Ad Widget .

ಬೆಂಗಳೂರಿನಲ್ಲಿ ಯುವತಿ ಅನುಮಾನಾಸ್ಪದ ಸಾವು: ಕೊಲೆ ಮಾಡಿದ್ದಾರೆಂದು ತಾಯಿ ಆರೋಪ

ಸಮಗ್ರ ನ್ಯೂಸ್: ಹುಬ್ಬಳ್ಳಿ, ಕೊಡಗುವಿನಲ್ಲಿ ನಡೆದ ಯುವತಿಯರ ಹತ್ಯೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ನಡೆದಿದೆ. 21 ವರ್ಷದ ಯುವತಿಯ ಮೃತದೇಹ ಮನೆಯ ಬಾತ್ ರೂಂನಲ್ಲಿ ಇದೀಗ ಪತ್ತೆಯಾಗಿದೆ.

Ad Widget . Ad Widget .

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯ ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುಧ್ಯಾಳ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

Ad Widget . Ad Widget .

ಆದರಡ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳನ್ನು ಜೋಪಾನ ಮಾಡಿದ್ದೆ ಯಾರೋ ಕ್ರೂರವಾಗಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ತಾಯಿ ಸೌಮ್ಯ ಕಣ್ಣೀರು ಹಾಕಿದ್ದಾರೆ. ಆಫೀಸ್‌ನಲ್ಲಿದ್ದ ನನಗೆ ಮಧ್ಯಾಹ್ನ ಫೋನ್‌ ಮಾಡಿದ್ದಳು. ಫ್ರೆಂಡ್ಸ್‌ ಜತೆಗೆ ಇದ್ದೀನಿ ಪಾನಿಪುರಿ ತಿಂದು ಮನೆಗೆ ಹೋಗುತ್ತೇನಿ ಎಂದಿದ್ದಳು. ನಂತರ ಆಫೀಸ್‌ ಮುಗಿಸಿ ಮನೆಗೆ ಬಂದು ನೋಡಿದಾಗ ಮಗಳು ಬಾತ್‌ ರೂಮಿನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಪ್ರತಿದಿನ ಕಾಲೇಜಿನಿಂದ ಮನೆಗೆ ಬಂದ ಕೂಡಲೇ ಸೇಫ್ ಆಗಿ ತಲುಪಿದ್ದಕ್ಕೆ ಮೇಸೆಜ್ ಮಾಡುತ್ತಿದ್ದಳು. ಎಜುಕೇಷನ್ ಸಿಸ್ಟಮ್ ಪ್ರಶ್ನೆ ಮಾಡ್ತಿದ್ದಳು. ಮನೆಯ ಹಿಂಬದಿ ಡೋರ್ ಓಪನ್ ಆಗಿದೆ, ನನ್ನ ಮಗಳ ಮೊಬೈಲ್ ಕಳೆದು ಹೋಗಿದೆ. ನನ್ನ ಮಗಳನ್ನ ಕ್ರೂರವಾಗಿ ಕೊಲೆ ಮಾಡಿದ್ದಾರೆಂದು ತಾಯಿ ಆರೋಪಿಸಿದ್ದಾರೆ.

ಅಮ್ಮನನ್ನು ಚೆನ್ನಾಗಿ ನೋಡ್ಕೋಬೇಕು ಅಂತಿದ್ದಳು. ನಿನ್ನೆ ಸಂಜೆ ಸುಮಾರಿಗೆ ತಮ್ಮ ಬಂದು ಡೋರು ಬಡೆಯುತ್ತಿದ್ದ. ಈ ವೇಳೆ ಬಾಗಿಲು ತೆಗೆದು ನೋಡಿದಾಗ ಬಾತ್ ರೂಂನಲ್ಲಿ ಬಿದ್ದಿದ್ದಳು. ಕೂಡಲೇ ಆಸ್ಪತ್ರೆಗೆ ಕರ್ಕೊಂಡು ಹೋದ್ರೂ ಪ್ರಯೋಜನೆ ಆಗಲಿಲ್ಲ. ಪೊಲೀಸರು ಕೂಡ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಮೂರು ಡೆತ್ ನೋಟ್ ಸಿಕ್ಕಿದೆ ಅಂತಿದ್ದಾರೆ. ಅದರಲ್ಲಿ ಇಂಗ್ಲೀಷ್ ನಲ್ಲಿ ಸಾರಿ ಅಮ್ಮ ಎಂದು ಬರೆದಿದ್ದಾರೆ. ಆದ್ರೆ ನಾವು ಡೆತ್ ನೋಟ್ ನೋಡಿಲ್ಲ, ಪೊಲೀಸರು ತೋರಿಸಿದ್ದಾರೆ ಅಷ್ಟೆ. ಡೆತ್ ನೋಟ್ ಹ್ಯಾಂಡ್ ರೈಟಿಂಗ್ ಮ್ಯಾಚ್ ಆಗ್ತಿಲ್ಲ ಅಂತಿದ್ದಾರೆ ಅದು ನಮಗೆ ಗೊತ್ತಿಲ್ಲ ಎಂದು ಮನೆ ಮಾಲೀಕರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *