Ad Widget .

ಪುತ್ತೂರು: ಕೊನೆಗೂ ಸಿಕ್ಕಿದ ಪ್ರೇತವರ| ಆಟಿ ತಿಂಗಳಲ್ಲಿ ನಡೆಯಲಿದೆ ‘ಕುಲೆ ಮದಿಮೆ’

ಸಮಗ್ರ ನ್ಯೂಸ್: ಪ್ರೇತ ವಿವಾಹಕ್ಕೆ ವರ ಬೇಕೆಂದು ಜಾಹೀರಾತು ಹಾಕಿದ ಸುದ್ದಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಜಾಹೀರಾತು ಹಾಕಿದ ಫಲವಾಗಿ ಪ್ರೇತವಿವಾಹಕ್ಕೆ ವರ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

Ad Widget . Ad Widget .

ಪ್ರೇತ ವಿವಾಹಕ್ಕೆ ಪ್ರೇತ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ ವರ ಈಗ ನಿಗದಿಯಾಗಿದ್ದು, ಮುಂದಿನ ಆಷಾಡ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ.

Ad Widget . Ad Widget .

“ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ’ ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು. ಹಾಗಾಗಿ ಅದಕ್ಕೆ ಸಮ್ಮತಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಇನ್ನು ಜೀವಂತ ಇರುವಾಗ ಆಗದೇ ಇರುವ ಮದುವೆ ಕ್ರಮವನ್ನು ಜೀವಂತ ಇರುವ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತದೆ. ಮುಂದಿನ ಭಾನುವಾರ ಪ್ರೇತ ವರನ ಕಡೆಯವರು ವಧುವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

Leave a Comment

Your email address will not be published. Required fields are marked *