ಇಂದು ಬೆಂಗಳೂರಿನಲ್ಲಿ ಬೆಂಗಳೂರು – ಚೆನ್ನೈ ನಡುವೆ ಪಂದ್ಯ/ ಕ್ಯಾಂಟೀನ್ ಆಹಾರ ಪರೀಕ್ಷೆಗೆ ಮುಂದಾದ ಸರ್ಕಾರ

ಸಮಗ್ರ ನ್ಯೂಸ್: ಇಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದ್ದು, ಈ ಹಿನ್ನೆಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಹಾರ ಪರೀಕ್ಷೆ ನಡೆಸಲು ಮುಂದಾಗಿದೆ.

Ad Widget ... ..

ಸ್ಟೇಡಿಯಂ ಕ್ಯಾಂಟೀನ್‍ನಲ್ಲಿರುವ ಆಹಾರ ಸೇವಿಸಿ ವ್ಯಕ್ತಿಯೊಬ್ಬರು ಅಸ್ವಸ್ಥರಾದ ವರದಿ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತಾ ಇಲಾಖೆ ಎಚ್ಚೆತ್ತುಕೊಂಡು ಪರೀಕ್ಷೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‍ಗೆ ಪತ್ರದ ಮೂಲಕ ತಿಳಿಸಿದೆ.

Ad Widget

ಕ್ಯಾಂಟೀನ್‍ನಲ್ಲಿ ಸಿದ್ಧವಾದ ಆಹಾರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದರೆ ಆ ಆಹಾರವನ್ನು ವಿತರಣೆ ಮಾಡಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಆಹಾರ ವಿತರಣೆ ಮಾಡುವ ಕ್ಯಾಂಟೀನ್ ಮುಚ್ಚಿ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ

Leave a Comment

Your email address will not be published. Required fields are marked *