Ad Widget .

ಮೈಸೂರು : ಉಳುಮೆ ಟ್ರಕ್ಟರ್ ಗೆ ಸಿಲುಕಿ ಬಾಲಕ ಮೃತ್ಯು

ಸಮಗ್ರ ನ್ಯೂಸ್ : ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರಕ್ಟರ್ ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.

Ad Widget . Ad Widget .

8 ವರ್ಷದ ಬಾಲಕ ಭವಿಷ್ ಟ್ರಕ್ಟರ್ ಗೆ ಸಿಲುಕಿ ಸಾವನ್ನಪ್ಪಿದ ಬಾಲಕ. ಟ್ರಕ್ಟರ್ ರೊಟಾವೆಲ್ಟರ್ಗೆ ಬಾಲಕ ಸಿಲುಕಿ ದೇಹ ಛಿದ್ರ ಛಿದ್ರವಾಗಿದೆ.

Ad Widget . Ad Widget .

ಚಾಮರಾಜನಗರಕ್ಕೆ ವಿವಾಹವಾಗಿದ್ದ ತಾಯಿ ಮಮತಾ, ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಈ ವೇಳೆ ಭವಿಷ್ ತನ್ನ ಸೋದರಮಾವನ ಜೊತೆ ಟ್ರಕ್ಟರ್ ನಲ್ಲಿ ಜಮೀನಿಗೆ ತೆರಳಿದ್ದನು.

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಭವಿಷ್ ಟ್ರಕ್ಟರ್ ನಿಂದ ಕೆಳಗೆ ಬಿದ್ದಿದ್ದಾನೆ ಬಳಿಕ ರೊಟಾವೆಲ್ಟರ್ಗೆ ಸಿಲುಕಿ ಅವಘಡ ಸಂಭವಿಸಿದೆ. ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *