ಸಮಗ್ರ ನ್ಯೂಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನಪಂದ್ಯದಲ್ಲಿ ಆರ್‍ಸಿಬಿ 27 ರನ್‍ಗಳಿಂದ ಚೆನ್ನೈ ತಂಡವನ್ನು ಸೋಲಿಸಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ. ಪ್ಲೇಆಫ್ ತಲುಪಿರುವ ಬೆಂಗಳೂರು ತಂಡವನ್ನು ಆರ್‍ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಅಭಿನಂದಿಸಿದ್ದಾರೆ.
ಆರ್‍ಸಿಬಿ ಪ್ಲೇಆಫ್‍ಗೆ ಲಗ್ಗೆ ಇಟ್ಟಿರುವುದಕ್ಕೆ ತುಂಬಾ ಖುಷಿಯಾಗಿದೆ. ನನ್ನ ಹೃದಯ ಪೂರ್ವಕ ಅಭಿನಂದನೆ ಹೇಳಲು ಬಯಸುತ್ತೇನೆ. ಸತತ ಸೋಲುಗಳ ನಂತರ ನೀವು ಎಷ್ಟು ಚೆನ್ನಾಗಿ ಟ್ರ್ಯಾಕ್‍ಗೆ ಮರಳಿದ್ದೀರಿ ಎಂಬುದು ಅದ್ಭುತವಾಗಿದೆ. ಕಪ್ ಗೆಲ್ಲಲು ಆರ್‍ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕಿದೆ ಎಂದು ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ