Ad Widget .

ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಕಾಂತಾರ’ ಡಿಜಿಟಲ್ ರೈಟ್ಸ್

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕೇವಲ 15-16 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಚಿತ್ರದ ಡಿಜಿಟಲ್ ರೈಟ್ಸ್ 125 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಮ್ ವೀಡಿಯೋ ಕಂಪನಿಗೆ ಸೇಲ್ ಆಗಿ ಅಚ್ಚರಿ ನೀಡಿದೆ.

Ad Widget . Ad Widget .

ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜೋಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಿತ್ರವು ಈ ಮೂಲಕ ಇದೀಗ ಮತ್ತೊಂದು ಮನ್ನಣೆಗೆ ಪಾತ್ರವಾಗಿದೆ. ಈಗಾಗಲೇ ಕಾಂತಾರ ಚಿತ್ರದ ಬಿಡುಗಡೆಯಿಂದ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ.

Ad Widget . Ad Widget .

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರವು ‘ದೈವಾರಾಧನೆ’ಗೆ ಸಂಬಂಧಿಸಿದ ವಿಷಯವನ್ನು ಒಳಗೊಂಡಿದೆ. ಈ ಚಿತ್ರವು ತನ್ನ ವಿಭಿನ್ನತೆ ಹಾಗು ಘನತೆಯಿಂದ ಅಪಾರ ಜನಮನ್ನಣೆ ಪಡೆದಿದೆ. ಈ ಚಿತ್ರವು ಕಡಿಮೆ ಬಜೆಟ್ ಹಾಗೂ ಹೆಚ್ಚಿನ ಗಳಿಕ ಮೂಲಕ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ಕಾಂತಾರ ಚಿತ್ರದ ಮೂಲಕ ಇಂಟರ್‌ನ್ಯಾಷನಲ್ ಖ್ಯಾತಿ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *