Ad Widget .

ಕಾರವಾರ: ಹೊಳೆಯಲ್ಲಿ ಮುಳುಗಿ ಇಬ್ಬರು ಮೃತ್ಯು

ಸಮಗ್ರ ನ್ಯೂಸ್ : ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

Ad Widget . Ad Widget .

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ಸೂರಜ್ ನಾಯ್ಕ (17), ಪಾರ್ವತಿ ಶಂಕರ ನಾಯ್ಕ (35) ಮೃತರು.

Ad Widget . Ad Widget .

ಮೃತರು ಭಟ್ಕಳದ ಕಂಡೆಕೋಡ್ಲು ನಿವಾಸಿಗಳಾಗಿದ್ದಾರೆ. ಮೃತ ಸೂರಜ್ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾನೆ. 15ಕ್ಕೂ ಹೆಚ್ಚು ಜನ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *