Ad Widget .

ಸಂಸತ್ ಭವನಕ್ಕೆ ಮೇ 20ರಿಂದ ಬರೋಬ್ಬರಿ 3300 ಸಿಬ್ಬಂದಿ ಭದ್ರತೆ/ ಭದ್ರತಾ ಹೊಣೆ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲ(ಸಿಐಎಸ್‍ಎಫ್)ದ ಹೆಗಲಿಗೆ

ಸಮಗ್ರ ನ್ಯೂಸ್: ಸಂಸತ್ ಭವನಕ್ಕೆ ಈವರೆಗೆ ಭದ್ರತೆ ಒದಗಿಸುತ್ತಿದ್ದ 1400 ಸಿಆರ್‍ಪಿಎಫ್ ಸಿಬ್ಬಂದಿಯನ್ನು ಸಂಪೂರ್ಣ ಹಿಂಪಡೆದು, ಮೇ 20ರಿಂದ ಬರೋಬ್ಬರಿ 3300 ಸಿಐಎಸ್‍ಎಫ್ (ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲ) ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. , ಹೊಸ ಹಾಗೂ ಹಳೆಯ ಸಂಸತ್ ಭವನದಲ್ಲಿ ಭಯೋತ್ಪಾದನೆ ನಿಗ್ರಹ ಚಟುವಟಿಕೆ, ಸುರಕ್ಷತಾ ತಪಾಸಣೆ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ಜವಾಬ್ದಾರಿಯನ್ನು ಸಿಐಎಸ್‍ಎಫ್‍ಗೆ ವಹಿಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ಸಂಸತ್ ಭವನದೊಳಗೆ ಕಿಡಿಗೇಡಿಗಳು ನುಸುಳಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣದ ಬಳಿಕ ಭದ್ರತಾ ವ್ಯವಸ್ಥೆಯನ್ನು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

Ad Widget . Ad Widget .

ಸಿಆರ್‍ಪಿಎಫ್ ಡಿಐಜಿ ಅವರು ಸಂಸತ್ ಭವನದ ಆಡಳಿತಾತ್ಮಕ ವಿಭಾಗಗಳ ಭದ್ರತೆ ಹಾಗೂ ಎಲ್ಲಾ ಕಡೆಯ ಸುರಕ್ಷತಾ ವ್ಯವಸ್ಥೆಯ ಪರಿಕರಗಳು, ವಾಹನಗಳು, ಶಸ್ತ್ರಾಸ್ತ್ರಗಳು ಹಾಗೂ ಕಮಾಂಡೋಗಳ ಚಟುವಟಿಕೆಯನ್ನು ಹಿಂಪಡೆದು, ಭದ್ರತೆಯ ಜವಾಬ್ದಾರಿಯನ್ನು ಸಿಐಎಸ್‍ಎಫ್‍ಗೆ ಹಸ್ತಾಂತರ ಮಾಡಿದ್ದಾರೆ. ನಂತರ 3317 ಸಿಐಎಸ್‍ಎಫ್ ಸಿಬ್ಬಂದಿಯ ನಿಯೋಜನೆ ಹಾಗೂ ಭದ್ರತಾ ವ್ಯವಸ್ಥೆಯ ಅಳವಡಿಕೆಯ ಕಾರ್ಯ ಆರಂಭವಾಗಿದೆ. ಇದು ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ.

Ad Widget . Ad Widget .

ಇಷ್ಟು ದಿನ ಸಿಆರ್‍ಪಿಎಫ್ ಯೋಧರ ಜೊತೆಗೆ ದೆಹಲಿ ಪೆÇಲೀಸ್ ಇಲಾಖೆಯ 150 ಸಿಬ್ಬಂದಿ ಹಾಗೂ ಸಂಸತ್ತಿನ ಭದ್ರತಾ ವಿಭಾಗದ ಸಿಬ್ಬಂದಿ ಜಂಟಿಯಾಗಿ ಸಂಸತ್ ಭವನಕ್ಕೆ ಭದ್ರತೆ ಒದಗಿಸುತ್ತಿದ್ದವು. ಅವೆಲ್ಲವನ್ನೂ ಈಗ ಹಿಂಪಡೆಯಲಾಗಿದೆ.

ಹೊಸ ಸಿಐಎಸ್‍ಎಫ್ ಮಹಿಳಾ ಹಾಗೂ ಪುರುಷ ಸಿಬ್ಬಂದಿ ಸಿಬ್ಬಂದಿ ತಿಳಿ ನೀಲಿ ಬಣ್ಣದ ಪೂರ್ಣ ತೋಳಿನ ಅಂಗಿ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ. ಇವರಿಗೆ ಈಗಾಗಲೇ ಬ್ಯಾಗೇಜ್ ತಪಾಸಣೆ, ಜನರ ತಪಾಸಣೆ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯಗೊಳಿಸುವಿಕೆ, ಭಯೋತ್ಪಾದನಾ ದಾಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವುದು, ಬಂದೂಕು ಬಳಕೆ, ಸಾರ್ವಜನಿಕರ ಜೊತೆ ನಡೆದುಕೊಳ್ಳುವ ರೀತಿ ಹಾಗೂ ವಿಧೇಯತೆ ಸೇರಿದಂತೆ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

Leave a Comment

Your email address will not be published. Required fields are marked *