Ad Widget .

ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾಗೆ ಬಂಧನ ಭೀತಿ| ಮನೆ ಸುತ್ತುವರಿದ ಖಾಕಿ ಪಡೆ

ಸಮಗ್ರ ನ್ಯೂಸ್: ಪೋಲಿಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಮಾಡಿದ ಪ್ರಕರಣ ಹಾಗೂ ಅನುಮತಿ ಇಲ್ಲದೆ ಬಿಜೆಪಿಯಿಂದ ಪ್ರತಿಭಟನಾ ಸಭೆ ನಡೆಸಿದ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ವಿರುದ್ಧ ಈಗ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜಾಗೆ ಬಂಧನ ಭೀತಿ ಎದುರಾಗಿದೆ.

Ad Widget . Ad Widget .

ಎರಡೂ ಪ್ರಕರಣಗಳು ಜಾಮೀನು ರಹಿತ ಪ್ರಕರಣವಾಗಿದ್ದು ಇದೀಗ ಹರೀಶ್ ಪೂಂಜ ಅವರ ಬಂಧನಕ್ಕಾಗಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪೂರ್ ಮಠ್‌ ಮತ್ತು ಪಿಎಸ್ಐ ಚಂದ್ರಶೇಖರ್ ಪೂಂಜ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಖಾಕಿ ಪಡೆ ಸುತ್ತುವರಿದಿದ್ದಾರೆ.

Ad Widget . Ad Widget .

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲ ನಿವಾಸಕ್ಕೆ ಆಗಮಿಸಿದ್ದು, ಹರೀಶ್ ಪೂಂಜ ಮನೆಯ ರೂಂ ನಲ್ಲಿದ್ದಾರೆ ಎನ್ನಲಾಗಿದ್ದು, ಮತ್ತೊಂದು ಮಾಹಿತಿ ಪ್ರಕಾರ ಅವರು ಮನೆಯಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಖಾಕಿ ವಿರುದ್ದ ನಾಲಿಗೆ ಹರಿಬಿಟ್ಟ ಶಾಸಕರ ವರ್ತನೆ ಇದೀಗ ಅವರಿಗೇ ಮುಳುವಾಗಿದೆ.

Leave a Comment

Your email address will not be published. Required fields are marked *