ಹಾಸನ ಬಳಿಕ ರಾಮನಗರದಲ್ಲಿ ಮಹಾ ದುರಂತ|ಈಜಲು ತೆರಳಿದ ಮೂವರು ಮಕ್ಕಳು ನೀರುಪಾಲು

ಸಮಗ್ರ ನ್ಯೂಸ್: ಹಾಸನಸಲ್ಲಿ ಈಜಲು ತೆರಳಿದ ನಾಲ್ವರು ಮಕ್ಕಳು ಮೃತಪಟ್ಟ ಘಟನೆ ನಡೆದಿತ್ತು. ಇದು ಮಾಸುವ ಮುನ್ನವೇ ಮೇ 17ರಂದು ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

Ad Widget ... ..

ಬಂಡೆಯ ಮೇಲಿನ ನೀರಿನ ಹೊಂಡದಲ್ಲಿ ಈಜಲು ಹೋದ ಶಾಬಾಜ್ (14), ಸುಲ್ತಾನ್ (13), ರಿಹಾನ್ ಖಾನ್ (16) ಮೃತಪಟ್ಟಿದ್ದಾರೆ. ಇವರೆಲ್ಲರೂ ರಾಮನಗರ ಟೌನ್‌‌ ನ ಸುಲ್ತಾನ ನಗರದವರು. ಒಟ್ಟು 8 ಯುವಕರ ತಂಡ ನಮಾಜ್ ಮುಗಿಸಿ ಈಜಲು ಹೊಂಡಕ್ಕೆ ಇಳಿದಿದ್ದರು. ಈ ವೇಳೆ ಮೂವರು ನೀರುಪಾಲಾದರೆ, ಐವರು ಸಾವಿನಿಂದ ಬಚಾವ್‌ ಆಗಿದ್ದಾರೆ.

Ad Widget

ಘಟನಾ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Comment

Your email address will not be published. Required fields are marked *