Ad Widget .

ಕವನ; ನಾ ಕಂಡಂತೆ ಕಾಮತರು

ಉಪೇಂದ್ರ ಕಾಮತರು ನಮ್ಮೂರಿನ ಉದ್ದಾರಕರು
ಸರ್ವಜೀವಿಗಳ ಬದುಕಿನ ಚಿಂತಕರು
ಧೈರ್ಯ, ದಾನವಂತ ಮನಸ್ಸುಳ್ಳವರು
ಶ್ರಮಿಕರು ಸಮಾಧಾನದಿ ಸಂತೈಸುವ ಗುಣವುಳ್ಳವರು

Ad Widget . Ad Widget .

ಉಪೇಂದ್ರ ಕಾಮತರು ಭಾನು ಭೂಮಿಗೆ ವಾಣಿ
ಅವರೇ ಬದುಕಿನ ಅಮೃತವರ್ಷಿಣಿ
ಸರ್ವ ಗುಣ ಸಂಪಾದಕರು
ಜನ ಜೀವನ ತುಂಬಿರುವ ದ್ಯೋತಕರು

Ad Widget . Ad Widget .

ಉಪೇಂದ್ರ ಕಾಮತರು ನಮ್ಮೂರಿನ ಪರಿಸರದ ನಂದಾದೀಪ
ನಮ್ಮೆಲ್ಲರ ಜನರಿಗೆ ದಾರಿದೀಪ
ಬೆಳೆಯುತ್ತಿರುವ ಸಿರಿಗಳಿಗೆ ಶಾಶ್ವತ ದೀಪ
ಸಮಾಜವನ್ನು ಬೆಳಗಿಸಿದ ಜ್ಞಾನ ದೀಪ

ಉಪೇಂದ್ರ ಕಾಮತರು ಜೀವನಕ್ಕೆ ಹಣತೆಯಂತೆ ದಾರಿಯಲ್ಲಿ
ವರ್ಣಿಸಲಾಗದ ನಿಸ್ವಾರ್ಥ ಜೀವನದಲ್ಲಿ
ಬದುಕು ನೀಡಿದ ಶಾಲಾ ಸ್ಥಾಪಕ ಅಧ್ಯಕ್ಷರ ನೆನಪಿನಲ್ಲಿ
ನಿಮಗಿದು ನನ್ನ ಶತಕೋಟಿ ನಮನಗಳು

✍️ ಪೂರ್ಣಿಮ ಕಾರಿಂಜ, ಸಹ ಶಿಕ್ಷಕಿ ವಿ. ಅ. ಹಿ. ಪ್ರಾ. ಶಾಲೆ ವಿನೋಬನಗರ

Leave a Comment

Your email address will not be published. Required fields are marked *