Ad Widget .

ದ್ವಾದಶ ರಾಶಿಗಳ ವಾರಭವಿಷ್ಯ| ಮೇ.19ರಿಂದ 24ರವರೆಗಿನ ಗೋಚಾರಫಲ

ಸಮಗ್ರ ನ್ಯೂಸ್: ಮೇ ತಿಂಗಳ ಮೂರನೇ ವಾರವು ಮೇ 19 ರಿಂದ 25 ರವರೆಗೆ ಇರಲಿದೆ. ಶುಭಾಶುಭ ಮಿಶ್ರ ಫಲಗಳು ಇದ್ದು, ಪುರುಷ ಪ್ರಯತ್ನವನ್ನು ಮಾಡುತ್ತಾ ದೈವ ಬಲವನ್ನೂ ಬೇಡುತ್ತಾ ಮಾಡಬೇಕಾದ ಕಾರ್ಯದಲ್ಲಿ ಮುನ್ನಡೆದರೆ ಎಲ್ಲವೂ ಸಫಲವಾಗುವುದು.

Ad Widget . Ad Widget .

ಮೇಷ ರಾಶಿ:
ಈ ವಾರ ನಿಮಗೆ ಶುಭ. ಉದ್ಯೋಗಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಈ ವಾರ ನಿಮ್ಮೆಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ಹಣದ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಈ ವಾರ ಕುಟುಂಬ ಜೀವನ ಚೆನ್ನಾಗಿರಲಿದೆ, ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳಲಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.

Ad Widget . Ad Widget .

ವೃಷಭ ರಾಶಿ:
ಈ ವಾರ ಕೆಲಸದಲ್ಲಿ ನಿಮಗೆ ಉತ್ತಮ ಫಲ ಸಿಗಲಿದೆ. ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆ ಪೂರ್ಣಗೊಳ್ಳುತ್ತದೆ. ಇನ್ನು ಈ ವಾರ ಹೂಡಿಕೆಗೆ ಈ ಅವಧಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಖರ್ಚು ಹೆಚ್ಚಿರಲಿದೆ, ಆದರೆ ಹಣದ ಸಮಸ್ಯೆ ಉಂಟಾಗಲ್ಲ. ಈ ಏಳೂ ದಿನಗಳು ನಿಮಗೆ ತುಂಬಾ ಒಳ್ಳೆಯದು.

ಮಿಥುನ ರಾಶಿ:
ಈ ವಾರ ಕುಟುಂಬದಲ್ಲಿ ವಾತಾವರಣ ಅಷ್ಟೊಂದು ಚೆನ್ನಾಗಿರಲ್ಲ, ನೀವು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ಈ ವಾರ ಹಣದ ಹೂಡಿಕೆ ಮಾಡುವುದನ್ನು ನೀವು ತಪ್ಪಿಸಬೇಕು. ಆರೋಗ್ಯದ ಕಡೆಯೂ ಗಮನಹರಿಸಿ. ಇನ್ನು ಈ ಅವಧಿಯಲ್ಲಿ ಯಾರಿಗೂ ಸಾಲ ನೀಡಬೇಡಿ.

ಕರ್ಕಾಟಕ ರಾಶಿ:
ಈ ವಾರ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ನೀವು ಕೆಲಸದ ಜೊತೆಗೆ ವೈವಾಹಿಕ ಜೀವನದ ಕಡೆಯೂ ಗಮನಹರಿಸಬೇಕು. ಈ ದಿನ ಆರ್ಥಿಕವಾಗಿ ತುಂಬಾ ಒಳ್ಳೆಯದು.

ಸಿಂಹ ರಾಶಿ:
ಈ ದಿನ ನೀವು ಕೆಲಸದಲ್ಲಿ ತುಂಬಾ ಜಾಗ್ರತೆವಹಿಸಬೇಕು. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ ನೀವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ವ್ಯಾಪಾರಿಗಳು ಅಪೇಕ್ಷಿತ ಲಾಭವನ್ನು ಪಡೆಯಲು ಹೆಚ್ಚು ಶ್ರಮಿಸಬೇಕಾಗಬಹುದು. ವಾರದ ಮಧ್ಯದಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ವಿವಾಹಿತರಿಗೆ ಈ ವಾರ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ಗಮನಹರಿಸಿ.

ಕನ್ಯಾ ರಾಶಿ:
ವ್ಯಾಪಾರಿಗಳಿಗೆ ಈ ವಾರ ತುಂಬಾ ಒಳ್ಳೆಯದಿದೆ. ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಯಾವುದೇ ವ್ಯವಹಾರ ನಿರ್ಧಾರವನ್ನು ತೆಗೆದುಕೊಂಡರೂ, ನೀವು ಸರಿಯಾದ ಫಲಿತಾಂಶಗಳನ್ನು ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ದಿನ ಉತ್ತಮವಾಗಿದೆ. ನಿಮ್ಮ ಆದಾಯ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಚೆನ್ನಾಗಿರಲಿದೆ. ಆರೋಗ್ಯದಲ್ಲಿ ಈ ವಾರ ಸಾಮಾನ್ಯವಾಗಿರಲಿದೆ.

ತುಲಾ ರಾಶಿ:
ವ್ಯಾಪಾರಿಗಳಿಗೆ ಈ ವಾರ ಶುಭವಾಗಿದೆ. ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆಯನ್ನು ಕಾಣುತ್ತೀರಿ. ನಿಮ್ಮ ಕುಟುಂಬ ಜೀವನ ಅಷ್ಟೊಂದು ಅನುಕೂಲಕರವಲ್ಲ, ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಏಳೂ ದಿನಗಳು ನೀವು ಜಾಗ್ರತೆ ವಹಿಸಬೇಕು. ಆರೋಗ್ಯ ಸಂಬಂಧಿ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ವೃಶ್ಚಿಕ ರಾಶಿ:
ಖಾಸಗಿ ಉದ್ಯೋಗಿಯಾಗಿದ್ದರೆ ನೀವು ಕೆಲಸವನ್ನು ಶ್ರದ್ಧೆಯಿಂದ ಮಾಡಲು ಪ್ರಯತ್ನಿಸಬೇಕು. ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವವರಿಗೆ ಈ ವಾರ ತುಂಬಾ ಒಳ್ಳೆಯದು. ಆದಾಯ ಚೆನ್ನಾಗಿರಲಿದೆ. ನಿಮ್ಮ ಆಪ್ತರ ವರ್ತನೆ ನಿಮ್ಮ ಮನಸ್ಸಿಗೆ ಸಮಸ್ಯೆಯುಂಟು ಮಾಡಬಹುದು. ಆರೋಗ್ಯದ ವಿಷಯದಲ್ಲಿ ಈ ವಾರ ಮಿಶ್ರಫಲ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಧನು ರಾಶಿ:
ಕುಟುಂಬದಲ್ಲಿನ ಸಮಸ್ಯೆ ನಿಮ್ಮ ಚಿಂತೆಗೆ ಕಾರಣವಾಗಿರಬಹುದು. ಈ ಅವಧಿಯಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ವೃತ್ತಿ ಬದುಕಿನಲ್ಲಿ ಒತ್ತಡ ಇರಲಿದೆ. ವ್ಯಾಪಾರಿಗಳಿಗೆ ಮಿಶ್ರಫಲ. ಯಾವುದೇ ಕಾನೂನು ಬಾಹಿರ ಕೆಲಸ ಮಾಡದಂತೆ ಸೂಚಿಸಲಾಗಿದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮಾತ್ರ ನೀವು ಖರ್ಚು ಮಾಡಿ. ಈ ವಾರ ನಿಮ್ಮ ಯಾವುದೇ ಬಾಕಿಯಿರುವ ಹಣಕಾಸಿನ ವಹಿವಾಟುಗಳನ್ನು ಪೂರ್ಣಗೊಳಿಸಬಹುದು.

ಮಕರ ರಾಶಿ:
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ವಾರ ಉತ್ತಮವಾಗಿದೆ. ಈ ಅವಧಿಯಲ್ಲಿ, ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ಉತ್ತಮ ಆರೋಗ್ಯಕ್ಕಾಗಿ ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.

ಕುಂಭ ರಾಶಿ:
ಕೆಲಸದಲ್ಲಿ ಈ ವಾರ ನಿಮಗೆ ಬಹಳ ಮುಖ್ಯವಾಗಿರುತ್ತದೆ. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯಲು ಬಯಸಿದರೆ, ನೀವು ಹೆಚ್ಚು ಶ್ರಮಿಸಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಸಂಬಂಧ ಬರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಮಿಥುನ ರಾಶಿ:
ಆರೋಗ್ಯದ ಕಡೆಗೆ ಗಮನಹರಿಸಬೇಕು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಈ ವಾರ ಉತ್ತಮವಾಗಿರಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಲ್ಲ. ನೀವು ಉದ್ಯೋಗದಲ್ಲಿದ್ದರೆ ಮತ್ತು ನಿಮ್ಮ ಬಡ್ತಿಗಾಗಿ ಕಾಯುತ್ತಿದ್ದರೆ, ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಕೆಲಸದಲ್ಲಿ ನೀವು ಯಾವುದೇ ರೀತಿಯ ಬದಲಾವಣೆಯನ್ನು ಯೋಜಿಸುತ್ತಿದ್ದರೆ ಅದಕ್ಕೆ ಇದು ಸರಿಯಾದ ಸಮಯವಲ್ಲ.

Leave a Comment

Your email address will not be published. Required fields are marked *