗೆ ಗಡುವು ಸಹ ನೀಡಿತ್ತು. ಆದರೂ ಕಾರಣಾಂತರಗಳಿಂದ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕದ ವಾಹನ ಸವಾರರಿಗೆ ಗುಡ್‌ನ್ಯೂಸ್ ನೀಡಿದೆ.

Ad Widget . Ad Widget .

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸದವರ ವಿರುದ್ಧ ಜೂನ್ 12ರವರೆಗೆ ಯಾವುದೇ ರೀತಿಯ ಕ್ರಮವಿಲ್ಲ. ಈ ಬಗ್ಗೆ ಸ್ವತಃ ರಾಜ್ಯ ಸರ್ಕಾರವೇ ಹೈಕೋರ್ಟ್‌ಗೆ ತಿಳಿಸಿದೆ. ಹೀಗಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದ ವಾಹನ ಸವಾರರಿಗೆ ಜೂ.12 ಕಾಲಾವಕಾಶ ಸಿಕ್ಕಂತಾಗಿದೆ.

Ad Widget . Ad Widget .

ಸಾರಿಗೆ ಇಲಾಖೆ ಮೊದಲು ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡಲು 2023ರ ನವೆಂಬರ್ 17ರ ಗಡುವು ಕೊಟ್ಟಿತ್ತು. ಬಳಿಕ ಅದನ್ನು 2024ರ ಫೆಬ್ರವರಿ 17ರ ತನಕ ವಿಸ್ತರಣೆ ಮಾಡಲಾಗಿತ್ತು, ನಂತರ ಅದನ್ನು ಮೇ 31ರವರೆಗೆ ವಿಸ್ತರಿಸಲಾಗಿತ್ತು.

ಆದರೆ, ಮತ್ತಷ್ಟು ದಿನ ವಿಸ್ತರಣೆ ಮಾಡುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಇದೀಗ ರಾಜ್ಯ ಸರ್ಕಾರ ಜೂನ್ 12ರವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಜೂನ್ 12ರವರೆಗೆ ಕಾಲಾವಕಾಶ ಸಿಕ್ಕಂತಾಗಿದೆ.

Leave a Comment

Your email address will not be published. Required fields are marked *