ಸಮಗ್ರ ನ್ಯೂಸ್ : ಟೋಲ್ ನಿರ್ವಾಹಣೆ, ಸುಂಕ ವಸೂಲಿಗೆ ಹೊಸ ಕಂಪನಿ ಹೆಜಮಾಡಿಗೆ ವಕ್ಕರಿಸಿದ್ದರೂ ಹಳೆಯ ಸಮಸ್ಯೆಗಳು ಜೀವಂತವಿದ್ದು, ಕಳೆದ ಸುಮಾರು ಹತ್ತು ದಿನಗಳಿಂದ ಶೌಚಾಲಯ ದುರಸ್ಥಿ ಹೆಸರಲ್ಲಿ ಮುಚ್ಚಿದ್ದು ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಶೌಚಾಲಯವನ್ನು ಹೈಟೆಕ್ ಮಾಡುವುದಾಗಿ ಬದಲಿ ವ್ಯವಸ್ಥೆ ಕಲ್ಪಿಸದೆ ಶೌಚಾಲಯವನ್ನು ಮುಚ್ಚಿ ಕಾಮಗಾರಿ ಆರಂಭಿಸಲಾಗಿದ್ದು, ಇದೀಗ ಕೆಲ ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು , ಅಗೆದು ಹಾಕಲಾದ ಅರೆಬರೆ ಶೌಚಾಲಯ ಭೇಟಿ ಸಂದರ್ಭ ಗೊಚರಿಸುತ್ತದೆ.
ಪುರುಷರು ವಿಧಿ ಇಲ್ಲದೆ ಟೋಲ್ ಪ್ರದೇಶದಲ್ಲಿ ಬಯಲು ಮೂತ್ರ ವಿಸರ್ಜನೆ ನಡೆಸಿದರೆ ಮಹಿಳೆಯರು ತೀರ ಸಂಕಷ್ಟ ಎದುರಿಸುವಂತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ದಲಿತ ಮುಖಂಡ ಶೇಖರ್ ಹೆಜಮಾಡಿ, ಟೋಲ್ ಕಂಪನಿಗಳಿಗೆ ಕೇವಲ ಜನರಿಂದ ಸುಂಕ ವಸೂಲಿಯೇ ಮೂಲ ಉದ್ದೇಶವಾಗಿರಬಾರದು,
ಜನರಿಂದ ಪಡೆಯುವ ಸುಂಕದೊಂದಿಗೆ ಅವರಿಗೆ ನೀಡಲೇಬೇಕಾಗಿದ್ದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕರ್ತವ್ಯವೂ ಹೌದು, ಶೌಚಾಲಯ ದುರವಸ್ಥೆ ಒಂದು ಕಡೆಯಾದರೆ, ಅಪಘಾತಕ್ಕೆ ನಾದಿಯಾಗುತ್ತಿರುವ ಕೆಟ್ಟು ಹೋದ ಹೆದ್ದಾರಿ ಮತ್ತೊಂದು ಕಡೆ, ಬಹುತೇಕ ಕಡೆ ದಾರಿದೀಪಗಳು ಮರೀಚಿಕೆಯಾಗಿಯೇ ಉಳಿದಿದೆ.
ಇದನ್ನೆಲ್ಲ ಪ್ರಶ್ನಿಸಬೇಕಾಗಿದ್ದ ಜನಪ್ರತಿನಿಧಿಗಳು ಮೌನ… ಅಧಿಕಾರಿಗಳು ಎಸಿ ರೂಮಲ್ಲಿ ಹಾಯಾಗಿದ್ದಾರೆ, ಇನ್ನೂ ಎಚ್ಚರಗೊಳ್ಳದಿದ್ದರೆ ಹೋರಾಟ ನಡೆಸಿ ಬಿಸಿ ಮುಟ್ಟಿಸ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.