Ad Widget .

ನೇಪಾಳದಲ್ಲಿ ವಿಶ್ವಾಸಮತ ಗೆದ್ದ ಪ್ರಚಂಡ

ಸಮಗ್ರ ನ್ಯೂಸ್: ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಮತ್ತೊಮ್ಮೆ ಸಂಸತ್ತಿನಲ್ಲಿ ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ 18 ತಿಂಗಳಲ್ಲಿ ಪ್ರಚಂಡ ನಾಲ್ಕನೇ ಬಾರಿ ವಿಶ್ವಾಸಮತ ಗೆದ್ದಂತೆ ಆಗಿದೆ.

Ad Widget . Ad Widget .

ಮೈತ್ರಿಪಕ್ಷವಾಗಿದ್ದ ಜನತಾ ಸಮಾಜಬದಿ ಪಕ್ಷವು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ, ಸರ್ಕಾರದ ಬಲವನ್ನು ಸಾಬೀತುಪಡಿಸಲು ಪ್ರಚಂಡ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರು. ಈ ವೇಳೆ 275 ಸದಸ್ಯ ಬಲದ ಸಂಸತ್‍ನಲ್ಲಿ ಕಮ್ಯುನಿಸ್ಟ್ ಪಾರ್ಟಿಯ ನಾಯಕ ಪ್ರಚಂಡ 157 ಮತ ಪಡೆದು ವಿಶ್ವಾಸಮತ ಗೆದ್ದಿದ್ದಾರೆ. ವಿಪಕ್ಷ ನೇಪಾಳಿ ಕಾಂಗ್ರೆಸ್ ಮತದಾನ ಬಹಿಷ್ಕರಿಸಿತ್ತು.

Ad Widget . Ad Widget .

Leave a Comment

Your email address will not be published. Required fields are marked *