ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು

ಸಮಗ್ರ ನ್ಯೂಸ್: ಅಜರ್‌ಬೈಜಾನ್‌ ನಿಂದ ಮರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕೊನೆಯುಸಿರೆಳೆದಿದ್ದಾರೆ. ರವಿವಾರ ನಡೆದ ಘಟನೆಯಲ್ಲಿ ಇರಾನ್ ಅಧ್ಯಕ್ಷರು ಮೃತಪಟ್ಟಿದ್ದಾರೆ ಎಂದು ಇದೀಗ ಖಚಿತಪಡಿಸಲಾಗಿದೆ.

Ad Widget ... ..

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೇನ್‌ ಅಮೀರಬ್‌ ದೊಲ್ಲಾಹಿಯನ್‌ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿದೆ.

Ad Widget

ಇರಾನ್ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾದ ಕೆಲವೇ ನಿಮಿಷಗಳಲ್ಲಿ, ಇರಾನ್ ಅಧ್ಯಕ್ಷ ರೈಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ವಿಮಾನದಲ್ಲಿದ್ದ ಇರಾನ್ ವಿದೇಶಾಂಗ ಸಚಿವರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

Leave a Comment

Your email address will not be published. Required fields are marked *